ಫರ್ಟಿಲಿಟಿಯೊಂದಿಗೆ ಥೈರಾಯ್ಡ್ ಸಂಬಂಧಿ ಸಮಸ್ಯೆಗಳ ಅಪಾಯ ತಗ್ಗಿಸಲು ಯಾವ ಕ್ರಮ ಕೈಗೊಳ್ಳಬೇಕು?

Thyroid Problem : ಥೈರಾಯ್ಡ್ ಅಪಸಾಮಾನ್ಯ ಕ್ರಿಯೆಯು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಮಾನ್ಯ ಹಾರ್ಮೋನ್ ಗಳ ಪರಿಸ್ಥಿತಿಗಳಲ್ಲಿ ಒಂದಾಗಿದೆ. 

Written by - Chetana Devarmani | Last Updated : Jan 31, 2023, 11:40 AM IST
  • ಫರ್ಟಿಲಿಟಿಯೊಂದಿಗೆ ಥೈರಾಯ್ಡ್ ಸಂಬಂಧಿ ಸಮಸ್ಯೆಯ ಭಯವೇ?
  • ಈ ಅಪಾಯ ತಗ್ಗಿಸಲು ಯಾವ ಕ್ರಮ ಕೈಗೊಳ್ಳಬೇಕು?
ಫರ್ಟಿಲಿಟಿಯೊಂದಿಗೆ ಥೈರಾಯ್ಡ್ ಸಂಬಂಧಿ ಸಮಸ್ಯೆಗಳ ಅಪಾಯ ತಗ್ಗಿಸಲು ಯಾವ ಕ್ರಮ ಕೈಗೊಳ್ಳಬೇಕು? title=
Thyroid Problem

Thyroid Problem : ಥೈರಾಯ್ಡ್ ಅಪಸಾಮಾನ್ಯ ಕ್ರಿಯೆಯು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಮಾನ್ಯ ಹಾರ್ಮೋನ್ ಗಳ ಪರಿಸ್ಥಿತಿಗಳಲ್ಲಿ ಒಂದಾಗಿದೆ. ಈ ಥೈರಾಯ್ಡ್ ಅಪಸಾಮಾನ್ಯ ಕ್ರಿಯೆ ಮತ್ತು ಗಂಡು ಹಾಗೂ ಹೆಣ್ಣು ಇಬ್ಬರಲ್ಲಿಯೂ ಸಂತಾನೋತ್ಪತ್ತಿ ಸಾಮರ್ಥ್ಯದ ನಡುವೆ ಸಂಬಂಧವಿದೆ ಎಂಬುದನ್ನು ವಿವಿಧ ಅಧ್ಯಯನಗಳು ದೃಢಪಡಿಸಿವೆ. ಅನಿಯಮಿತ ಮುಟ್ಟಿನ ಚಕ್ರಗಳು, ಸಂತಾನಹೀನತೆ (ಗರ್ಭ ಧರಿಸಲು ತೊಂದರೆ), ಗರ್ಭಪಾತ, ಗರ್ಭಾವಸ್ಥೆಯ ತೊಡಕುಗಳು ಮತ್ತು ಹುಟ್ಟಲಿರುವ ಮಗುವಿನಲ್ಲಿ ರಚನಾತ್ಮಕ ಮತ್ತು ಕ್ರಿಯಾತ್ಮಕ ಅಸಾಮರ್ಥ್ಯಗಳ ಅಪಾಯವನ್ನು ಹೈಪೋಥೈರಾಯ್ಡಿಸಂ ಹೆಚ್ಚಿಸುತ್ತದೆ. ಈ ಸಮಸ್ಯೆ ಆಗಾಗ ಉಂಟಾಗುತ್ತದೆ. ವಿವರಿಸಲಾಗದ ಬಂಜೆತನಕ್ಕೆ ಗುರುತಿಸಲಾಗದ ಕೊಡುಗೆ ನೀಡುವ ಅಂಶವೂ ಆಗಿದೆ. ಥೈರಾಯ್ಡ್ ಅಸ್ವಸ್ಥತೆಯಿಂದ ಹಾರ್ಮೋನ್ ಸ್ಥಿತಿ ಏರುಪೇರಾಗಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಮೇಲೆ ಆಗಾಗ ಪರಿಣಾಮ ಬೀರುತ್ತದೆ. ಫಲವತ್ತತೆಯನ್ನು ದುರ್ಬಲಗೊಳಿಸುವ ಥೈರಾಯ್ಡ್ ಪರಿಸ್ಥಿತಿಗಳನ್ನು ವರ್ಗೀಕರಿಸಲು ಬಳಸಬಹುದಾದ ಮೂಲ ವರ್ಗಗಳು ಹೀಗಿವೆ:

1. ಥೈರಾಯ್ಡ್ ಹಾರ್ಮೋನ್ ಉತ್ಪಾದನೆ ಕುಸಿದು ಹೈಪೋಥೈರಾಯ್ಡಿಸಮ್ ಎಂಬ ಅಸ್ವಸ್ಥತೆ ಉಂಟಾಗುತ್ತದೆ. ರೋಗಿಗಳಲ್ಲಿ ಆಲಸ್ಯ, ಬಿಸಿ ಅಥವಾ ತಂಪಿಗೆ ಸಹಿಷ್ಣುತೆ ಕಡಿಮೆಯಾಗುವುದು, ತೂಕದಲ್ಲಿ ವೃದ್ಧಿ ಮುಂತಾದವು ಇದರ ರೋಗಲಕ್ಷಣಗಳಾಗಿರುತ್ತವೆ. 

2. ಹೈಪರ್ ಥೈರಾಯ್ಡಿಸಮ್: ಇದನ್ನು ಥೈರಾಯ್ಡ್ ಗ್ರಂಥಿಯ ಅತಿಯಾದ ಕ್ರಿಯಾಶೀಲತೆ ಎಂದೂ ಕರೆಯುವರು. ಥೈರಾಯ್ಡ್ ಗ್ರಂಥಿಯು ಹೆಚ್ಚು ಹಾರ್ಮೋನ್ ಉತ್ಪಾದಿಸಿದಾಗ ಸಂಭವಿಸುತ್ತದೆ, ಇದು ದೇಹದ ಚಯಾಪಚಯವನ್ನು ವೇಗಗೊಳಿಸುತ್ತದೆ, ತೂಕ ನಷ್ಟ ಮತ್ತು ಅನಿಯಮಿತ ಅಥವಾ ತ್ವರಿತ ಹೃದಯ ಬಡಿತದಂತಹ ಹಲವಾರು ರೋಗಲಕ್ಷಣಗಳಲ್ಲಿ ವ್ಯಕ್ತಗೊಳ್ಳುತ್ತದೆ.

ಇದನ್ನೂ ಓದಿ : ಈ ಹಣ್ಣನ್ನು ದಿನಕ್ಕೆ ಒಂದು ಬಾರಿ ತಿಂದರೆ ಸಾಕು, ಕರಗುವುದು ಕೊಲೆಸ್ಟ್ರಾಲ್

3. ಸ್ವಯಂನಿರೋಧಕ ಥೈರಾಯ್ಡ್ ಕಾಯಿಲೆ (ಸಾಮಾನ್ಯ ಥೈರಾಯ್ಡ್ ಕಾರ್ಯದೊಂದಿಗೆ):- ಯಾವುದೇ ಔಷಧಿಗಳನ್ನು ಆರಂಭಿಸುವ ಮುನ್ನ ಸಂತಾನೋತ್ಪತ್ತಿ ಅಂತಃಸ್ರಾವಶಾಸ್ತ್ರಜ್ಞ (ಎಂಡೋಕ್ರೈನಾಲಜಿಸ್ಟ್) ರಿಂದ ಸರಿಯಾದ ಮೌಲ್ಯಮಾಪನ ಮಾಡಿಸಲು ಸೂಚಿಸಲಾಗುತ್ತದೆ.

ಜೀವನಶೈಲಿಯ ಮಾರ್ಪಾಡುಗಳು ಥೈರಾಯ್ಡ್ ಮತ್ತು ಫಲವತ್ತತೆಯ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

1.ಆರಂಭಿಕ ಪತ್ತೆ: ಕುತ್ತಿಗೆ ಭಾಗದಲ್ಲಿರುವ ಥೈರಾಯ್ಡ್ ಗ್ರಂಥಿಯನ್ನು ಪರೀಕ್ಷಿಸುವ ಮೂಲಕ ಥೈರಾಯ್ಡ್ ತಪಾಸಣೆಯನ್ನು ಮಾಡಲಾಗುತ್ತದೆ. ಯಾವುದೇ ಸಂಭಾವ್ಯ ಹಿಗ್ಗುವಿಕೆ ಅಥವಾ ಗಡ್ಡೆಯ ಬೆಳವಣಿಗೆ ಇದೆಯೇ ಎಂದು ಮೌಲ್ಯಮಾಪನ ಮಾಡುವುದು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

2.ಅತಿಯಾದ ವ್ಯಾಯಾಮ ಬೇಡ; ಥೈರಾಯ್ಡ್ ರೋಗಲಕ್ಷಣಗಳನ್ನು ಅಲ್ಪ ಪ್ರಮಾಣದಲ್ಲಿ ಅನುಭವಿಸುತ್ತಿರುವ ವ್ಯಕ್ತಿಗಳು ತೀವ್ರವಾದ ಯಾವುದೇ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳದಂತೆ ಸಲಹೆ ನೀಡಲಾಗುತ್ತದೆ. ಥೈರಾಯ್ಡ್ ರೋಗಿಯು ದೀರ್ಘಾವಧಿಯ ಓಟಗಳು ಮತ್ತು ಸೈಕಲ್ ಪ್ರಯಾಣದಂತಹ ಶ್ರಮದಾಯಕ ವ್ಯಾಯಾಮಗಳಿಂದ ದೂರವಿರಬೇಕು.

ಇದನ್ನೂ ಓದಿ : ವಿಷಕಾರಿ ಹಾವು ಕಚ್ಚಿದಾಗ ಮರೆತೂ ಈ ತಪ್ಪುಗಳನ್ನು ಮಾಡ್ಬೇಡಿ

3.ಪ್ರಮುಖ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಸೇವಿಸಿ; ಥೈರಾಯ್ಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು, ಆಹಾರ ಸೇವನೆಯ ಬಗ್ಗೆ ಗಮನ ಹರಿಸಬೇಕು. ಸೇವಿಸುತ್ತಿರುವ ಆಹಾರದ ಪೌಷ್ಟಿಕಾಂಶ ಮೌಲ್ಯದ ಬಗ್ಗೆ ತಿಳಿದಿರಬೇಕು.

ಅಯೋಡಿನ್: ಥೈರಾಯ್ಡ್ ಹಾರ್ಮೋನ್ ಸಂಶ್ಲೇಷಣೆಗೆ ಇದು ಅತ್ಯಗತ್ಯ. ಹೈಪೋಥೈರಾಯ್ಡಿಸಮ್ ಬಾಧಿಸುತ್ತಿದ್ದರೆ ಇದೇ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಬಹುದು. ನಾವು ಅಡುಗೆಯಲ್ಲಿ ಬಳಸುವ ಸಾಮಾನ್ಯ ಉಪ್ಪಿನಲ್ಲಿ ಅಯೋಡಿನ್ ಇರುತ್ತದೆ.

ಸೆಲೆನಿಯಮ್: ಸೆಲೆನಿಯಮ್ ಅಂಶವು ಅಧಿಕವಾಗಿರುವ ಮೊಟ್ಟೆ, ಬಾದಾಮಿ, ಟ್ಯೂನ, ಇತ್ಯಾದಿ ಆಹಾರಗಳನ್ನು ತಿನ್ನಲು ಪ್ರಯತ್ನಿಸಿ. ಉತ್ಕರ್ಷಣ ನಿರೋಧಕ ಗುಣಗಳಿಗೆ ಹೆಸರಾಗಿರುವ ಸೆಲೆನಿಯಮ್ ಅನ್ನು ಸೂಚಿತ ಪ್ರಮಾಣದಲ್ಲಿ ಸೇವಿಸಬಹುದು.

ಇದನ್ನೂ ಓದಿ : Raw Papaya : ಈ ರೋಗವನ್ನು ಬುಡಸಮೇತ ನಿವಾರಿಸುತ್ತೆ ಹಸಿ ಪಪ್ಪಾಯಿ, ಈ ರೀತಿ ಸೇವಿಸಿ

ಸತುವು: ಸಾಮಾನ್ಯ ವ್ಯಕ್ತಿಯು ತನ್ನ ಆಹಾರಗಳಿಂದ ಅನುಪಾತದ ಪ್ರಮಾಣದಲ್ಲಿ ಸತುವನ್ನು ಹೀರಿಕೊಳ್ಳಬೇಕಾಗುತ್ತದೆ; ಬಾಹ್ಯ ಮೂಲಗಳಿಂದ ಸತುವನ್ನು ತೆಗೆದುಕೊಳ್ಳುವ ಅಗತ್ಯ ವಿರಳವಾಗಿರುತ್ತದೆ. ಸತುವು ಹೊಂದಿರುವ ಆಹಾರಗಳಲ್ಲಿ ಧಾನ್ಯಗಳು, ಗೋಮಾಂಸ, ಕಡಲೆ, ಬೀಜಗಳು, ಕಾಳುಗಳು, ಹಾಲಿನ ಉತ್ಪನ್ನಗಳು, ಮೊಟ್ಟೆಗಳು ಸೇರಿವೆ.

ಥೈರಾಯ್ಡ್ ಅಸ್ವಸ್ಥತೆಗಳ ವಿರುದ್ಧದ ಹೋರಾಟದಲ್ಲಿ ಆರಂಭಿಕ ರೋಗನಿರ್ಣಯ ಮತ್ತು ಗುರುತಿಸುವಿಕೆ ನಿರ್ಣಾಯಕವಾಗಿದೆ, ನಾವು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು, ಉತ್ತಮ ನಡವಳಿಕೆಗಳನ್ನು ಬೆಳೆಸಿಕೊಳ್ಳಿ ಮತ್ತು ಅತಿಯಾದ ಮದ್ಯಪಾನ, ಧೂಮಪಾನ ಮಾಡಬೇಡಿ. ಅಪರ್ಯಾಪ್ತ ಆಹಾರಗಳನ್ನು ಸೇವಿಸಬೇಡಿ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ.

- ಡಾ. ರುಬಿನಾ ಪಂಡಿತ್, ಫರ್ಟಿಲಿಟಿ ಕನ್ಸಲ್ಟೆಂಟ್, ನೋವಾ ಐವಿಎಫ್ ಫರ್ಟಿಲಿಟಿ, ಬಸವೇಶ್ವರ ನಗರ, ಬೆಂಗಳೂರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News