'Aarogya Setu' ಆಪ್ ನಲ್ಲಿ ದೋಷ ಕಂಡು ಹಿಡಿದು 1 ಲಕ್ಷ ರೂ. ಬಹುಮಾನ ನಿಮ್ಮದಾಗಿಸಿಕೊಳ್ಳಿ

 ಕರೋನಾ ವೈರಸ್ ಸೋಂಕಿನಿಂದ ಜನರನ್ನು ರಕ್ಷಿಸಲು ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್‌ಗಾಗಿ ಸರ್ಕಾರ ಬಗ್ ಬೌಂಟಿ ಕಾರ್ಯಕ್ರಮ ಬಿಡುಗಡೆಗೊಳಿಸಿದೆ. 

Last Updated : May 27, 2020, 02:44 PM IST
'Aarogya Setu' ಆಪ್ ನಲ್ಲಿ ದೋಷ ಕಂಡು ಹಿಡಿದು 1 ಲಕ್ಷ ರೂ. ಬಹುಮಾನ ನಿಮ್ಮದಾಗಿಸಿಕೊಳ್ಳಿ title=

ನವದೆಹಲಿ: ಕರೋನಾ ವೈರಸ್ ಸೋಂಕಿನಿಂದ ಜನರನ್ನು ರಕ್ಷಿಸಲು ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್‌ಗಾಗಿ ಸರ್ಕಾರ ಬಗ್ ಬೌಂಟಿ ಕಾರ್ಯಕ್ರಮ ಬಿಡುಗಡೆಗೊಳಿಸಿದೆ. ಕೋವಿಡ್ -19 ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್‌ನ ಮೂಲ ಕೋಡ್ ಅನ್ನು ಸದ್ಯ ಎನ್ಐಸಿ ಬಿಡುಗಡೆ ಮಾಡಿದೆ, ಇದರ ಸಹಾಯದಿಂದ ಅಪ್ಲಿಕೇಶನ್‌ನಲ್ಲಿನ ಕೊರತೆಗಳು ಮತ್ತು ನ್ಯೂನತೆಗಳನ್ನು ಕಂಡುಹಿಡಿಯಬಹುದಾಗಿದೆ. ಆರೋಗ್ಯ ಸೇತು ಆ್ಯಪ್‌ನ ಸುರಕ್ಷತೆಯ ಕುರಿತು ಅನೇಕ ತಜ್ಞರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹೀಗಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ದೋಷಗಳು, ನ್ಯೂನತೆಗಳು ಮತ್ತು ಉತ್ತಮ ಸಂಕೇತಗಳನ್ನು ತೋರಿಸುವವರಿಗೆ ಸರ್ಕಾರವು ನಗದು ಬಹುಮಾನವನ್ನು ನೀಡಲಿದೆ.

ಆರೋಗ್ಯ ಸೆತು ಅಪ್ಲಿಕೇಶನ್‌ನ ಆಂಡ್ರಾಯ್ಡ್ ಆವೃತ್ತಿಯ ಮೂಲ ಕೋಡ್ ಅನ್ನು ಸರ್ಕಾರ ಹಂಚಿಕೊಂಡಿದೆ ಮತ್ತು ಸುಮಾರು 98 ಪ್ರತಿಶತ ಬಳಕೆದಾರರು ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೂ ಕೂಡ ಶೀಘ್ರದಲ್ಲೇ ಆರೋಗ್ಯ ಸೇತು ಐಒಎಸ್ ಮತ್ತು ಕೈಯೋಸ್ ಆವೃತ್ತಿಗಳ ಮೂಲ ಕೋಡ್ ಅನ್ನು ಸಹ ಹಂಚಿಕೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಅಪ್ಲಿಕೇಶನ್‌ನ ಆಂಡ್ರಾಯ್ಡ್ ಆವೃತ್ತಿಯ ಮೂಲ ಕೋಡ್ ಗಿಟ್‌ಹಬ್‌ನಲ್ಲಿ ಲೈವ್ ಆಗಿದೆ ಮತ್ತು ಬಗ್-ಬೌಂಟಿ ಪ್ರೋಗ್ರಾಂ ಅನ್ನು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಪ್ರಕಟಿಸಿದೆ. ಈ ಕೋಡ್ ಬಳಸಿ ಸಂಶೋಧಕರು ಅಪ್ಲಿಕೇಶನ್ ಅನ್ನು ಸುಧಾರಿಸಲು ಸಹಾಯ ಮಾಡಲಿದ್ದಾರೆ.

ಅತಿ ದೊಡ್ಡ ಓಪನ್ ಸೋರ್ಸ್ ಆಪ್
ಮುಂದಿನ ಎರಡು ವಾರಗಳಲ್ಲಿ ಐಒಎಸ್ ಆವೃತ್ತಿಯ ಮೂಲ ಕೋಡ್ ಸಹ ಬಿಡುಗಡೆಯಾಗಲಿದೆ ಎಂದು ಎನ್ಐಟಿಐ ಆಯೋಗ್ ತಂಡ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಎನ್‌ಐಟಿಐ ಆಯೋಗ್ ಸಿಇಒ ಅಮಿತಾಭ್ ಕಾಂತ್, ಆರೋಗ್ಯ ಸೇತು ಆ್ಯಪ್‌ನ ಓಪನ್ ಸೋರ್ಸಿಂಗ್ ಸ್ವತಃ ವಿಶಿಷ್ಟವಾಗಿದೆ, ಏಕೆಂದರೆ ಜಗತ್ತಿನ ಯಾವುದೇ ಸರ್ಕಾರಿ ಉತ್ಪನ್ನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಓಪನ್ ಸೋರ್ಸ್ ಆಗಿಲ್ಲ ಎಂದು ಅವರು ಹೇಳಿದ್ದಾರೆ. ಒಟ್ಟಾರೆ ಹೇಳುವುದಾದರೆ, ಆರೋಗ್ಯ ಸೇತು ಆಪ್ ಗೆ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ 115 ದಶಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರಿದ್ದಾರೆ. 140,000 ಕ್ಕೂ ಹೆಚ್ಚು ಬಳಕೆದಾರರನ್ನು ಕರೋನಾ ವೈರಸ್ ವಿರುದ್ಧ ಈ ಅಪ್ಲಿಕೇಶನ್ ಅಲರ್ಟ್ ಜಾರಿಗೊಳಿಸಿದೆ ಎಂದು ಸರ್ಕಾರ ಹೇಳಿದೆ.

ಒಟ್ಟು ಮೂರು ಲಕ್ಷ ರೂಪಾಯಿ ಬಹುಮಾನ
ಈ ಅಪ್ಲಿಕೇಶನ್ ಅನ್ನು ಸುಧಾರಿಸಲು ಬಗ್ ಬೌಂಟಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಮತ್ತು ಅಪ್ಲಿಕೇಶನ್‌ನಲ್ಲಿನ ಯಾವುದೇ ಭದ್ರತಾ ನ್ಯೂನತೆಗಳನ್ನು ಪತ್ತೆಹಚ್ಚಿದವರಿಗೆ 3 ಲಕ್ಷ ರೂ.ಗಳವರೆಗೆ  ನಗದು ಬಹುಮಾನ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ, ಎಲ್ಲಾ ಅರ್ಹತಾ ಸಲ್ಲಿಕೆಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು ಮತ್ತು ಕಂಡುಹಿಡಿಯಲಾಗಿರುವ ದೋಷ ಅಥವಾ ಸುರಕ್ಷತೆಯ ಅಪಾಯದ ಆಧಾರದ ಮೇಲೆ ಅವಾರ್ಡ್ ನೀಡಲಾಗುತ್ತದೆ. ಭಾರತದ ಸಂಶೋಧಕರು ಮಾತ್ರ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಭಾರತದಿಂದ ಹೊರಗಿನ ಸಂಶೋಧಕರು ಒಂದು ವೇಳೆ ತಮ್ಮ ಸಲ್ಲಿಕೆಗಳನ್ನೂ ಕಳುಹಿಸಿದರೆ ಅವರಿಗೆ ಪ್ರಮಾಣಪತ್ರ ಸಿಗಲಿದ್ದು, ಬಹುಮಾನ ಸಿಗುವುದಿಲ್ಲ. ಮೇ 27 ರಿಂದ ಪ್ರಾರಂಭವಾದ ಈ ಕಾರ್ಯಕ್ರಮವು ಜೂನ್ 26 ರವರೆಗೆ ನಡೆಯಲಿದೆ.

Trending News