ಐಸ್ ಕ್ರೀಂ ತಿಂದ ನಂತರ ಈ ಆಹಾರ ಸೇವಿಸಲೇ ಬಾರದು!ಆಸ್ಪ್ರತ್ರೆಗೆ ದಾಖಲಾಗಬೇಕಾದೀತು ಜೋಕೆ !

ಐಸ್ ಕ್ರೀಮ್ ತಿಂದ ತಕ್ಷಣ ಕೆಲವು ವಸ್ತುಗಳನ್ನು ತಿನ್ನಬಾರದು.ಐಸ್ ಕ್ರೀಂ ತಿಂದ ತಕ್ಷಣ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯಕ್ಕೆ ತೊಂದರೆಯಾಗುವ  ಸಾಧ್ಯತೆ ಇರುತ್ತದೆ.

Written by - Ranjitha R K | Last Updated : May 24, 2024, 03:31 PM IST
  • ಐಸ್ ಕ್ರೀಮ್ ತಿನ್ನುವುದೆಂದರೆ ಎಲ್ಲರಿಗೂ ಇಷ್ಟ
  • ಬೇಸಿಗೆಯಲ್ಲಿ ಪ್ರತಿ ಮನೆಯಲ್ಲೂ ಐಸ್ ಕ್ರೀಮ್ ಬಳಕೆ ಹೆಚ್ಚಾಗುತ್ತದೆ.
  • ಐಸ್ ಕ್ರೀಮ್ ತಿಂದ ತಕ್ಷಣ ಕೆಲವು ವಸ್ತುಗಳನ್ನು ತಿನ್ನಬಾರದು.
ಐಸ್ ಕ್ರೀಂ ತಿಂದ ನಂತರ ಈ ಆಹಾರ ಸೇವಿಸಲೇ ಬಾರದು!ಆಸ್ಪ್ರತ್ರೆಗೆ ದಾಖಲಾಗಬೇಕಾದೀತು ಜೋಕೆ !  title=

ಬೆಂಗಳೂರು : ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ.ಬೇಸಿಗೆಯಲ್ಲಿ ಪ್ರತಿ ಮನೆಯಲ್ಲೂ ಐಸ್ ಕ್ರೀಮ್ ಬಳಕೆ ಹೆಚ್ಚಾಗುತ್ತದೆ.ಈ ಋತುವಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ಯಾವುದೇ ಹಾನಿಯಾಗುವುದೂ ಇಲ್ಲ.ಆದರೆ ಐಸ್ ಕ್ರೀಮ್ ತಿಂದ ತಕ್ಷಣ ಕೆಲವು ವಸ್ತುಗಳನ್ನು ತಿನ್ನಬಾರದು.ಐಸ್ ಕ್ರೀಂ ತಿಂದ ತಕ್ಷಣ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯಕ್ಕೆ ತೊಂದರೆಯಾಗುವ  ಸಾಧ್ಯತೆ ಇರುತ್ತದೆ.  

ಐಸ್ ಕ್ರೀಂ ತಿಂದ ತಕ್ಷಣ ಈ ವಸ್ತುಗಳನ್ನು ಸೇವಿಸಬಾರದು : 
ಚಹಾ ಅಥವಾ ಕಾಫಿ  :

ಐಸ್ ಕ್ರೀಂ ತಿಂದ ತಕ್ಷಣ ಕೆಫೀನ್ ಯುಕ್ತ ಪಾನೀಯಗಳಾದ ಟೀ ಅಥವಾ ಕಾಫಿಯನ್ನು ಸೇವಿಸಿದರೆ ಆರೋಗ್ಯ ಹದಗೆಡಬಹುದು.ಇಂತಹ ಪದಾರ್ಥಗಳನ್ನು ಕುಡಿಯುವುದರಿಂದ ಗಂಟಲು ಕೆರೆತ ಕೆಮ್ಮು ಅಥವಾ ಹೊಟ್ಟೆ ನೋವಿನ ಸಮಸ್ಯೆಯೂ ಉಂಟಾಗುತ್ತದೆ.ತಣ್ಣನೆಯ ಐಸ್ ಕ್ರೀಂ ತಿಂದ ತಕ್ಷಣ ಬಿಸಿಬಿಸಿಯಾಗಿರುವ ಪದಾರ್ಥ ಸೇವಿಸಿದರೆ ಹೊಟ್ಟೆಯ ಉಷ್ಣತೆ ಬದಲಾಗುತ್ತದೆ.  ಅದು ಜೀರ್ಣಾಂಗ ವ್ಯವಸ್ಥೆಯನ್ನು ಹಾಲು ಮಾಡುತ್ತದೆ. 

ಇದನ್ನೂ ಓದಿ : ಪಪ್ಪಾಯಿ ಬೀಜಗಳನ್ನು ಹೀಗೆ ಸೇವಿಸಿದರೆ ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿ ಚಪ್ಪಟೆಯಾಗುವುದು !

ಹುಳಿ ಹಣ್ಣು : 
ಐಸ್ ಕ್ರೀಮ್ ತಿಂದ ನಂತರ ಹುಳಿ ಹಣ್ಣನ್ನು ತಿನ್ನುವ ತಪ್ಪು ಮಾಡಲೇಬೇಡಿ.  ಈ ನಿಟ್ಟಿನಲ್ಲಿ ವಿಶೇಷವಾಗಿ ಜಾಗರೂಕರಾಗಿರಬೇಕು.ಐಸ್ ಕ್ರೀಮ್ ತಿಂದ ನಂತರ ಹುಳಿ ಹಣ್ಣನ್ನು ತಿಂದರೆ ಗ್ಯಾಸ್ ಮತ್ತು ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಇದರೊಂದಿಗೆ, ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ. 

ನೀರು : 
ಹಲವರಿಗೆ ಐಸ್ ಕ್ರೀಮ್ ತಿಂದ ನಂತರ ನೀರು ಕುಡಿಯುವ ಅಭ್ಯಾಸವಿರುತ್ತದೆ.  ನಿಮಗೂ ಈ ಅಭ್ಯಾಸವಿದ್ದರೆ ತಕ್ಷಣ ನಿಲ್ಲಿಸಿ.ಐಸ್ ಕ್ರೀಮ್ ತಿಂದ ನಂತರ ತಣ್ಣೀರು ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. 

ಮಸಾಲೆಯುಕ್ತ ಆಹಾರ :  
ತಣ್ಣನೆಯ ಮತ್ತು ಸಿಹಿಯಾದ ಐಸ್ ಕ್ರೀಮ್ ತಿಂದ ನಂತರ ಬಿಸಿ ಮತ್ತು ಮಸಾಲೆಯುಕ್ತ ಆಹಾರ ಕೂಡಾ ಸೇವಿಸಬಾರದು. ಇದರಿಂದ ಉರಿಯೂತ ಅಥವಾ ಅಜೀರ್ಣ ಉಂಟಾಗಬಹುದು. ಮಸಾಲೆಯುಕ್ತ ಆಹಾರಗಳು ಕ್ಯಾಪ್ಸೈಸಿನ್ ಅನ್ನು ಹೊಂದಿರುತ್ತವೆ. ಇದು ಡೈರಿ ಉತ್ಪನ್ನಗಳೊಂದಿಗೆ ಪ್ರತಿಕ್ರಿಯಿಸುತ್ತದೆ.

ಇದನ್ನೂ ಓದಿ : ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು ! 

ಐಸ್ ಕ್ರೀಮ್ ತಿಂದ ತಕ್ಷಣ ಮದ್ಯಪಾನ ಮಾಡಬೇಡಿ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಸಾಮಾನ್ಯವಾಗಿ ಸೇವಿಸಬಾರದು. ಆದರೆ ಐಸ್ ಕ್ರೀಮ್ ತಿಂದ ನಂತರವಂತೂ ಸೇವಿಸಲೇ ಬಾರದು. ಇದು ವಾಂತಿಗೆ ಕಾರಣವಾಗಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News