ನೀವೂ ಮಕ್ಕಳಿಗೆ ಈ ಆಹಾರ ನೀಡುತ್ತಿದ್ದರೆ ತಕ್ಷಣ ನಿಲ್ಲಿಸಿ ಬಿಡಿ ! ಹೆಚ್ಚುವುದು ಕಿಡ್ನಿ ಸ್ಟೋನ್ ಅಪಾಯ

ಮೂತ್ರಪಿಂಡದಲ್ಲಿ ರೂಪುಗೊಂಡ ಕಲ್ಲು ಖನಿಜಗಳು ಮತ್ತು ಲವಣಗಳ ಸಂಗ್ರಹವಾದ ರೂಪವಾಗಿದೆ. ಇದು ಕೆಲವೊಮ್ಮೆ ನಮ್ಮ ದೇಹದ ಮೂತ್ರದ ಮಾರ್ಗವನ್ನು ತಡೆಯಲು ಪ್ರಾರಂಭಿಸುತ್ತದೆ.

Written by - Ranjitha R K | Last Updated : Jul 12, 2023, 10:36 AM IST
  • ಕಿಡ್ನಿ ಸ್ಟೋನ್ ಖನಿಜಗಳು ಮತ್ತು ಲವಣಗಳ ಸಂಗ್ರಹವಾದ ರೂಪ
  • ಎಲ್ಲಾ ವಯಸ್ಸಿನವರಲ್ಲಿಯೂ ಈ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ.
  • ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ ಈ ಸಮಸ್ಯೆ
ನೀವೂ ಮಕ್ಕಳಿಗೆ ಈ ಆಹಾರ ನೀಡುತ್ತಿದ್ದರೆ ತಕ್ಷಣ ನಿಲ್ಲಿಸಿ ಬಿಡಿ !  ಹೆಚ್ಚುವುದು ಕಿಡ್ನಿ ಸ್ಟೋನ್ ಅಪಾಯ title=

ಬೆಂಗಳೂರು : ಆ್ಯಂಟಿಬಯೋಟಿಕ್ಸ್, ಅಲ್ಟ್ರಾ-ಪ್ರೊಸೆಸ್ಡ್ ಫುಡ್ ಮತ್ತು ಬಿಸಿ ತಾಪಮಾನದಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಹದಿಹರೆಯದವರು ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಸಂಶೋಧನೆಯಲ್ಲಿ ಇದು ಬಹಿರಂಗವಾಗಿದೆ. 30 ವರ್ಷಗಳ ಹಿಂದೆ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ದೊಡ್ಡವರ ಕಾಯಿಲೆ ಎಂದು ಹೇಳಲಾಗುತ್ತಿತ್ತು.  ಆದರೆ ಈಗ ಎಲ್ಲಾ ವಯಸ್ಸಿನವರಲ್ಲಿಯೂ ಈ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. 

ಹೆಚ್ಚುತ್ತಿದೆ ಕಿಡ್ನಿ ಸ್ಟೋನ್ ಅಪಾಯ : 

ಮೂತ್ರಪಿಂಡದಲ್ಲಿ ರೂಪುಗೊಂಡ ಕಲ್ಲು ಖನಿಜಗಳು ಮತ್ತು ಲವಣಗಳ ಸಂಗ್ರಹವಾದ ರೂಪವಾಗಿದೆ. ಇದು ಕೆಲವೊಮ್ಮೆ ನಮ್ಮ ದೇಹದ ಮೂತ್ರದ ಮಾರ್ಗವನ್ನು ತಡೆಯಲು ಪ್ರಾರಂಭಿಸುತ್ತದೆ. ಅಂಕಿಅಂಶಗಳ ಪ್ರಕಾರ ಈ ಸಮಸ್ಯೆಯು ವಿಶೇಷವಾಗಿ ಹದಿಹರೆಯದ ಹುಡುಗಿಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್, ಆ್ಯಂಟಿಬಯೋಟಿಕ್ಸ್ ಮತ್ತು ತಾಪಮಾನ ಹೆಚ್ಚಳದ ಬಳಕೆಯಿಂದ ದೇಹದಲ್ಲಿನ ನಿರ್ಜಲೀಕರಣದಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.  

ಇದನ್ನೂ ಓದಿ : ಅಡುಗೆಗೆ ಮಾತ್ರವಲ್ಲ… ದಟ್ಟವಾದ, ಗಾಢ ಕಪ್ಪು, ಸಮೃದ್ಧ-ಉದ್ದವಾಗಿ ಕೂದಲು ಬೆಳೆಯಲು ಬಳಸಿ ಶುಂಠಿ ಹೇರ್ ಪ್ಯಾಕ್!

ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯಡ ಜೊತೆಗೂ ನಂಟು : 
ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹಳದಿ ಬಣ್ಣದ  ಮೆಟಬಾಲಿಕ್ ಡಿಸ್ ಆರ್ಡರ್ ಆಗಿದೆ. ಇದನ್ನು ನೆಫ್ರೋಲಿಥಿಯಾಸಿಸ್ ಎಂದೂ ಕರೆಯುತ್ತಾರೆ. ಇದರಲ್ಲಿ, ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ರಂಜಕದಂತಹ ಖನಿಜಗಳು ಮೂತ್ರದಲ್ಲಿ ಸಂಗ್ರಹವಾಗುತ್ತವೆ. ನಂತರ ಇದು ಹಳದಿ ಬಣ್ಣದ  ಘನ ರೂಪವನ್ನು ಪಡೆಯುತ್ತವೆ. ಕೆಲವೊಮ್ಮೆ ಅವು ಮರಳಿನಿಂದ ಮಾಡಿದ ಸಣ್ಣ ಚೆಂಡಿನ ಗಾತ್ರ ಅಥವಾ ಗಾಲ್ಫ್ ಚೆಂಡಿನ ಗಾತ್ರದಲ್ಲಿರುತ್ತವೆ. ಕೆಲವು ಸಂದರ್ಭಗಳಲ್ಲಿ, ಈ ಗಟ್ಟಿಯಾದ ರಚನೆಯು ಮೂತ್ರನಾಳದ ಮೂಲಕ ಹಾದುಹೋಗುತ್ತದೆ. ಆದರೆ ಅನೇಕ ಬಾರಿ ಅದು ಮೂತ್ರನಾಳದಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದಾಗಿ ರೋಗಿಯು ತೀವ್ರವಾದ ನೋವು ಮತ್ತು ರಕ್ತಸ್ರಾವದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮಕ್ಕಳು ಹೆಚ್ಚು ಎನರ್ಜಿ ಡ್ರಿಂಕ್ಸ್‌ಗಳನ್ನು ಕುಡಿಯುವುದು ಅಪಾಯಕಾರಿ : 
ಚಿಪ್ಸ್, ಎನರ್ಜಿ ಡ್ರಿಂಕ್ಸ್ ಮತ್ತು  ರೆಡಿ ಆಹಾರವು ದೇಹದಲ್ಲಿ ಹೆಚ್ಚುವರಿ ಖನಿಜ ಲವಣಗಳು ಶೇಖರಣೆಯಾಗಲು ಕಾರಣವಾಗುತ್ತದೆ. ಇದು ಕಿಡ್ನಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ. ಮಕ್ಕಳು ಕಡಿಮೆ ನೀರು ಕುಡಿಯುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಫ್ರಕ್ಟೋಸ್ ಕುಡಿಯುವುದು ವಿಶೇಷವಾಗಿ ಹಾನಿಕಾರಕವಾಗಿದೆ.

ಇದನ್ನೂ ಓದಿ : Diabetes Remedies: ಬೇವು, ತುಳಸಿ, ಈರುಳ್ಳಿ, ಆಮ್ಲಾ.. ಒಂದೇ ದಿನದಲ್ಲಿ ಮಧುಮೇಹ ಕಡಿಮೆ ಮಾಡುತ್ತೆ ಈ ಮನೆಮದ್ದು.!

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News