Cholesterol control : ʼಕೊಲೆಸ್ಟ್ರಾಲ್ʼ ಹೆಚ್ಚುತ್ತಿದೆಯೇ? ಈ ಸೂಪರ್ ಫುಡ್ ಗಳಿಂದ ಕೊಬ್ಬು ಕರಗಿಸಿ..!

Control Cholestero by food : ಶರೀರದಲ್ಲಿ LDL (Low-density lipoprotein) ಪರಿಮಾಣದಿಂದಾಗಿ ಕೊಬ್ಬು ಹೆಚ್ಚಾಗಿ ಬೆಳೆಯುವುದರಿಂದ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಎಷ್ಟು ಬೇಗನೆ ಕೊಬ್ಬನ್ನು ನಿಯಂತ್ರಣ ಮಾಡುತ್ತೇವೆಯೊ ಅಷ್ಟು ಉತ್ತಮ. ಇಲ್ಲದಿದ್ದರೆ ತೀವ್ರ ಅನಾರೋಗ್ಯ ಸಮಸ್ಯೆಗಳು ತಪ್ಪವು!

Written by - Krishna N K | Last Updated : Apr 23, 2023, 04:44 PM IST
  • ಎಲ್‌ಡಿಎಲ್ ಕೆಟ್ಟ ಕೊಲೆಸ್ಟ್ರಾಲ್ ದೇಹಕ್ಕೆ ಹಾನಿಕರ.
  • ಎಷ್ಟು ಬೇಗನೆ ಕೊಬ್ಬನ್ನು ನಿಯಂತ್ರಣ ಮಾಡುತ್ತೇವೆಯೊ ಅಷ್ಟು ಉತ್ತಮ.
  • ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ಹೇಗೆ ಪಡೆಯುವುದು ಎಂದು ತಿಳಿಯೋಣ.
 Cholesterol control : ʼಕೊಲೆಸ್ಟ್ರಾಲ್ʼ ಹೆಚ್ಚುತ್ತಿದೆಯೇ? ಈ ಸೂಪರ್ ಫುಡ್ ಗಳಿಂದ ಕೊಬ್ಬು ಕರಗಿಸಿ..! title=

Tips to Control Cholesterol : ದೇಹದಲ್ಲಿ ಎರಡು ವಿಧದ ಕೊಲೆಸ್ಟ್ರಾಲ್‌ಗಳಿರುತ್ತವೆ, ಒಂದು HDL ಮತ್ತೊಂದು LDL. ಹೆಚ್‌ಡಿಎಲ್‌ ದೇಹಕ್ಕೆ ಉತ್ತಮ, ಎಲ್‌ಡಿಎಲ್ ಕೆಟ್ಟ ಕೊಲೆಸ್ಟ್ರಾಲ್ ಆಗಿದ್ದು ದೇಹದ ಆಕಾರ ಹೆಚ್ಚಿಸುತ್ತದೆ. ಇದರಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ತೊಂದರೆಗಳು ಉಂಟಾಗುತ್ತವೆ. ಇದಲ್ಲದೆ, ರಕ್ತನಾಳಗಳಲ್ಲಿ ಈ ಎಲ್‌ಡಿಎಲ್‌ ಶೇಖರಣೆಯಿಂದಾಗಿ ಹೃದಯಾಘಾತದ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

ಆದ್ದರಿಂದ, ವಿವಿಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರಾಣಾಪಾಯವಾಗುವ ಸಂಭವವಿದೆ. ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ಹೇಗೆ ಪಡೆಯುವುದು ಎಂದು ತಿಳಿಯೋಣ. 

ಇದನ್ನೂ ಓದಿ: Health Tips: ಒಂದಲ್ಲ, ಎರಡಲ್ಲ…11 ಔಷಧೀಯ ಗುಣವುಳ್ಳ ಈ ಬಣ್ಣದ ಅಕ್ಕಿಯ ಗಂಜಿ ಕ್ಯಾನ್ಸರ್ ರೋಗವನ್ನು ಬುಡಸಮೇತ ಕಿತ್ತುಹಾಕುತ್ತೆ!

ಸೇಬು ಹಣ್ಣು : ಸೇಬುಗಳು ಪೆಕ್ಟಿನ್‌ನಂತಹ ಕರಗುವ ಫೈಬರ್‌ಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ ಪ್ರತಿದಿನ ಸೇಬುಗಳನ್ನು ತಿನ್ನುವುದರಿಂದ ಎಲ್‌ಡಿಎಲ್‌ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದಲ್ಲದೆ, ಇದರಲ್ಲಿರುವ ಫೈಬರ್ ಪ್ರಮಾಣವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇದು ಪರಿಣಾಮಕಾರಿಯಾಗಿದೆ. 

ಬಾದಾಮಿ: ಬಾದಾಮಿಯಲ್ಲಿರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು 7 ರಿಂದ 10 ಬಾದಾಮಿಗಳನ್ನು ತೆಗೆದುಕೊಳ್ಳಬೇಕು. 

ಇದನ್ನೂ ಓದಿ: Skin Care: ಮೊಡವೆ ಸಮಸ್ಯೆ ಬುಡಸಮೇತ ಕಿತ್ತೊಗೆಯಲು ಕಿತ್ತಳೆ ಹಣ್ಣಿನ ಸಿಪ್ಪೆ ಬೆಸ್ಟ್! ಹೀಗೆ ಹಚ್ಚಿದರೆ ಅದ್ಭುತ ಪ್ರಯೋಜನ

ಬಾರ್ಲಿ, ಓಟ್ಸ್: ಈ ಆಹಾರಗಳಲ್ಲಿ ಬೀಟಾ-ಗ್ಲುಕಾನ್‌ಗಳಂತಹ ಕರಗುವ ಫೈಬರ್‌ನಲ್ಲಿ ಅಧಿಕವಾಗಿರುತ್ತದೆ. ಹಾಗಾಗಿ ಇವುಗಳನ್ನು ಪ್ರತಿದಿನ ಆಹಾರದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ನಿವಾರಣೆಯಾಗುತ್ತವೆ. ಇದರ ಗುಣಲಕ್ಷಣಗಳು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಆದ್ದರಿಂದ ನೀವು ಪ್ರತಿದಿನ ಬಾರ್ಲಿ ಮತ್ತು ಓಟ್ಸ್‌ನಿಂದ ಮಾಡಿದ ರೊಟ್ಟಿಗಳನ್ನು ತಿನ್ನುವುದು ಉತ್ತಮ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News