ಅತ್ಯುತ್ತಮ ನ್ಯಾಚುರಲ್ ಇಮ್ಯೂನಿಟಿ ಬೂಸ್ಟರ್ ಈ ಸೋಯಾಬೀನ್..!

ಇಮ್ಯೂನಿಟಿ  ಬೂಸ್ಟರ್ ಗೆ ಸೋಯಾಬೀನ್  ಅತ್ಯಂತ  ಉಪಯುಕ್ತ ಎಂದು ಹೇಳಿದ್ದು ಮತ್ಯಾರೂ ಅಲ್ಲ, ಫುಡ್ ಸೇಫ್ಟಿ  & ಸ್ಟಾಂಡರ್ಡ್ ಆಥಾರಿಟಿ ಅಫ್ ಇಂಡಿಯಾ ಅಂದರೆ FSSAI.  ನಿಮ್ಮ ಡಯಟ್ ನಲ್ಲಿ ಸೋಯಾಬಿನ್ ಬಳಸಿ ಎಂದು FSSAI ಸಲಹೆ ನೀಡಿದೆ.  

Written by - Ranjitha R K | Last Updated : May 6, 2021, 12:31 PM IST
  • ಸೋಯಾಬೀನಿನ ಡಯಟರಿ ಮಹತ್ವದ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿಲ್ಲ
  • ಹೆಚ್ಚು ಸೋಯಾಬೀನ್ ತಿನ್ನುವಂತೆ ಸಲಹೆ ನೀಡಿದೆ FSSAI
  • ಸಮೃದ್ಧ ಪ್ರೊಟೀನ್ ಮತ್ತು ಇಮ್ಯೂನಿಟಿಗಾಗಿ ಸೋಯಾ ಬೀನ್ ಅತ್ಯಗತ್ಯ
ಅತ್ಯುತ್ತಮ ನ್ಯಾಚುರಲ್ ಇಮ್ಯೂನಿಟಿ ಬೂಸ್ಟರ್ ಈ ಸೋಯಾಬೀನ್..! title=
ಹೆಚ್ಚು ಸೋಯಾಬೀನ್ ತಿನ್ನುವಂತೆ ಸಲಹೆ ನೀಡಿದೆ FSSAI (file photo)

ನವದೆಹಲಿ : ಕರೋನಾ ಮಹಾಮಾರಿಯಿಂದ (Coronavirus) ರಕ್ಷಿಸಿಕೊಳ್ಳಲು ನಮ್ಮ ಇಮ್ಯೂನ್ ಸಿಸ್ಟಮ್ (Immunity) ಅನ್ನು ಬಲಪಡಿಸಿಕೊಳ್ಳುವುದು ಅತ್ಯಂತ ಮುಖ್ಯ. ನೈಸರ್ಗಿಕವಾಗಿ ನಮ್ಮ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಲವಾರು ಉಪಾಯಗಳಿವೆ. ಅದರಲ್ಲಿ ಮೊದಲ ಪರಿಣಾಮಕಾರಿ ಉಪಾಯಿ ನಮ್ಮ ಆಹಾರದಲ್ಲಿ ಇಮ್ಯೂನಿಟಿ ಬೂಸ್ಟರ್ ಆಹಾರಗಳನ್ನು (Immunity booster food) ಸೇರಿಸಿಕೊಳ್ಳುವುದು. ಅಂಥಾ ಹಲವಾರು ಆಹಾರಗಳಿವೆ. ಅದರಲ್ಲಿ ಅತ್ಯಂತ ಮುಖ್ಯವಾಗಿದ್ದು ಸೋಯಾಬೀನ್. ಸಸ್ಯಾಹಾರಿಗಳಿಗೆ ಸಮೃದ್ದ ಪ್ರೊಟೀನ್ ಮೂಲ ಈ ಸೋಯಾಬೀನ್. ಹಾಗಾಗಿ, ನಿಮ್ಮ ಇಮ್ಯೂನಿಟಿಗಾಗಿ, ಪ್ರೊಟೀನ್ ಗಾಗಿ ಸೋಯಾಬೀನ್ ಅತ್ಯುತ್ತಮ  ಆಯ್ಕೆ.

ಸೋಯಾಬೀನ್ ಬಗ್ಗೆ FSSAI  ನೀಡಿದ ಸಲಹೆ ಏನು ಗೊತ್ತಾ..?

ಇಮ್ಯೂನಿಟಿ (Immunity) ಬೂಸ್ಟರ್ ಗೆ ಸೋಯಾಬೀನ್ (Soyabean) ಅತ್ಯಂತ  ಉಪಯುಕ್ತ ಎಂದು ಹೇಳಿದ್ದು ಮತ್ಯಾರೂ ಅಲ್ಲ, ಫುಡ್ ಸೇಫ್ಟಿ  & ಸ್ಟಾಂಡರ್ಡ್ ಆಥಾರಿಟಿ ಅಫ್ ಇಂಡಿಯಾ ಅಂದರೆ FSSAI.  ನಿಮ್ಮ ಡಯಟ್ ನಲ್ಲಿ (Diet) ಸೋಯಾಬಿನ್ ಬಳಸಿ ಎಂದು FSSAI ಸಲಹೆ ನೀಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ FSSAI ಯಾವ ರೀತಿಯಲ್ಲಿ ಸೋಯಾ ಖಾದ್ಯವನ್ನು ನಮ್ಮ ಡಯಟ್ ನಲ್ಲಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಸಲಹೆ ನೀಡಿದೆ. ಸೋಯಾ ಬೀನ್ ಬಡ್ಸ್, ಬೀಜ, ಸೋಯಾ ಚಂಕ್, ಸೋಯ ಪನೀರ್, ಸೋಯಾ ಹಾಲು, ಸೋಯಾ ನಟ್ಸ್ ರೂಪದಲ್ಲಿ ನಾವು  ಆಹಾರದಲ್ಲಿ ಸೇರಿಸಿಕೊಳ್ಳಬಹುದು ಎಂದು FSSAI ಸಲಹೆ ಕೊಟ್ಟಿದೆ. 

 

ಇದನ್ನೂ ಓದಿ : ಏನಿದು 6 ಮಿನಿಟ್ ವಾಕ್ ಟೆಸ್ಟ್ ? ಕರೋನಾ ಸೋಂಕಿತರಿಗೆ ಏನು ಪ್ರಯೋಜನ?

ಸೋಯಾ ಯಾಕೆ ಹೆಲ್ತಿ..?
1. ಸೋಯಾ ಬೀನಿನಲ್ಲಿ ಪ್ರೊಟೀನ್ (Protien) ಸಮೃದ್ದವಾಗಿರುತ್ತದೆ. ಸಸ್ಯಾಹಾರ ಡಯಟಿನಲ್ಲಿ ಇದರಷ್ಟು ಪ್ರೊಟೀನ್ ಇನ್ನು ಯಾವುದರಲ್ಲೂ ಇರಲ್ಲ
2. ಸಿಕ್ಕಾಪಟ್ಟೆ ಡಯಟರಿ ಫೈಬರ್ ಇರುತ್ತದೆ. ಹಾಗಾಗಿ ಜೀರ್ಣ ಕ್ರಿಯೆಗೆ (Digestion) ಸಹಕಾರಿ
3. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇದೆ. ಇದು ಹೃದಯ, ಕಣ್ಣು ಮತ್ತು ಲಿವರನ್ನು ಆರೋಗ್ಯವಾಗಿಡುತ್ತದೆ
4. ಹೈನು ಉತ್ಪನ್ನಗಳಿಂದ ಅಲರ್ಜಿ ಇದ್ದರೆ ಪ್ರೊಟೀನ್ ಮೂಲಕ್ಕಾಗಿ ಸೋಯಾ ಉತ್ಪನ್ನಗಳನ್ನು ತಿನ್ನಬಹುದು.

ಇದನ್ನೂ ಓದಿ : Corona Care Tips: ಕೋವಿಡ್‌ನಿಂದ ಬಚಾವಾಗಲು ಇಡೀ ದಿನ ಬಿಸಿನೀರು ಕುಡಿಯುತ್ತಿದ್ದರೆ ಅದು ಎಷ್ಟು ಅಪಾಯಕಾರಿ ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News