ಬಿಹಾರದಲ್ಲಿ ಜಾತಿ ಆಧಾರಿತ ಎಣಿಕೆಗೆ ಚಾಲನೆ ನೀಡಲು ಮುಂದಾದ ನಿತೀಶ್ ಕುಮಾರ್

 ಬಿಹಾರದಲ್ಲಿ ಜನಗಣತಿ ಬದಲಾಗಿ ಜಾತಿ ಆಧಾರಿತ ಎಣಿಕೆ ನಡೆಯಲಿದೆ ಎಂದು ನಿತೀಶ್ ಕುಮಾರ್ ಇಂದು ಸಂಜೆ ಜಾತಿ ಗಣತಿ ಕುರಿತ ಸರ್ವಪಕ್ಷ ಸಭೆಯ ನಂತರ ಹೇಳಿದರು.ಇದಕ್ಕಾಗಿ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಜಾತಿ ಲೆಕ್ಕಾಚಾರವನ್ನು ಒಪ್ಪಿಕೊಂಡಿವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

Written by - Zee Kannada News Desk | Last Updated : Jun 1, 2022, 08:00 PM IST
  • ಬಿಹಾರದಲ್ಲಿ ಜನಗಣತಿ ಬದಲಾಗಿ ಜಾತಿ ಆಧಾರಿತ ಎಣಿಕೆ ನಡೆಯಲಿದೆ ಎಂದು ನಿತೀಶ್ ಕುಮಾರ್ ಇಂದು ಸಂಜೆ ಜಾತಿ ಗಣತಿ ಕುರಿತ ಸರ್ವಪಕ್ಷ ಸಭೆಯ ನಂತರ ಹೇಳಿದರು
ಬಿಹಾರದಲ್ಲಿ ಜಾತಿ ಆಧಾರಿತ ಎಣಿಕೆಗೆ ಚಾಲನೆ ನೀಡಲು ಮುಂದಾದ ನಿತೀಶ್ ಕುಮಾರ್  title=
file photo

ನವದೆಹಲಿ:  ಬಿಹಾರದಲ್ಲಿ ಜನಗಣತಿ ಬದಲಾಗಿ ಜಾತಿ ಆಧಾರಿತ ಎಣಿಕೆ ನಡೆಯಲಿದೆ ಎಂದು ನಿತೀಶ್ ಕುಮಾರ್ ಇಂದು ಸಂಜೆ ಜಾತಿ ಗಣತಿ ಕುರಿತ ಸರ್ವಪಕ್ಷ ಸಭೆಯ ನಂತರ ಹೇಳಿದರು.ಇದಕ್ಕಾಗಿ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಜಾತಿ ಲೆಕ್ಕಾಚಾರವನ್ನು ಒಪ್ಪಿಕೊಂಡಿವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Sourav Ganguly New House : 40 ಕೋಟಿ ಕೊಟ್ಟು ಹೊಸ ಬಂಗಲೆ ಖರೀದಿಸಿದ ಗಂಗೂಲಿ!

'ಕಾನೂನು ತೊಡಕುಗಳನ್ನು ತಪ್ಪಿಸಲು ನಾವು ಜಾತಿ ಆಧಾರಿತ ಎಣಿಕೆಯನ್ನು ಪ್ರಸ್ತಾಪಿಸುತ್ತೇವೆ, ಜನಗಣತಿಯನ್ನಲ್ಲ' ಎಂದು ನಿತೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಇದನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟದಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸಲಾಗುವುದು.ಸಮಾಜದ ಪ್ರತಿಯೊಂದು ವರ್ಗವೂ ಸರಿಯಾಗಿ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಕರ್ನಾಟಕ, ಒಡಿಶಾ ಮತ್ತು ತೆಲಂಗಾಣದಂತಹ ರಾಜ್ಯಗಳು ಸಾಮಾಜಿಕ-ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಇದೇ ರೀತಿಯ ಎಣಿಕೆಗಳನ್ನು ನಡೆಸಿವೆ.ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಜಾತಿ ಗಣತಿ ನಡೆಯಿತು, ಆದರೆ ತಾಂತ್ರಿಕ ಆಧಾರದ ಮೇಲೆ ಡೇಟಾವನ್ನು ಬಿಡುಗಡೆ ಮಾಡಲಿಲ್ಲ.

ಇನ್ನೊಂದೆಡೆಗೆ ಬಿಜೆಪಿ ಸರ್ಕಾರವು ಜಾತಿ ಆಧಾರಿತ ಜನಗಣತಿಯನ್ನು ನಡೆಸಲು ನಿರಾಕರಿಸುವ ಮೂಲಕ ಈ ವಿಚಾರವನ್ನು ರಾಜ್ಯಗಳ ಗಣನೆಗೆ ಬಿಟ್ಟಿತು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೊರತಾಗಿ ಯಾವುದೇ ಸಾಮಾಜಿಕ ಗುಂಪಿನ ಮುಖ್ಯಸ್ಥರ ಸಂಖ್ಯೆಯನ್ನು ತೆಗೆದುಕೊಳ್ಳಲು ಕೇಂದ್ರವು ನಿರಾಕರಿಸಿದ ನಂತರ, ನಿತೀಶ್ ಕುಮಾರ್ ಸರ್ಕಾರವು ತನ್ನದೇ ಆದ ಸಮೀಕ್ಷೆಯನ್ನು ಮಾಡಲು ಮುಂದಾಗಿದೆ.

ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ? ರಾಜಕೀಯಕ್ಕೆ ಎಂಟ್ರಿ ಸಾಧ್ಯತೆ..!

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ (ಜೆಡಿಯು) ಮತ್ತು ಬಿಜೆಪಿ ಮೈತ್ರಿಕೂಟದ ಪಾಲುದಾರರಾಗಿದ್ದಾರೆ.ಸರ್ವಪಕ್ಷ ನಿಯೋಗದ ನೇತೃತ್ವದ ನಿತೀಶ್ ಕುಮಾರ್ ಅವರು ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಲು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.ಆರ್‌ಜೆಡಿ ಸೇರಿದಂತೆ ಬಿಹಾರದ ಬಹುತೇಕ ಪಕ್ಷಗಳು ಜಾತಿ ಆಧಾರಿತ ಜನಗಣತಿಗೆ ಕರೆ ನೀಡಿದ್ದು, ಆದರೆ ಬಿಜೆಪಿ ತನ್ನ ಬಿಹಾರ ಘಟಕದ ಬೇಡಿಕೆಗಳು ಮತ್ತು ಕೇಂದ್ರ ಸರ್ಕಾರದ ನಿಲುವಿನ ನಡುವೆ ಸಿಲುಕಿಕೊಂಡಿದೆ.

ಇನ್ನೊಂದೆಡೆಗೆ ಜಾತಿ ಆಧಾರಿತ ಜನಗಣತಿಯನ್ನು ವಿಭಜಿಸುವ ಕಸರತ್ತು ಎಂದು ಕೇಂದ್ರ ಸರ್ಕಾರ ನಂಬಿದೆ.ಆದರೆ ಬಿಹಾರದಲ್ಲಿ ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷವು ಜಾತಿ ಗಣತಿಯು ಸಮಾಜದಲ್ಲಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ಸಮುದಾಯಗಳ ಪರವಾದ ನೀತಿಯನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳುತ್ತಾರೆ.ಇನ್ನೊಂದೆಡೆಗೆ ಈ ವಿಚಾರವಾಗಿ ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಜಾತಿ ಗಣತಿಯು ಆಡಳಿತಾತ್ಮಕವಾಗಿ ತೊಡಕಾಗಿದೆ ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಭಾರತದಲ್ಲಿ ಕೊನೆಯ ಬಾರಿಗೆ ಜಾತಿ ಗಣತಿಯನ್ನು 1931ರಲ್ಲಿ ನಡೆಸಲಾಗಿತ್ತು.ಇದುವರೆಗೂ ಕೂಡ ಆಗಿನ ಗಣತಿಯ ಆಧಾರದ ಮೇಲೆಯೇ ಸರ್ಕಾರದ ನೀತಿಗಳನ್ನು ರೂಪಿಸಲಾಗುತ್ತಿದೆ ಎಂದು ಆರ್ಜೆಡಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

 

 

Trending News