Spinach Side Effects: ಪಾಲಕ್ ಸೇವಿಸುವ ಮುನ್ನ ಅದರ ಅಡ್ಡಪರಿಣಾಮಗಳು ತಿಳಿದಿರಲಿ

ಪ್ರತಿದಿನ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ಪೋಷಕಾಂಶಗಳು ಸಂಪೂರ್ಣವಾಗಿ ಹೀರಲ್ಪಡುವುದನ್ನು ತಡೆಯುತ್ತದೆ.

Written by - Ranjitha R K | Last Updated : Nov 11, 2021, 09:19 PM IST
  • ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ.
  • ಮಿತಿಮೀರಿದ ಸೇವನೆಯು ಹಾನಿಯನ್ನುಂಟುಮಾಡುತ್ತದೆ.
  • ಇದು ಅತಿಸಾರ ಮತ್ತು ಜ್ವರಕ್ಕೂ ಕಾರಣವಾಗಬಹುದು
Spinach Side Effects:  ಪಾಲಕ್ ಸೇವಿಸುವ ಮುನ್ನ ಅದರ ಅಡ್ಡಪರಿಣಾಮಗಳು ತಿಳಿದಿರಲಿ   title=
Spinach Side Effects (file photo)

ನವದೆಹಲಿ :  ಪಾಲಕ್ ಸೊಪ್ಪನ್ನು (Spinach) ತಿನ್ನುವುದು ತುಂಬಾ ಪ್ರಯೋಜನಕಾರಿ. ಆದರೆ ಇದನ್ನು ಪ್ರತಿದಿನ ತಿನ್ನುವುದರಿಂದ ಕೆಲವು ಅನಾನುಕೂಲತೆಗಳಿವೆ (Side Effects of Spinach). ಪಾಲಕ್ ಸೊಪ್ಪು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಐರನ್, ಫೋಲೇಟ್ ಮತ್ತು ಪೊಟ್ಯಾಸಿಯಮ್ ಜೊತೆಗೆ ಫೈಬರ್, ಪ್ಯೂರಿನ್ ಮತ್ತು ಆಕ್ಸಲಿಕ್ ಆಮ್ಲವೂ ಇದೆ. ಆದರೆ  ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಇದರ ಸೇವನೆಯು ಪ್ರಯೋಜನಕಾರಿಯಾಗಿದೆ. ಪಾಲಕ್ ಸೊಪ್ಪನ್ನು ಅತಿಯಾಗಿ ಸೇವಿಸುವುದು ಹಾನಿಕಾರಕ. 

ಕಿಡ್ನಿ ಸ್ಟೋನ್ ಸಮಸ್ಯೆ :
ಪ್ರತಿದಿನ ಪಾಲಕ್ ಸೊಪ್ಪನ್ನು (Spinach) ಸೇವಿಸುವುದರಿಂದ ದೇಹದಲ್ಲಿ ಪೋಷಕಾಂಶಗಳು ಸಂಪೂರ್ಣವಾಗಿ ಹೀರಲ್ಪಡುವುದನ್ನು ತಡೆಯುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ (Kidney Stone) ಅಪಾಯವನ್ನು ಹೆಚ್ಚಿಸಬಹುದು. ಪಾಲಕ್ ಸೊಪ್ಪಿನಲ್ಲಿ ಪ್ಯೂರಿನ್ ಮತ್ತು ಆಕ್ಸಾಲಿಕ್ ಆಮ್ಲ ಅಧಿಕವಾಗಿದೆ ಮತ್ತು ಇದನ್ನು ಹೆಚ್ಚು ಸೇವಿಸುವುದರಿಂದ ನಿಮಗೆ ಹಾನಿಯುಂಟಾಗುತ್ತದೆ.

ಇದನ್ನೂ ಓದಿ : Beetroot Side Effects : ಈ ಸಮಸ್ಯೆ ಇರುವವರು ತಪ್ಪಿಯೂ ತಿನ್ನಬಾರದು ಬೀಟ್ ರೂಟ್

ಜೀರ್ಣಕ್ರಿಯೆಯ ಸಮಸ್ಯೆಗಳು:
ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ಗ್ಯಾಸ್, ಹೊಟ್ಟೆ ಉಬ್ಬುವುದು ಮತ್ತು ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗಬಹುದು. ಇದು ಅತಿಸಾರ ಮತ್ತು ಜ್ವರಕ್ಕೂ (fever) ಕಾರಣವಾಗಬಹುದು.

ಹೀಗಿದ್ದರೆ ಪಾಲಕ್ ತಿನ್ನಲೆಬಾರದು : 
ಪಾಲಕ್ ವಿಟಮಿನ್ ಕೆ ಯ ಉತ್ತಮ ಮೂಲವಾಗಿದೆ, ಆದರೆ ನೀವು ರಕ್ತ ತೆಳುವಾಗಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಪಾಲಕ್ ನಿಂದ ದೂರವಿರಿ. ಪಾಲಕ್ ಸೊಪ್ಪಿನ ಸೇವನೆಯು ಔಷಧಿಗಳೊಂದಿಗೆ ಪ್ರತಿಕ್ರಿಯಿಸುತ್ತದೆ (Side Effects of Spinach) ಮತ್ತು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. 

ಇದನ್ನೂ ಓದಿ : Winter Health Tips: ಚಳಿಗಾಲದಲ್ಲಿ ಫಿಟ್ ಆಗಿರಲು ಇಲ್ಲಿದೆ ಸುಲಭ ಟಿಪ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News