ಇಲ್ಲಿನ 37 ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ .! ಕಾರಣ ಏನು ಗೊತ್ತಾ ?

   ಇಲ್ಲಿನ ಶಾಲೆಗಳಲ್ಲಿ ಶುಕ್ರವಾರ ವಾರದ ರಜೆ ನೀಡುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದೀಗ ಈ ಸಂಪ್ರದಾಯವು ವ್ಯವಸ್ಥೆಯ ವಿರುದ್ದ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Written by - Ranjitha R K | Last Updated : Jul 27, 2022, 11:31 AM IST
  • ಭಾನುವಾರದ ಬದಲು ಶುಕ್ರವಾರ ಶಾಲೆಗೆ ರಜೆ
  • 60 ರಷ್ಟು ಮುಸ್ಲಿಂ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳಿಗೆ ಈ ನಿಯಮವನ್ನು ಅನ್ವಯ
  • ಹಿಂದೂ ಶಿಕ್ಷಕರಿಂದ ಈ ಕ್ರಮಕ್ಕೆ ವಿರೋಧ
ಇಲ್ಲಿನ 37 ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ .! ಕಾರಣ ಏನು ಗೊತ್ತಾ ?  title=
Friday Holiday Schools (file photo)

ಬಿಹಾರ :  ಬಿಹಾರದ ಮುಸ್ಲಿಂ ಬಾಹುಳ್ಯ ಜಿಲ್ಲೆಯ ಕಿಶನ್‌ಗಂಜ್‌ನಲ್ಲಿ 37 ಸರ್ಕಾರಿ ಶಾಲೆಗಳಿದ್ದು, ಇಲ್ಲಿ ವಾರದ ರಜೆಯನ್ನು ಭಾನುವಾರದ ಬದಲು  ಶುಕ್ರವಾರ ನೀಡಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ಭಾನುವಾರ ವಾರದ ರಜೆಯನ್ನು ನೀಡಲಾಗುತ್ತದೆ. ಆದರೆ ಇಲ್ಲಿ ಮಾತ್ರ ಶಾಲೆಗಳಿಗೆ ಶುಕ್ರವಾರ ರಜೆ. ಶುಕ್ರವಾರ  ವಾರದ ರಜೆ ನೀಡಲು ಯಾರು ಅನುಮತಿ ನೀಡಿದ್ದಾರೆ ಎನ್ನುವುದಕ್ಕೆ ಉತ್ತರ  ಶಿಕ್ಷಣ ಇಲಾಖೆಯಾ ಬಳಿಯೂ ಇಲ್ಲ. ಈ ಪ್ರದೇಶದಲ್ಲಿ  6 0 ಶೇ ದಷ್ಟು ಮುಸ್ಲಿಂ ವಿದ್ಯಾರ್ಥಿಗಳಿರುವ ಕಾರಣ ಶಾಲೆಗಳಿಗೆ ಶುಕ್ರವಾರ ರಜೆ ನೀಡುವ ಪದ್ಧತಿ ಜಾರಿಗೆ ಬಂದಿದೆ ಎನ್ನಲಾಗಿದೆ. ಶುಕ್ರವಾರ ರಜೆ ಇರುವ ಹಿನ್ನೆಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವುದು ಸುಲಭವಾಗಲಿದೆ ಎನ್ನಲಾಗಿದೆ.  

ವ್ಯವಸ್ಥೆಯ ವಿರುದ್ದ ಎದ್ದಿದೆ ಪ್ರಶ್ನೆ : 
ಇಲ್ಲಿನ ಶಾಲೆಗಳಲ್ಲಿ ಶುಕ್ರವಾರ ವಾರದ ರಜೆ ನೀಡುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದೀಗ ಈ ಸಂಪ್ರದಾಯವು ವ್ಯವಸ್ಥೆಯ ವಿರುದ್ದ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಿಲ್ಲೆಯ ಐದು ಬ್ಲಾಕ್‌ಗಳ ಒಟ್ಟು 37 ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿದೆ. ಜಿಲ್ಲೆಯ ಪೋಥಿಯಾ ಬ್ಲಾಕ್‌ನಲ್ಲಿ, ಗರಿಷ್ಠ 16 ಶಾಲೆಗಳಿಗೆ  ಶುಕ್ರವಾರ ರಜೆ ನೀಡಿ, ಭಾನುವಾರ ಶಾಲೆಗಳನ್ನು ನಡೆಸಲಾಗುತ್ತದೆ. 

ಇದನ್ನೂ ಓದಿ : Weather Forecast: ಈ ರಾಜ್ಯಗಳಲ್ಲಿ ಮುಂದಿನ 4 ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಅತ್ಯಂತ ಮುಖ್ಯವಾದ ವಿಷಯವೆಂದರೆ ಪೋಥಿಯಾ ಬ್ಲಾಕ್ ಏಷ್ಯಾದಲ್ಲಿ ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿರುವ ಬ್ಲಾಕ್ ಆಗಿದೆ. ಮತ್ತೊಂದೆಡೆ, ಮೊದಲಿನಿಂದಲೂ ಈ ಜಿಲ್ಲೆಯ ಶಾಲೆಗೆ ಶುಕ್ರವಾರದ ದಿನವೇ ರಜೆ ನೀಡಲಾಗುತ್ತಿದೆ ಎಂದು ಕರ್ಬಲಾ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಮೊಹಮ್ಮದ್ ವಾಸಿಂ  ತಿಳಿಸಿದ್ದಾರೆ. ಆದರೆ ಈ ಬಗ್ಗೆ  ಸರ್ಕಾರದ ಆದೇಶವಿದೆಯೇ ಇಲ್ಲವೇ ಎಂಬುದರ ಅಬ್ಗ್ಗೆ ಅವರಿಗೂ ಮಾಹಿತಿ ಇಲ್ಲ. 

ಇದೀಗ ಭಾನುವಾರದ ಬದಲು ಶುಕ್ರವಾರ ರಜೆ ನೀಡುತ್ತಿರುವ ಕ್ರಮಕ್ಕೆ ಹಿಂದೂ ಸಮಾಜದ ಶಿಕ್ಷಕರು ಹಾಗೂ ಶಿಕ್ಷಕ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರ ಶಾಲೆಗಳು ಮುಚ್ಚಿರುವುದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎನ್ನುವುದು ಅವರ ಮಾತು. ಭಾನುವಾರ ಶಾಲೆಗೆ ಹೋಗುವ ಶಿಕ್ಷಕರು ತಮ್ಮ ಕುಟುಂಬ ಮತ್ತು ಮಕ್ಕಳ ಜೊತೆ  ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : Sonia Gandhi : ಮೂರನೇ ಸುತ್ತಿನ ವಿಚಾರಣೆಗೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News