ಹಳ್ಳಿಗಾಡಿನಲ್ಲಿ ಉಚಿತವಾಗಿ ಸಿಗುವ ಈ ಹಣ್ಣು ಆಮಶಂಕೆಯಿಂದ ಮಧುಮೇಹದವರೆಗೂ ರಾಮಬಾಣವಿದ್ದಂತೆ..!

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯಿದೆ. ಹಾಗೆಯೇ, ನಮಗೆ ಸುಲಭವಾಗಿ ಉಚಿತವಾಗಿ ಸಿಗುವ ಕೆಲವು ಸೊಪ್ಪು, ತರಕಾರಿ, ಹಣ್ಣುಗಳನ್ನು ನಿರ್ಲಕ್ಷಿಸುತ್ತೇವೆ. ಅವುಗಳಲ್ಲಿ ಈ ಹಣ್ಣು ಕೂಡ ಒಂದು. 

Written by - Yashaswini V | Last Updated : Oct 1, 2024, 01:35 PM IST
  • ಹಳ್ಳಿಗಾಡಿನಲ್ಲಿ ಸುಲಭವಾಗಿ ಸಿಗುವ ಈ ಹಣ್ಣಿನಲ್ಲಿದೆ ಹಲವು ಪೋಷಕಾಂಶಗಳು
  • ಈ ಹಣ್ಣನ್ನು ತಿಂದ್ರೆ ಹೆಚ್ಚಾಗಲ್ಲ ಬ್ಲಡ್ ಶುಗರ್
ಹಳ್ಳಿಗಾಡಿನಲ್ಲಿ ಉಚಿತವಾಗಿ ಸಿಗುವ ಈ ಹಣ್ಣು ಆಮಶಂಕೆಯಿಂದ ಮಧುಮೇಹದವರೆಗೂ ರಾಮಬಾಣವಿದ್ದಂತೆ..!  title=

ಬೆಂಗಳೂರು: ಹಳ್ಳಿಗಾಡು ಪ್ರದೇಶಗಳಲ್ಲಿನ ವಾತಾವರಣವೇ ಮನುಷ್ಯರ ಆರೋಗ್ಯಕ್ಕೆ ನೈಸರ್ಗಿಕ ಕೊಡುಗೆ ಆಗಿದೆ. ಇಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಸೊಪ್ಪು, ತರಕಾರಿ, ಹಣ್ಣುಗಳು ಹಲವು ಕಾಯಿಲೆಗಳಿಗೆ ಅತ್ಯುತ್ತಮ ಮದ್ದು ಎಂದರೂ ತಪ್ಪಾಗುವುದಿಲ್ಲ. ಅಂತಹದ್ದೇ ಒಂದು ಹಣ್ಣು "ನೇರಳೆ ಹಣ್ಣು". 

ಗ್ರಾಮಾಂತರ ಭಾಗಗಳಲ್ಲಿ ಹೊಲ, ಗದ್ದೆಗಳ ಅಂಚಿನಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಸಿಗುವ ನೇರಳೆ ಹಣ್ಣು ಆರೋಗ್ಯದ ಗಣಿ. ಪ್ರಸ್ತುತ, ಜಾಮೂನ್ ಎಂತಲೇ ಪ್ರಸಿದ್ದಿಯಾಗಿರುವ ಈ ಹಣ್ಣು ಹಲವು ರೋಗಗಳಿಗೆ ರಾಮಬಾಣವಿದ್ದಂತೆ. 

ಇದನ್ನೂ ಓದಿ- ದಿನ ಬೆಳಿಗ್ಗೆ ಈ ಪಾನೀಯಗಳನ್ನ ಕುಡಿದ್ರೆ ಎಷ್ಟೇ ವರ್ಷದ ಫ್ಯಾಟ್ ಆದ್ರೂ ಕೆಲವೇ ದಿನದಲ್ಲಿ ಕರಗುತ್ತೆ 

ನೇರಳೆ ಹಣ್ಣಿನಲ್ಲಿರುವ ಪೋಷಕಾಂಶಗಳು: 
ನೇರಳೆ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾದ ಪ್ರೊಟೀನ್, ಕಾರ್ಬೊಹೈಡ್ರೇಟ್, ಪಾಸ್ಪರಸ್, ಪೊತ್ಯಾಸಿಯಮ್, ಗಂಧಕ, ಥಯಾಮಿನ್, ಪೋಲಿಕ್ ಆಮ್ಲ, ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ತಾಮ್ರ, ವಿಟಮಿನ್ ಎ, ಸಿ, ನಿಕೋಟಿನಿಲ್ ಆಮ್ಲ ಸಮೃದ್ಧವಾಗಿದೆ. 

ಇದನ್ನೂ ಓದಿ- ಮಧುಮೇಹಕ್ಕಷ್ಟೇ ಅಲ್ಲ ಕೂದಲು, ಚರ್ಮದ ಆರೈಕೆಗೂ ಅತ್ಯುತ್ತಮ ಮನೆಮದ್ದು 'ಜಾಮೂನ್ ಹಣ್ಣು'​

ಈ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಮದ್ದು ನೇರಳೆ ಹಣ್ಣು: 
* ಪಿತ್ತ ಸಂಬಂಧಿತ ಸಮಸ್ಯೆ:

ನೇರಳೆ ಹಣ್ಣಿನ ರಸ ಸೇವನೆಯು ಪಿತ್ತ ಸಂಬಂಧಿತ ಸಮಸ್ಯೆಗಳನ್ನು ತಕ್ಷಣವೇ ಉಪಶಮನ ಮಾಡುತ್ತದೆ. 

* ಆಮಶಂಕೆ ಸಮಸ್ಯೆ: 
ಆಮಶಂಕೆ ಸಮಸ್ಯೆ ಇರುವವರು ನೇರಳೆ ಜ್ಯೂಸ್ ಕುಡಿಯುವುದರಿಂದ ಪರಿಹಾರ ಪಡೆಯಬಹುದು. 

* ನಿದ್ರಾಹೀನತೆ: 
ಅಂಗೈ, ಅಂಗಾಲು ಉರಿಯಿಂದ ರಾತ್ರಿ ವೇಳೆ ನಿದ್ರೆ ಬರುತ್ತಿಲ್ಲ ಎಂದಾದರೆ ಜೇನುತುಪ್ಪದಲ್ಲಿ ಬೆರೆಸಿದ ಜಾಮೂನ್ ತಿನ್ನುವುದು ಹೆಚ್ಚು ಲಾಭದಾಯಕ.

* ಮಧುಮೇಹ: 
ನೇರಳೆ ಹಣ್ಣಿನ ಒಣ ಬೀಜವನ್ನು ಪುಡಿ ಮಾಡಿ ನಿತ್ಯವೂ ಚಿಟಿಕೆಯಷ್ಟು ಈ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದರಿಂದ ಮಧುಮೇಹ ಯಾವತ್ತೂ ಹೆಚ್ಚಾಗುವುದಿಲ್ಲ. 

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News