Nail Biting Habit: ಉಗುರು ಕಚ್ಚುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಆರೋಗ್ಯದ ಮೇಲೆ ಬೀಳಲಿದೆ ಭಾರೀ ಪರಿಣಾಮ

ವರ್ಷಗಳಿಂದ ಉಗುರುಗಳನ್ನು ಅಗಿಯುವ ಅಭ್ಯಾಸದಿಂದ, ದೇಹದ ಒಳಗೆ  ಪರೋನಿಚಿಯಾದಂತಹ ಅನೇಕ ಬ್ಯಾಕ್ಟೀರಿಯಾಗಳು ಸೇರಲು ಕಾರಣವಾಗುತ್ತದೆ.  ಈ ಬ್ಯಾಕ್ಟೀರಿಯಾಗಳು ಕೈಕಾಲುಗಳ ಸಂಧಿಗಳ ಮೇಲೆ ಪ್ರಭಾವ ಬೀರುತ್ತದೆ.

Written by - Ranjitha R K | Last Updated : Apr 6, 2021, 05:04 PM IST
  • ಕೆಲವರಿಗೆ ಉಗುರುಗಳನ್ನು ಕಚ್ಚುವ ಅಭ್ಯಾಸವಿರುತ್ತದೆ.
  • ಈ ಅಭ್ಯಾಸವು ಹಲ್ಲುಗಳ ಆಕಾರವನ್ನು ಹಾಳು ಮಾಡುತ್ತದೆ
  • ಸಂಧಿವಾತಕ್ಕೂ ಕಾರಣವಾಗಬಹುದು ಈ ಕೆಟ್ಟ ಅಭ್ಯಾಸ
Nail Biting Habit: ಉಗುರು ಕಚ್ಚುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಆರೋಗ್ಯದ ಮೇಲೆ ಬೀಳಲಿದೆ ಭಾರೀ ಪರಿಣಾಮ  title=
ಕೆಲವರಿಗೆ ಉಗುರುಗಳನ್ನು ಕಚ್ಚುವ ಅಭ್ಯಾಸವಿರುತ್ತದೆ. (file photo)

ನವದೆಹಲಿ : ಕೆಲವರಿಗೆ ಯಾವಾಗ ನೋಡಿದರೂ ಉಗುರು ಕಚ್ಚುವ (Nail Biting Habit) ಅಭ್ಯಾಸವಿರುತ್ತದೆ. ಈ ಪೈಕಿ  ಕೆಲವರಿಗೆ ಇದು ಒಳ್ಳೆಯ ಅಭ್ಯಾಸವಲ್ಲ ಎಂದು ಗೊತ್ತಿದ್ದರೂ ಮತ್ತೆ ಮತ್ತೆ ಅದನ್ನೇ ಮಾಡುತ್ತಿರುತ್ತಾರೆ.  ನಿಮಗೂ ಈ ಕೆಟ್ಟ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಇದರಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳು (Health Problem) ಎದುರಾಗುತ್ತವೆ.  ಉಗುರುಗಳನ್ನು ಅಗಿಯುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈ ಕೆಟ್ಟ ಅಭ್ಯಾಸವು ಚರ್ಮದಿಂದ ಹಿಡಿದು ಹಲ್ಲುಗಳ ಆಕಾರವನ್ನು ಕೂಡಾ ಹಾಳು ಮಾಡುತ್ತದೆ. 

1. ಸಂಧಿವಾತಕ್ಕೆ ಕಾರಣವಾಗಬಹುದು : 
ವರ್ಷಗಳಿಂದ ಉಗುರುಗಳನ್ನು ಅಗಿಯುವ ಅಭ್ಯಾಸದಿಂದ, ದೇಹದ ಒಳಗೆ  ಪರೋನಿಚಿಯಾದಂತಹ (Paronychia) ಅನೇಕ ಬ್ಯಾಕ್ಟೀರಿಯಾಗಳು ಸೇರಲು ಕಾರಣವಾಗುತ್ತದೆ.  ಈ ಬ್ಯಾಕ್ಟೀರಿಯಾಗಳು ಕೈಕಾಲುಗಳ ಸಂಧಿಗಳ ಮೇಲೆ ಪ್ರಭಾವ ಬೀರುತ್ತದೆ.  ಇದನ್ನು ಸೆಪ್ಟಿಕ್ ಆರ್ಥರೈಟಿಸ್ (Septic Arthritis) ಎಂದು ಕರೆಯುತ್ತಾರೆ. ಈ ರೋಗಕ್ಕೆ  ಚಿಕಿತ್ಸೆ ಅಷ್ಟು ಸುಲಭವಲ್ಲ. ಇದು ಶಾಶ್ವತ ಅಂಗವೈಕಲ್ಯಕ್ಕೂ (Permanent Disability)  ಕಾರಣವಾಗಬಹುದು.

ಇದನ್ನೂ ಓದಿ : Warm Water In Summers: ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿಯೂ ಬಿಸಿ ನೀರು ಸೇವಿಸಿ, ಈ ಸಮಸ್ಯೆಗಳಿಂದ ದೂರವಿರಿ

2. ಚರ್ಮದ ಹಾನಿ ಸಂಭವಿಸಬಹುದು:
ಉಗುರು ಕಚ್ಚುವ ಅಭ್ಯಾಸ (Nail Biting Habit)  ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಬಹುದು. ಇದು ಮುಖದ ಮೇಲೆ ಕೆಂಪು ಕಲೆ ಮತ್ತು ಊತಕ್ಕೆ ಕಾರಣವಾಗಬಹುದು.  ಉಗುರುಗಳ ಕೆಳಗೆ ಬ್ಯಾಕ್ಟೀರಿಯಾದ ಸೋಂಕು  (Bacterial Infection) ಕಂಡು ಬರಬಹುದು. ಈ ಕಾರಣದಿಂದಾಗಿ, ಕೀವು ಕಾಣಿಸಿಕೊಳ್ಳುತ್ತದೆ. ಹೀಗಾದರೆ ಸಹಿಸಲು ಸಾಧ್ಯವಾಗದ ನೋವು ಕಾಣಿಸಿಕೊಳ್ಳುತ್ತದೆ. 

3. ಹಲ್ಲುಗಳ ಆಕಾರ ಹದಗೆಡಬಹುದು:  
ಉಗುರು ಕಚ್ಚುವ ಅಭ್ಯಾಸದಿಂದ ಬಳಲುತ್ತಿರುವ ಜನರ ಹಲ್ಲುಗಳಲ್ಲಿ ಅನೇಕ ಸಮಸ್ಯೆಗಳು (Dental problem) ಎದುರಾಗಬಹುದು. ಈ ಕಾರಣದಿಂದಾಗಿ, ಹಲ್ಲುಗಳು ಮುರಿಯಬಹುದು. ಹಲ್ಲುಗಳು (Teeth) ಬಿರುಕು ಬಿಡಬಹುದು. ಹಲ್ಲುಗಳ ಮಧ್ಯೆ ಕಲೆಗಳು ಕೂಡ ರೂಪುಗೊಳ್ಳಬಹುದು.   ಇದು  ಒಸಡುಗಳು ದುರ್ಬಲಗೊಳ್ಳಲು ಕೂಡಾ ಕಾರಣವಾಗುತ್ತದೆ. 

ಇದನ್ನೂ ಓದಿ :Skin care : ಈ Scrub ಬಳಸಿದರೆ ಕಲೆ ರಹಿತ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು

4. ಉಗುರು ಬೆಳವಣಿಗೆ ನಿಲ್ಲಬಹುದು:
 ವರ್ಷಗಳಿಂದ ಉಗುರುಗಳನ್ನು ಅಗಿಯುತ್ತಿದ್ದರೆ, ಅದನ್ನು ದೀರ್ಘಕಾಲದ ಅಭ್ಯಾಸ (Chronic Habit) ಎಂದು ಪರಿಗಣಿಸಬೇಕಾಗುತ್ತದೆ.  ಇದರಿಂದ  ಉಗುರಿನೊಳಗಿನ ಟಿಶ್ಯೂ ಹಾಳಾಗಬಹುದು. ಇದು ಶಾಶ್ವತ ಹಾನಿಯನ್ನುಂಟುಮಾಡುತ್ತದೆ. ಉಗುರುಗಳನ್ನು ಅಗಿಯುವ ಅಭ್ಯಾಸದಿಂದ ಉಗುರುಗಳ ಬೆಳವಣಿಗೆ ನಿಂತು ಹೋಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News