Health benefits of drinking turmeric water : ಅರಿಶಿನವು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಇರುವಂತಹ ಮಸಾಲೆಯಾಗಿದೆ. ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುವ ಅನೇಕ ಔಷಧೀಯ ಗುಣಗಳು ಅರಿಶಿನದಲ್ಲಿ ಕಂಡುಬರುತ್ತವೆ. ಅದರ ಗುಣಲಕ್ಷಣಗಳಿಂದಾಗಿ, ದೇಹವನ್ನು ರೋಗ ಮುಕ್ತವಾಗಿಡಲು ಸಹಾಯಕವಾಗಿದೆ. ಅರಿಶಿನವನ್ನು ಸಾಮಾನ್ಯವಾಗಿ ಆಹಾರಗಳ ಬಣ್ಣ ಮತ್ತು ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ಗಾಯಗಳನ್ನು ಗುಣಪಡಿಸಲು ಕೂಡಾ ಅರಿಶಿನವನ್ನು ಬಳಸಲಾಗುತ್ತದೆ. ಆದರೆ ಅರಿಶಿನ ನೀರು ನೀಡುವ ಆರೋಗ್ಯ ಪ್ರಯೋಜನಗಳ ಬಗ್ಗೆ ಎಂದಾದರೂ ತಿಳಿದಿದ್ದೀರಾ? ಪ್ರತಿದಿನ ಅರಿಶಿನ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು.
ಅರಿಶಿನ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು :
ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು :
ನಿಯಮಿತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಸೇವಿಸಿದರೆ, ನಿಧಾನವಾಗಿ ಹೊಟ್ಟೆಯ ಕೊಬ್ಬು ಕರಗಲು ಆರಂಭಿಸುತ್ತದೆ. ಕೊಬ್ಬನ್ನು ಸುಡುವಲ್ಲಿ ಅತ್ಯುತ್ತಮ ಪರಿಣಾಮವನ್ನು ಬೀರುವ ಅನೇಕ ಗುಣಗಳನ್ನು ಅರಿಶಿನ ಹೊಂದಿದೆ.
ಇದನ್ನೂ ಓದಿ : ಬಿಳಿ ಮುಟ್ಟಿನ ಸಮಸ್ಯೆ ಕೂಡ ಜೀವಕ್ಕೆ ಅಪಾಯ; ಪರಿಹಾರಕ್ಕಾಗಿ ಇಲ್ಲಿದೆ ಸರಳ ಮನೆ ಮದ್ದು!
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು :
ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಅದು ಕಡಿಮೆ ರೋಗನಿರೋಧಕ ಶಕ್ತಿಯ ಸಂಕೇತವಾಗಿದೆ. ಹೀಗಿರುವಾಗ ಅರಿಶಿನ ನೀರನ್ನು ಸೇವಿಸಿದರೆ, ರೋಗನಿರೋಧಕ ಶಕ್ತಿ ಸುಧಾರಿಸಲು ಪ್ರಾರಂಭಿಸುತ್ತದೆ. ಇದಲ್ಲದೆ, ನೀವು ಶೀತ ಮತ್ತು ಜ್ವರದಂತಹ ವೈರಸ್ ಸೋಂಕಿನಿಂದಲೂ ಮುಕ್ತಿ ಪಡೆಯಬಹುದು.
ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ನಲ್ಲಿ ಸಹಕಾರಿ :
ನಿಯಮಿತವಾಗಿ ಅರಿಶಿನ ನೀರನ್ನು ಕುಡಿಯುತ್ತಿದ್ದರೆ, ಮಧುಮೇಹ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಇದನ್ನು ಸೇವಿಸುವ ಮೂಲಕ, ಅಧಿಕ ರಕ್ತದ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಕೂಡಾ ಪರಿಹಾರವಾಗುತ್ತದೆ.
ಇದನ್ನೂ ಓದಿ : ಪೌಷ್ಟಿಕಾಂಶದ ಆಗರವಾಗಿರುವ ಈ ಕಾಳು ದೇಹ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಬೆಸ್ಟ್ ಆಯ್ಕೆ
ದೇಹವನ್ನು ನಿರ್ವಿಷಗೊಳಿಸಲು ಸಹಕಾರಿ :
ಅರಿಶಿನವು ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿದ್ದು ಅದು ನಿಮ್ಮ ದೇಹವನ್ನು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಉಪಯುಕ್ತವಾಗಿದೆ. ಆದ್ದರಿಂದ, ನಿಯಮಿತವಾಗಿ ಅರಿಶಿನ ನೀರನ್ನು ಕುಡಿಯುತ್ತಿದ್ದರೆ, ನಿಮ್ಮ ದೇಹದಲ್ಲಿ ಸಂಗ್ರಹವಾದ ವಿಷವು ಸುಲಭವಾಗಿ ಹೊರಬರಲು ಪ್ರಾರಂಭಿಸುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.