ಹಲ್ಲುಗಳ ಹಳದಿ ಕಲೆ ಮತ್ತು ಬಾಯಿ ದುರ್ವಾಸನೆ ಹೋಗಲಾಡಿಸಲು ಈ ಪುಡಿ ಬಳಸಿ

ನಿಮ್ಮ ಮನೆಯಲ್ಲಿ ನಿತ್ಯ ಮಸಾಲೆಯಾಗಿ ಬಳಸುವ ಈ ಪದಾರ್ಥದಿಂದ ಹಳದಿ ಹಲ್ಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.   

Written by - Ranjitha R K | Last Updated : Nov 22, 2023, 02:15 PM IST
  • ಹಳದಿ ಹಲ್ಲುಗಳ ಸಮಸ್ಯೆಯನ್ನು ಬಹಳ ಮಂದಿ ಎದುರಿಸುತ್ತಿರುತ್ತಾರೆ.
  • ಪ್ರತಿನಿತ್ಯ ಹಲ್ಲುಜ್ಜಿದರೂ ಹಲವು ಬಾರಿ ಹಳದಿ ಸಮಸ್ಯೆ ಉಂಟಾಗುತ್ತದೆ.
  • ಹಳದಿ ಹಲ್ಲುಗಳು ದಂತ ಕುಳಿಗೆ ಕೂಡಾ ಕಾರಣವಾಗಬಹುದು.
ಹಲ್ಲುಗಳ ಹಳದಿ ಕಲೆ ಮತ್ತು ಬಾಯಿ ದುರ್ವಾಸನೆ ಹೋಗಲಾಡಿಸಲು ಈ ಪುಡಿ ಬಳಸಿ  title=

ಬೆಂಗಳೂರು : ಹಲ್ಲಿನ ಮೇಲೆ ಹಳದಿ ಕಲೆ ಅಥವಾ ಹಳದಿ ಹಲ್ಲುಗಳ ಸಮಸ್ಯೆಯನ್ನು ಬಹಳ ಮಂದಿ ಎದುರಿಸುತ್ತಿರುತ್ತಾರೆ.  ಪ್ರತಿನಿತ್ಯ ಹಲ್ಲುಜ್ಜಿದರೂ ಹಲವು ಬಾರಿ ಹಳದಿ ಸಮಸ್ಯೆ ಉಂಟಾಗುತ್ತದೆ. ಹಳದಿ ಹಲ್ಲುಗಳು ನೋಡಲು ಅಸಹ್ಯವಾಗಿರುವುದು ಮಾತ್ರವಲ್ಲದೆ ಬಾಯಿಯ ದುರ್ವಾಸನೆಗೂ ಕಾರಣವಾಗುತ್ತವೆ. ಹಳದಿ ಹಲ್ಲುಗಳು ದಂತ ಕುಳಿಗೆ ಕೂಡಾ ಕಾರಣವಾಗಬಹುದು.  ಹಳದಿ ಹಲ್ಲುಗಳನ್ನು ಬಿಳುಪುಗೊಳಿಸುವ ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ  ನಾವಿಲ್ಲಿ ಹೇಳಲಿದ್ದೇವೆ. ಇದಕ್ಕಾಗಿ ದೊಡ ಮಟ್ಟದ ಖರ್ಚು ಮಾಡುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ನಿತ್ಯ ಮಸಾಲೆಯಾಗಿ ಬಳಸುವ ಈ ಪದಾರ್ಥದಿಂದ ಹಳದಿ ಹಲ್ಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು. ನಾವಿಲ್ಲಿ ಹೇಳುತ್ತಿರುವುದು ಅರಿಶಿನದ ಬಗ್ಗೆ. ಹಾಗಾದರೆ ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಅರಿಶಿನವನ್ನು ಹೇಗೆ ಬಳಸಬೇಕು ನೋಡೋಣ.

ಹಳದಿ ಹಲ್ಲುಗಳಿಗೆ ಅರಿಶಿನ : 
ಅರಿಶಿನವು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದು ಅನೇಕ ಹಲ್ಲಿನ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಪ್ಲೇಕ್-ನಿಯಂತ್ರಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಹಲ್ಲುಗಳಲ್ಲಿ ಕಚ್ಚಿ ಕುಳಿತಿರುವ ಪ್ಲೇಕ್ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಅರಿಶಿನ ಆಂಟಿ-ಆಕ್ಸಿಡೆಂಟ್, ಆಂಟಿ-ಸೆಪ್ಟಿಕ್ ಮತ್ತು ಆಂಟಿ ಅಲರ್ಜಿ ಗುಣಲಕ್ಷಣಗಳನ್ನು ಹೊಂದಿದ್ದು, ಹಲ್ಲುಗಳನ್ನು ಆರೋಗ್ಯಕರವಾಗಿಡಲು ಉಪಯುಕ್ತವಾಗಿದೆ . 

ಇದನ್ನೂ ಓದಿ : 35 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತೂಕ ಇಳಿಸಲು ಸಹಾಯ ಮಾಡುವುದು ಈ ಮ್ಯಾಜಿಕ್ ಸೀಡ್

ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು, ಅರಿಶಿನವನ್ನು ಹಾಗೆಯೇ ತೆಗೆದುಕೊಂಡು ಅದನ್ನು ಬ್ರಷ್ ಮೇಲೆ ಹಾಕಿ ಹಲ್ಲುಜ್ಜಲು ಆರಂಭಿಸಿ. ನೀವು ಅರಿಶಿನ ಟೂತ್ಪೇಸ್ಟ್ ಅನ್ನು ಸಹ ಮಾಡಬಹುದು. ಇದಕ್ಕಾಗಿ, ಅರಿಶಿನವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಸಾಮಾನ್ಯ ಪೇಸ್ಟ್‌ನಂತೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ.

ತೆಂಗಿನ ಎಣ್ಣೆಯೊಂದಿಗೆ ಅರಿಶಿನ :
ತೆಂಗಿನ ಎಣ್ಣೆಯೊಂದಿಗೆ ಅರಿಶಿನವನ್ನು ಬೆರೆಸಿ ಹಲ್ಲುಗಳನ್ನು ಸ್ವಚ್ಛಗೊಳಿಸಬಹುದು. ಈ ಮೂಲಕ ಹಲ್ಲಿನ ಹಳದಿ ಕಲೆಗಳನ್ನು ತೆಗೆದು ಹಾಕುವುದು ಸಾಧ್ಯವಾಗುವುದಲ್ಲದೆ, ಬಾಯಿಯ ದುರ್ವಾಸನೆಯನ್ನು ಕೂಡಾ  ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಅರಿಶಿನವನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದು ಕೂಡಾ ಪ್ರಯೋಜನಕಾರಿ.

ಇದನ್ನೂ ಓದಿ : ಹೈ ಬಿಪಿಯನ್ನು ಕ್ಷಣಾರ್ಧದಲ್ಲಿ ಕಂಟ್ರೋಲ್ ಮಾಡಬಲ್ಲ ಟಾಪ್ 10 ಆರೋಗ್ಯಕರ ಆಹಾರಗಳಿವು

ಉಪ್ಪು ಮತ್ತು ಅರಶಿನ : 
ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು, ಉಪ್ಪು ಮತ್ತು ಅರಿಶಿನ ಮಿಶ್ರಣವನ್ನು  ಬಳಸಬಹುದು. ಉಪ್ಪು ಮತ್ತು ಅರಿಶಿನ ಒಟ್ಟಿಗೆ ಹಲ್ಲುಗಳ ಮೇಲೆ ತ್ವರಿತ ಪರಿಣಾಮ ಬೀರುತ್ತದೆ. ಹಲ್ಲುಗಳ ಮೇಲಿನ ಪ್ಲೇಕ್ ಅನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News