ಗಂಡಂದಿರೇ ತಿಳಿದುಕೊಳ್ಳಿ! ಪತಿಯ ಫೋನ್ ಪತ್ನಿ ಚೆಕ್ ಮಾಡಬಹುದಾ ? ನಮ್ಮ ಕಾನೂನು ಏನು ಹೇಳುತ್ತದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ!

ಮದುವೆಯ ನಂತರ ತಮ್ಮ ಸಂಗಾತಿಯ ಪ್ರತಿಯೊಂದು ವಸ್ತುವಿನ ಮೇಲೆ ನಮ್ಮ ಹಕ್ಕು ಹಿಡಿತ ಇದೆ ಎನ್ನುವ ಭಾವನೆ ಕೆಲವರಲ್ಲಿ ಇರುತ್ತದೆ. ಹಾಗಾಗಿ ಅವರು ತಮ್ಮ ಸಂಗಾತಿಯ ವೈಯಕ್ತಿಕ ವಿಷಯಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆ.

Written by - Ranjitha R K | Last Updated : Nov 25, 2024, 02:56 PM IST
  • ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಲು ಚಾಟ್ ಮಾಡಲು ಬಳಸುವ ಅಪ್ಲಿಕೇಶನ್ WhatsApp
  • ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ವಾಟ್ಸಾಪ್ ಬಳಸುತ್ತಿದ್ದಾರೆ.
  • ಪತಿಯ ಫೋನ್ ಪತ್ನಿ ಚೆಕ್ ಮಾಡಬಹುದಾ ?
ಗಂಡಂದಿರೇ ತಿಳಿದುಕೊಳ್ಳಿ! ಪತಿಯ ಫೋನ್ ಪತ್ನಿ ಚೆಕ್ ಮಾಡಬಹುದಾ ? ನಮ್ಮ ಕಾನೂನು ಏನು ಹೇಳುತ್ತದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ!   title=

WhatsApp  ನಾವು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಲು , ಚಾಟ್ ಮಾಡಲು ಬಳಸುವ ಅಪ್ಲಿಕೇಶನ್ ಆಗಿದೆ.ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ವಾಟ್ಸಾಪ್ ಬಳಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಪತಿ, ಪತ್ನಿ ಪರಸ್ಪರರ WhatsApp ಅಥವಾ ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲು ಪ್ರಾರಂಭಿಸುತ್ತಾರೆ. ಮದುವೆಯ ನಂತರ ತಮ್ಮ ಸಂಗಾತಿಯ ಪ್ರತಿಯೊಂದು ವಸ್ತುವಿನ ಮೇಲೆ ನಮ್ಮ ಹಕ್ಕು ಹಿಡಿತ ಇದೆ ಎನ್ನುವ ಭಾವನೆ ಕೆಲವರಲ್ಲಿ ಇರುತ್ತದೆ. ಹಾಗಾಗಿ ಅವರು ತಮ್ಮ ಸಂಗಾತಿಯ ವೈಯಕ್ತಿಕ ವಿಷಯಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆ.

ಭಾರತೀಯ ಕಾನೂನು ಏನು ಹೇಳುತ್ತದೆ? :
ಕಾನೂನು ತಜ್ಞರ ಪ್ರಕಾರ, ಭಾರತೀಯ ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ, ಪ್ರತಿಯೊಬ್ಬರಿಗೂ ಖಾಸಗಿತನದ ಹಕ್ಕನ್ನು ನೀಡಲಾಗಿದೆ. ಇದರ ಪ್ರಕಾರ ಯಾವುದೇ ವ್ಯಕ್ತಿ ತನ್ನ ಸಂಗಾತಿಯ ಫೋನ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು  ಪರಿಶೀಲಿಸುವಂತಿಲ್ಲ. ಒಂದು ವೇಳೆ ನೋಡಲೇಬೇಕು ಎನ್ನುವ ಹಾಗಿದ್ದರೆ ಮೊದಲು ಸಂಗಾತಿಯ ಅನುಮತಿಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.  

ಇದನ್ನೂ ಓದಿ : iPhone ಬಳಕೆದಾರರಿಗೆ ಸರ್ಕಾರದಿಂದ ರೆಡ್ ಅಲರ್ಟ್..! ನಿರ್ಲಕ್ಷಿಸಿದ್ರೆ ಅಪಾಯ ಖಂಡಿತ...!

ಏನಿದು ಆರ್ಟಿಕಲ್ 21?:
ಪ್ರತಿಯೊಬ್ಬ ವ್ಯಕ್ತಿಯು ಕೆಲವು ವೈಯಕ್ತಿಕ ವಿಷಯಗಳನ್ನು ಹೊಂದಿದ್ದು, ಅದನ್ನು ತನಗೆ ಮಾತ್ರ ಮೀಸಲಾಗಿ ಇಟ್ಟುಕೊಳ್ಳಲು ಬಯಸುತ್ತಾನೆ.ನಮ್ಮ ದೇಶದ ಕಾನೂನಿನ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ವೈಯಕ್ತಿಕ ವಿಷಯಗಳನ್ನು ಇತರರಿಂದ ಮರೆಮಾಡುವ ಸಂಪೂರ್ಣ ಹಕ್ಕಿದೆ. 2017ರಲ್ಲಿ, ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಕೂಡಾ ಖಾಸಗಿತನದ ಹಕ್ಕು ಬಹಳ ಮುಖ್ಯ ಮತ್ತು ಅದನ್ನು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. 

9 ನ್ಯಾಯಾಧೀಶರ ತೀರ್ಪು :
ಒಂಬತ್ತು ಹಿರಿಯ ನ್ಯಾಯಾಧೀಶರು ಜಂಟಿಯಾಗಿ ಈ ತೀರ್ಪು ನೀಡಿದ್ದರು. ಈ ಪೀಠದಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಮೂರ್ತಿ ಜೆ. ಚೆಲಮೇಶ್ವರ್, ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿ ಎಸ್‌ಕೆ ಕೌಲ್, ನ್ಯಾಯಮೂರ್ತಿ ಆರ್. ಎಫ್. ನಾರಿಮನ್, ನ್ಯಾಯಮೂರ್ತಿ ಎ.ಎಂ. ಸಪ್ರೆ, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಆರ್.ಕೆ. ಅಗರ್ವಾಲ್ ಮತ್ತು ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಇದ್ದರು.  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News