IND vs AUS: ಪರ್ತ್‌ನಲ್ಲಿ ಟೀಂ ಇಂಡಿಯಾ ಪಾರುಪತ್ಯ: ಐತಿಹಾಸಿಕ ಗೆಲುವು ಸಾಧಿಸಿ ಆಸೀಸ್‌ ಸೊಕ್ಕಡಗಿಸಿದ ಭಾರತ! ಸರಣಿಯಲ್ಲಿ 1-0 ಮುನ್ನಡೆ

Border Gavaskar Trophy: ಪರ್ತ್‌ನಲ್ಲಿ ಭಾರತದ ಈ ಗೆಲುವು ಐತಿಹಾಸಿಕ. ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಭಾರತಕ್ಕೆ ಇದು ಮೊದಲ ಟೆಸ್ಟ್ ಗೆಲುವು. ಜನವರಿ 2008 ರಲ್ಲಿ ಪರ್ತ್‌ನ WACA ಮೈದಾನದಲ್ಲಿ ಆಸ್ಟ್ರೇಲಿಯಾವನ್ನು 72 ರನ್‌ಗಳಿಂದ ಸೋಲಿಸಿದ ನಂತರ ಭಾರತ ತಂಡವು ಇದೀಗ 16 ವರ್ಷಗಳ ನಂತರ ತ್ರಿವರ್ಣ ಧ್ವಜವನ್ನು ಹಾರಿಸಿದೆ.

Written by - Bhavishya Shetty | Last Updated : Nov 25, 2024, 03:06 PM IST
    • ಪರ್ತ್ ಟೆಸ್ಟ್‌ನಲ್ಲಿ ಕಾಂಗರೂ ಪಡೆಗೆ ಟೀಂ ಇಂಡಿಯಾ ಬಿಗ್‌ ಶಾಕ್‌ ನೀಡಿದೆ
    • ಭಾರತ ನಾಲ್ಕು ದಿನಗಳಲ್ಲಿ ಆಸ್ಟ್ರೇಲಿಯಾವನ್ನು 295 ರನ್‌ಗಳಿಂದ ಸೋಲಿಸಿತು.
    • ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಭಾರತಕ್ಕೆ ಇದು ಮೊದಲ ಟೆಸ್ಟ್ ಗೆಲುವು.
IND vs AUS: ಪರ್ತ್‌ನಲ್ಲಿ ಟೀಂ ಇಂಡಿಯಾ ಪಾರುಪತ್ಯ: ಐತಿಹಾಸಿಕ ಗೆಲುವು ಸಾಧಿಸಿ ಆಸೀಸ್‌ ಸೊಕ್ಕಡಗಿಸಿದ ಭಾರತ! ಸರಣಿಯಲ್ಲಿ 1-0 ಮುನ್ನಡೆ title=
Border Gavaskar Trophy

IND vs AUS 1st Test Day 4 Highlights​: ಪರ್ತ್ ಟೆಸ್ಟ್‌ನಲ್ಲಿ ಕಾಂಗರೂ ಪಡೆಗೆ ಟೀಂ ಇಂಡಿಯಾ ಬಿಗ್‌ ಶಾಕ್‌ ನೀಡಿದೆ. ಭಾರತ ನೀಡಿದ ಬೃಹತ್‌ ಗುರಿಯನ್ನು ತಲುಪಲಾಗದೆ, ಆಸ್ಟ್ರೇಲಿಯ ತಂಡ ಸೋಲನುಭವಿಸಬೇಕಾಯಿತು. ಪರ್ತ್ ಟೆಸ್ಟ್‌ನಲ್ಲಿ ಭಾರತ ನಾಲ್ಕು ದಿನಗಳಲ್ಲಿ ಆಸ್ಟ್ರೇಲಿಯಾವನ್ನು 295 ರನ್‌ಗಳಿಂದ ಸೋಲಿಸಿತು.

ಇದನ್ನೂ ಓದಿ: ರಾಜ್ಯದಲ್ಲಿ ಒಂದು ವಾರ ದಿಢೀರ್‌ ರಜೆ ಘೋಷಣೆ..! ಶಾಲೆ-ಕಾಲೆಜುಗಳು 7 ದಿನ ಬಂದ್‌..?!

ಪರ್ತ್‌ನಲ್ಲಿ ಭಾರತದ ಈ ಗೆಲುವು ಐತಿಹಾಸಿಕ. ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಭಾರತಕ್ಕೆ ಇದು ಮೊದಲ ಟೆಸ್ಟ್ ಗೆಲುವು. ಜನವರಿ 2008 ರಲ್ಲಿ ಪರ್ತ್‌ನ WACA ಮೈದಾನದಲ್ಲಿ ಆಸ್ಟ್ರೇಲಿಯಾವನ್ನು 72 ರನ್‌ಗಳಿಂದ ಸೋಲಿಸಿದ ನಂತರ ಭಾರತ ತಂಡವು ಇದೀಗ 16 ವರ್ಷಗಳ ನಂತರ ತ್ರಿವರ್ಣ ಧ್ವಜವನ್ನು ಹಾರಿಸಿದೆ.

ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕಳೆದುಕೊಂಡ ನಂತರ, ಭಾರತ ತಂಡದ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಉದ್ಭವಿಸಿದ್ದವು. ಆಸ್ಟ್ರೇಲಿಯನ್ ನೆಲದಲ್ಲಿಯೂ ಭಾರತ ಸೋಲುತ್ತದೆ ಎಂದು ಅನೇಕರು ಹೇಳಿದ್ದರು. ಆದರೆ ಈಗ ಅವರು ನುಡಿದ ಭವಿಷ್ಯವೆಲ್ಲವೂ ಸುಳ್ಳಾಗಿದೆ.

ಪರ್ತ್ ಟೆಸ್ಟ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಗೆಲ್ಲಲು 534 ರನ್‌ಗಳ ಗುರಿ ನೀಡಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಷ್ಟು ದೊಡ್ಡ ಗುರಿಯ ಚೇಸ್ ಇಲ್ಲಿಯವರೆಗೆ ನಡೆದಿರಲಿಲ್ಲ. 534 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಭಾರತ 295 ರನ್‌ಗಳಿಂದ ಗೆದ್ದುಕೊಂಡಿತು. ಇದಕ್ಕೂ ಮುನ್ನ ಭಾರತ ತನ್ನ ಎರಡನೇ ಇನಿಂಗ್ಸ್‌ನಲ್ಲಿ 487/6 ಸ್ಕೋರ್‌ನಲ್ಲಿ ಡಿಕ್ಲೇರ್ ಮಾಡಿಕೊಂಡಿತ್ತು.

ಇದನ್ನೂ ಓದಿ: ಜಿಮ್ ಬೇಡ, ಡಯಟ್ ಬೇಡ... ಈ 5 ಸರಳ ಮನೆ ವ್ಯಾಯಾಮಗಳೊಂದಿಗೆ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿ!

ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಗರಿಷ್ಠ 161 ರನ್ ಗಳಿಸಿದ್ದರು. ಅದೇ ವೇಳೆ ಬಲಿಷ್ಠ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ 100 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಇದರೊಂದಿಗೆ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 81ನೇ ಶತಕ ಪೂರೈಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ ನಾಥನ್ ಲಿಯಾನ್ ಗರಿಷ್ಠ 2 ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಮಿಚೆಲ್ ಮಾರ್ಷ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು, ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ 11 ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದರು ಮತ್ತು ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 104 ರನ್‌ಗಳಿಗೆ ಸೀಮಿತಗೊಳಿಸಿದರು. ಅದೇ ಹೊತ್ತಿಗೆ ಮೊದಲ ಇನಿಂಗ್ಸ್ ನಲ್ಲಿ 150 ರನ್ ಗಳಿಸಿದ್ದ ಭಾರತ ತಂಡ 46 ರನ್ ಗಳ ಮುನ್ನಡೆ ಪಡೆಯಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News