Milk Side Effects: ಖಾಲಿ ಹೊಟ್ಟೆಗೆ ಹಾಲು ಕುಡಿಯುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ, ಈ ಸಮಸ್ಯೆಗಳನ್ನು ಹೆಚ್ಚಿಸಬಹುದು

ಒಂದು ಲೋಟ ಹಾಲು ಅಥವಾ ಕೋಲ್ಡ್ ಕಾಫಿಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿದರೆ, ಅದರ ಪರಿಣಾಮ ಏನೆಂದು ನೀವು ತಿಳಿದಿರಬೇಕು.

Written by - Ranjitha R K | Last Updated : Dec 1, 2021, 10:57 AM IST
  • ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಎಲ್ಲರಿಗೂ ಒಳ್ಳೆಯದಲ್ಲ.
  • ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು
  • ಬೆಳಿಗ್ಗೆ ಹಾಲಿನ ಬದಲು ಮಜ್ಜಿಗೆ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.
 Milk Side Effects: ಖಾಲಿ ಹೊಟ್ಟೆಗೆ ಹಾಲು ಕುಡಿಯುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ,  ಈ ಸಮಸ್ಯೆಗಳನ್ನು ಹೆಚ್ಚಿಸಬಹುದು  title=
ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಎಲ್ಲರಿಗೂ ಒಳ್ಳೆಯದಲ್ಲ. (file photo)

ನವದೆಹಲಿ : ಕೆಲವರಿಗೆ ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಲು ಕುಡಿಯುವ ಅಭ್ಯಾಸವಿರುತ್ತದೆ.  ಹಾಲು ಆರೋಗ್ಯಕ್ಕೆ ಒಳ್ಳೆಯದು ಹೌದು. ಆದರೆ ಖಾಲಿ ಹೊಟ್ಟೆಗೆ ಹಾಲು (Milk) ಕುಡಿಯುವುದು ಒಳ್ಳೆಯದಲ್ಲ. ತಜ್ಞರ ಪ್ರಕಾರ, ಖಾಲಿ ಹೊಟ್ಟೆಗೆ ಹಾಲು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ (Side effects of milk). ಹಾಲಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕಾಂಶಗಳಿರುತ್ತವೆ. ಹಾಲು ಸಂಪೂರ್ಣ ಆಹಾರವಿದ್ದಂತೆ. ಆದ್ದರಿಂದ ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೀಗಾದಾಗ  ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಹಾಲು ಕುಡಿಯುವ ಆಭ್ಯಾಸ ಇಡೀ ದಿನದ ಮೇಲೆ ಪರಿಣಾಮ ಬೀರಬಹುದು. 

ಈ ಸಮಸ್ಯೆ ಇದ್ದರೆ ಖಂಡಿತ್ತಾ ಬೇಡ ಹಾಲು : 
ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಪ್ರಯೋಜನಕಾರಿ (Benefits of Milk) ಎಂದು ಹೇಳಲಾಗುತ್ತದೆ. ಆದರೆ ಇದು ಅನಾನುಕೂಲತೆಗಳನ್ನು ಕೂಡಾ ಹೊಂದಿದೆ. ರಾತ್ರಿ ಮಲಗುವ ಮುನ್ನ ಹಾಲನ್ನು ಸೇವಿಸುವುದು ಎಂದರೆ ಆಹಾರ ಸೇವಿಸಿದ ತಕ್ಷಣ ಮತ್ತೆ ಭಾರೀ ಆಹಾರವನ್ನು ತೆಗೆದುಕೊಂಡಂತೆ.

ಇದನ್ನೂ ಓದಿ : Health Tips: ಚಳಿಗಾಲದಲ್ಲಿ ಪ್ರತಿದಿನ ಶುಂಠಿ ಹಾಲು ಕುಡಿಯಿರಿ, ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?

ಒಂದು ಲೋಟ ಹಾಲು ಅಥವಾ ಕೋಲ್ಡ್ ಕಾಫಿಯೊಂದಿಗೆ (Cold Coffee) ನಿಮ್ಮ ದಿನವನ್ನು ಪ್ರಾರಂಭಿಸಿದರೆ, ಅದರ ಪರಿಣಾಮ ಏನೆಂದು ನೀವು ತಿಳಿದಿರಬೇಕು. ಮೊದಲೇ ಹೇಳಿದಂತೆ, ಹಾಲು ಸಂಪೂರ್ಣ ಆಹಾರವಿದ್ದಂತೆ. ಅನೇಕ ಬಾರಿ ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಪ್ರಾರಂಭಿಸುವ ನೇಕ ಮಂದಿ ಇದ್ದಾರೆ. ಆದರೆ ತಜ್ಞರ ಪ್ರಕಾರ,  ಗ್ಯಾಸ್ಟ್ರಿಕ್ ಸಮಸ್ಯೆಗಳು (Gastric problem) ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಖಾಲಿ ಹೊಟ್ಟೆಯಲ್ಲಿ ಹಾಲು ಸೇವಿಸಬಾರದು (Milk on empty stomach) . ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. 

ಜೀರ್ಣಕ್ರಿಯೆಯ ಮೇಲೆ ಪರಿಣಾಮ :
ಹಾಲಿನ ಬದಲಿಗೆ, ನಿಂಬೆ ಪಾನಕ (Lime juice) ಅಥವಾ ಆಪಲ್ ಸೈಡರ್ ವಿನೆಗರ್ ನೊಂದಿಗೆ ದಿನವನ್ನು ಪ್ರಾರಂಭಿಸಿ. ಇಲ್ಲ, ಯಾವುದಾದರು ಕಾಳಿನ ಜೊತೆಗೆ ಹಾಲನ್ನು ತೆಗೆದುಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ಏನಾದರೂ ಹಗುರವಾದ ಆಹಾರವನ್ನು ಸೇವಿಸಬೇಕು. ಇದು  ಜೀರ್ಣಾಂಗ ವ್ಯವಸ್ಥೆಯ ಶುದ್ಧೀಕರಣದಲ್ಲಿ ಪರಿಣಾಮವಾಗಿ ಕಾರ್ಯನಿರ್ವಹಿಸುತ್ತದೆ. ಹಾಲಿನ ಬದಲಿಗೆ ಮಜ್ಜಿಗೆಯನ್ನು ಬಳಸಬಹುದು.  

ಅಲರ್ಜಿ ಸಮಸ್ಯೆ ಇದ್ದರೆ :
ಆಯುರ್ವೇದದ (Ayurveda) ಪ್ರಕಾರ ಖಾಲಿ ಹೊಟ್ಟೆಯಲ್ಲಿ ಹಾಲು ಸೇವನೆ ಎಲ್ಲರಿಗೂ ಸರಿಯಲ್ಲ. ವ್ಯಕ್ತಿ ಯಾವ ರೀತಿಯ ಜೀರ್ಣಕಾರಿ ಶಕ್ತಿ ಅಥವಾ ರಚನೆಯನ್ನು ಹೊಂದಿರುತ್ತಾರೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ನಿಮಗೆ ಪಿತ್ತ ಅಥವಾ ಕಫಕ್ಕೆ  ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಖಾಲಿ ಹೊಟ್ಟೆಯಲ್ಲಿ ಹಾಲನ್ನು ಸೇವಿಸಬಾರದು. ಕಫ ಅಥವಾ ಜ್ವರದ ಸಮಸ್ಯೆಯಲ್ಲಿ, ಖಾಲಿ ಹೊಟ್ಟೆಯಲ್ಲಿ ಹಾಲನ್ನು ಸೇವಿಸುವುದು  ಬಹಳ ಹಾನಿಕಾರಕವಾಗಿರುತ್ತದೆ. 

ಇದನ್ನೂ ಓದಿ : DARK CHOCOLATE: ಡಾರ್ಕ್ ಚಾಕೊಲೇಟ್‌ ತಿನ್ನುವುದರಿಂದ ಎಷ್ಟೆಲ್ಲ ಲಾಭ ಗೊತ್ತೇ?  

ಯಾರಿಗಾದರೂ ಹೈಪರ್ ಆಸಿಡಿಟಿ ಸಮಸ್ಯೆ ಇದ್ದರೆ ,ತಣ್ಣನೆಯ ಹಾಲನ್ನು ಕುಡಿಯಿರಿ. ತಜ್ಞರ ಪ್ರಕಾರ, ಹಾಲು ಸೇವಿಸಿದ ನಂತರ ಪ್ರತಿಯೊಬ್ಬ ವ್ಯಕ್ತಿಯ ದೇಹವು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಯಾವುದೇ ರೀತಿಯ ಅಲರ್ಜಿ (Allergy) ಸಮಸ್ಯೆ ಇರುವವರು ಹಾಲನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ನಿಮ್ಮ ದೇಹದ ಪ್ರಕಾರ, ತಜ್ಞರ ಸಲಹೆಯ ಮೇರೆಗೆ, ಯಾವ ಸಮಯದಲ್ಲಿ ಹಾಲು ಸೇವನೆಯು ನಿಮಗೆ ಪ್ರಯೋಜನಕಾರಿಯಾಗಲಿದೆ ಎನ್ನುವುದನ್ನು ತಿಳಿದುಕೊಂಡು ಹಾಲು ಕುಡಿಯುವುದು ಉತ್ತಮ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News