ಈ ಕಾಯಿಲೆಗಳಿರುವ ಜನರು ಅರಿಶಿಣ ಮಿಶ್ರಿತ ಹಾಲಿನಿಂದ ಅಂತರ ಕಾಯ್ದುಕೊಳ್ಳಬೇಕು

Health Care Tips: ಸಾಮಾನ್ಯವಾಗಿ ಅರಿಶಿಣ ಮಿಶ್ರಿತ ಹಾಲು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಭಾವಿಸಲಾಗುತ್ತದೆ. ಆದರೆ, ಕೆಲ ಜನರಿಗೆ ಈ ಹಾಲು ಹಾನಿ ತಲುಪಿಸುವ ಸಾಧ್ಯತೆ ಇದೆ. ಬನ್ನಿ ಯಾರು ಅರಿಶಿಣ ಮಿಶ್ರಿತ ಹಾಲು ಸೇವನೆಯಿಂದ ದೂರ ಉಳಿಯಬೇಕು ತಿಳಿದುಕೊಳ್ಳೋಣ,  

Written by - Nitin Tabib | Last Updated : Jan 17, 2023, 10:57 PM IST
  • ಅರಿಶಿಣ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಗೆ ಅಡ್ಡಿಯುಂಟಾಗುತ್ತದೆ.
  • ಕಬ್ಬಿಣ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಿರುವಾಗ,
  • ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ, ನೀವು ಅರಿಶಿಣ ಹಾಲು ಸೇವಿಸುವುದನ್ನು ತಪ್ಪಿಸಬೇಕು.
ಈ ಕಾಯಿಲೆಗಳಿರುವ ಜನರು ಅರಿಶಿಣ ಮಿಶ್ರಿತ ಹಾಲಿನಿಂದ ಅಂತರ ಕಾಯ್ದುಕೊಳ್ಳಬೇಕು title=
ಅರಿಶಿಣ ಹಾಲಿನ ಅಡ್ಡ ಪರಿಣಾಮಗಳು

Turmeric Milk Side Effects: ಚಿಕ್ಕಂದಿನಲ್ಲಿ ಹೆಚ್ಚು ದಣಿವಾಗಿ ಮನೆ ತಲುಪಿದಾಗ ಅರಿಶಿಣ ಮಿಶ್ರಿತ ಹಾಲು ಸೇವಿಸಲು ಹಿರಿಯರು ಸಲಹೆ ನೀಡುವುದನ್ನು ನೀವು ನೋಡಿರಬಹುದು. ಏಕೆಂದರೆ ಅರಿಶಿಣ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಯಂತಹ ಜೀವಸತ್ವಗಳು ಹಾಲಿನಲ್ಲಿ ಕಂಡುಬರುತ್ತವೆ. ಆದರೆ ಅರಿಶಿಣದ ಹಾಲು ಕೂಡ ಕೆಲವರಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಇಂತಹ ಪರಿಸ್ಥಿತಿಯಲ್ಲಿ, ಯಾವ ಜನರು ಅರಿಶಿಣ ಮಿಶ್ರಿತ ಹಾಲನ್ನು ಸೇವಿಸುವುದರಿಂದ ದೂರ ಉಳಿಯಬೇಕು ತಿಳಿದುಕೊಳ್ಳೋಣ ಬನ್ನಿ.

ಈ ಜನರು ಅರಿಶಿಣ ಮಿಶ್ರಿತ ಹಾಲನ್ನು ಸೇವಿಸಬಾರದು
ಕಿಡ್ನಿ ಕಾಯಿಲೆ ಇರುವವರು ಸೇವಿಸಬಾರದು

ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಬಳುತ್ತಿರುವವರು ಅರಿಶಿಣ ಹಾಲನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಅರಿಶಿಣವು ಆಕ್ಸಲೇಟ್ ಅನ್ನು ಹೊಂದಿರುತ್ತದೆ, ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಪ್ರಚೋದಿಸುತ್ತದೆ ಮತ್ತು ನೀವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ರಕ್ತದಲ್ಲಿ ಕಡಿಮೆ ಸಕ್ಕರೆಯ ಮಟ್ಟ ಹೊಂದಿದವರು ಸೇವಿಸಬಾರದು
ರಕ್ತದಲ್ಲಿ ಕಡಿಮೆ ಸಕ್ಕರೆಯ ಮಟ್ಟವನ್ನು ಹೊಂದಿರುವ ರೋಗಿಗಳು ಅರಿಶಿಣ ಹಾಲನ್ನು ಸೇವಿಸಬಾರದು. ಏಕೆಂದರೆ ಅರಿಶಿಣವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ, ಲೋ ಶುಗರ್ ಲೆವಲ್ ಹೊಂದಿರುವ ರೋಗಿಗಳ ಸಮಸ್ಯೆಯು ಮತ್ತಷ್ಟು ಉಲ್ಭಣಿಸಬಹುದು.

ಕಳಪೆ ಜೀರ್ಣಕ್ರಿಯೆ ಹೊಂದಿರುವ ಜನರು ಸೇವಿಸಬಾರದು
ಹೊಟ್ಟೆಯಲ್ಲಿ ಗ್ಯಾಸ್, ಉಬ್ಬರ, ಎದೆಯುರಿ ಮುಂತಾದ ಜೀರ್ಣಕಾರಿ ಸಮಸ್ಯೆಗಳಿದ್ದರೆ ನೀವು ಅರಿಶಿಣ ಹಾಲನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಅರಿಶಿಣದ ಹಾಲು ಕುಡಿದರೆ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.

ಇದನ್ನೂ ಓದಿ-Diabetes: ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಈ ಸೂಪರ್ ಫುಡ್ ಗಳು ನಿಮ್ಮ ಆಹಾರದಲ್ಲಿರಲಿ

ರಕ್ತಹೀನತೆ ಹೊಂದಿರುವ ಜನರು ಸೇವಿಸಬಾರದು
ಅರಿಶಿಣ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಗೆ ಅಡ್ಡಿಯುಂಟಾಗುತ್ತದೆ. ಕಬ್ಬಿಣ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಿರುವಾಗ, ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ, ನೀವು ಅರಿಶಿಣ ಹಾಲು ಸೇವಿಸುವುದನ್ನು ತಪ್ಪಿಸಬೇಕು.

ಇದನ್ನೂ ಓದಿ-ತೂಕ ಇಳಿಕೆಗೆ ರಾಮಬಾಣ ಈ ಬೆಟ್ಟದ ನೆಲ್ಲಿಕಾಯಿ ಮುರಬ್ಬ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News