ಗರ್ಭಿಣಿ ಸೇರಿದಂತೆ ಈ ಸಮಸ್ಯೆ ಇರುವವರು ಮೂಲಂಗಿ ಸೇವಿಸಬಾರದು ! ಯಾಕೆ ಗೊತ್ತಾ ?

Side effects of radish:ಮೂಲಂಗಿಯಲ್ಲಿ ನಾರಿನಂಶ ಹೆಚ್ಚಿದ್ದು, ಕೆಲವರಲ್ಲಿ ಗ್ಯಾಸ್ ಮತ್ತು  ಆಸಿಡಿಟಿ ಸಮಸ್ಯೆ ಉಂಟು ಮಾಡಬಹುದು. ಇನ್ನು ಮೂಲಂಗಿಯಲ್ಲಿ ಥಿಯೋಸೈನೈಡ್ ಎಂಬ ಸಂಯುಕ್ತ ಅಡಗಿರುತ್ತದೆ. ಇದು ಥೈರಾಯ್ಡ್ ಗ್ರಂಥಿಗೆ ಹಾನಿಕಾರಕವಾಗಿದೆ. 

Written by - Ranjitha R K | Last Updated : Oct 4, 2023, 02:34 PM IST
  • ಮೂಲಂಗಿ ಅತಿ ಹೆಚ್ಚು ಪೌಷ್ಟಿಕಾಂಶವಿರುವ ತರಕಾರಿ
  • ಮೂಲಂಗಿಯ ಅತಿಯಾದ ಸೇವನೆಯು ಹಾನಿಕಾರಕವಾಗಿದೆ.
  • ಮೂಲಂಗಿಯನ್ನು ಯಾರು ತಿನ್ನಬಾರದು?
ಗರ್ಭಿಣಿ ಸೇರಿದಂತೆ ಈ ಸಮಸ್ಯೆ ಇರುವವರು ಮೂಲಂಗಿ ಸೇವಿಸಬಾರದು !  ಯಾಕೆ ಗೊತ್ತಾ ?  title=

Side effects of radish:ಮೂಲಂಗಿ ಅತಿ ಹೆಚ್ಚು  ಪೌಷ್ಟಿಕಾಂಶವಿರುವ ತರಕಾರಿ. ಇದು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.  ತೂಕ ಇಳಿಸಲು, ಉತ್ತಮ ಜೀರ್ಣಕ್ರಿಯೆಗಾಗಿ ಮತ್ತು ಹೃದಯದ ಆರೋಗ್ಯಕ್ಕಾಗಿ ಮೂಲಂಗಿ ಉತ್ತಮ ತರಕಾರಿ.  ಆದರೆ, ಮೂಲಂಗಿಯ ಅತಿಯಾದ ಸೇವನೆಯು ಹಾನಿಕಾರಕವಾಗಿದೆ. ಮೂಲಂಗಿಯಲ್ಲಿ ನಾರಿನಂಶ ಹೆಚ್ಚಿದ್ದು, ಕೆಲವರಲ್ಲಿ ಗ್ಯಾಸ್ ಮತ್ತು  ಆಸಿಡಿಟಿ ಸಮಸ್ಯೆ ಉಂಟು ಮಾಡಬಹುದು. ಇನ್ನು ಮೂಲಂಗಿಯಲ್ಲಿ ಥಿಯೋಸೈನೈಡ್ ಎಂಬ ಸಂಯುಕ್ತ ಅಡಗಿರುತ್ತದೆ. ಇದು ಥೈರಾಯ್ಡ್ ಗ್ರಂಥಿಗೆ ಹಾನಿಕಾರಕವಾಗಿದೆ. 

ಮೂಲಂಗಿಯನ್ನು ಯಾರು ತಿನ್ನಬಾರದು?
ಗ್ಯಾಸ್ ಅಥವಾ  ಆಸಿಡಿಟಿ ಸಮಸ್ಯೆ ಇದ್ದವರು :
ಗ್ಯಾಸ್ ಮತ್ತು ವಾಯು ಸಮಸ್ಯೆ ಇರುವವರು ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿಯಲ್ಲಿ ನಾರಿನಂಶ ಹೆಚ್ಚಿದ್ದು, ಈ ತರಕಾರಿಯ ಸೇವನೆ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬಹುದು. 

ಇದನ್ನೂ ಓದಿ : ಏನಿದು ಬೆಲ್ಲ ಕಡಲೆಬೇಳೆ ಕಾಂಬಿನೇಷನ್, ಇವುಗಳನ್ನು ಒಟ್ಟಿಗೆ ಸೇವಿಸಲು ಏಕೆ ಸಲಹೆ ನೀಡಲಾಗುತ್ತದೆ?

ಥೈರಾಯ್ಡ್:
ಥೈರಾಯ್ಡ್ ಸಮಸ್ಯೆ ಇರುವವರು ಮೂಲಂಗಿಯನ್ನು ತಿನ್ನಬಾರದು. ಮೂಲಂಗಿಯಲ್ಲಿ ಥಿಯೋಸೈನೈಡ್ ಎಂಬ ಸಂಯುಕ್ತವಿದೆ. ಇದು ಥೈರಾಯ್ಡ್ ಗ್ರಂಥಿಗೆ ಹಾನಿಕಾರಕವಾಗಿದೆ. ಥೈರಾಯ್ಡ್ ಸಮಸ್ಯೆ ಇರುವವರು ಮೂಲಂಗಿ ಸೇವನೆಯನ್ನು ಮಿತಿಗೊಳಿಸಬೇಕು.

ಕಿಡ್ನಿ ಸಮಸ್ಯೆ:
ಕಿಡ್ನಿ ಸಮಸ್ಯೆ ಇರುವವರು ಮೂಲಂಗಿಯನ್ನು ತಿನ್ನಬಾರದು. ಮೂಲಂಗಿಯು ಹೆಚ್ಚಿನ ಪ್ರಮಾಣದ ಯೂರಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಮೂತ್ರಪಿಂಡದ ಸಮಸ್ಯೆಯಿರುವ ಜನರಿಗೆ ಹಾನಿಕಾರಕವಾಗಿದೆ.

ಇದನ್ನೂ ಓದಿ : Health Tips: ಈ 4 ಪದಾರ್ಥಗಳೊಂದಿಗೆ ಅಪ್ಪಿತಪ್ಪಿಯೂ ಮೊಟ್ಟೆ ಸೇವಿಸಬೇಡಿ..!

ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆ : 
ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಮೂಲಂಗಿ ತಿನ್ನಬಾರದು. ಮೂಲಂಗಿಯಲ್ಲಿ ಥಿಯೋಸೈನೈಡ್ ಎಂಬ ಸಂಯುಕ್ತವಿದ್ದು, ಇದು ಗರ್ಭದಲ್ಲಿರುವ ಮಗುವಿಗೆ ಹಾನಿಕಾರಕವಾಗಿದೆ. ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಮೂಲಂಗಿ ಸೇವನೆಯನ್ನು ಮಿತಿಗೊಳಿಸಬೇಕು.

ಕಡಿಮೆ ರಕ್ತದೊತ್ತಡ ಇರುವವರು :
ಕಡಿಮೆ ರಕ್ತದೊತ್ತಡ ಇರುವವರು ಕೂಡಾ ಮೂಲಂಗಿಯಿಂದ ದೂರವಿರಬೇಕು. ಮೂಲಂಗಿಯ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಅಸಹಜವಾಗಿ ಕಡಿಮೆ ಮಟ್ಟಕ್ಕೆ ಇಳಿಸಲು ಕಾರಣವಾಗಬಹುದು.

 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News