Cholesterol Control Tips In Kannada: ಬೆರ್ಗಮಾಟ್ ಕಿತ್ತಳೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ: ನಾವು ಹೆಚ್ಚು ಉಪ್ಪು ಅಥವಾ ಹೆಚ್ಚು ಎಣ್ಣೆಯನ್ನು ಹೊಂದಿರುವ ವಸ್ತುಗಳನ್ನು ತಿನ್ನುತ್ತೇವೆ, ಇದರಿಂದಾಗಿ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಆದರೆ ಎಷ್ಟೋ ಸಲ ಇಂತಹ ಪದಾರ್ಥಗಳನ್ನು ತಿನ್ನದೇ ಹೋದರೂ ನಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾಗುವುದು ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಬಿಡುವಿಲ್ಲದ ಜೀವನ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುವುದು ಸಾಮಾನ್ಯವಾಗಿದೆ, ಇದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ಒಂದು ನಿರ್ದಿಷ್ಟ ಹಣ್ಣು ನಿಮ್ಮ ಹೆಚ್ಚಿದ ಕೊಲೆಸ್ಟ್ರಾಲ್ ಮತಾವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿದೆಯಾ? ಹೌದು, ನಾವು "ಬೆರ್ಗಮಾಟ್ ಕಿತ್ತಳೆ" ಬಗ್ಗೆ ಮಾತನಾಡುತ್ತಿದ್ದೇವೆ. (Health News In Kannada)
ಬೆರ್ಗಮಾಟ್ ಕಿತ್ತಳೆ ಎಂದರೇನು?
ಬರ್ಗಮಾಟ್ ದಕ್ಷಿಣ ಇಟಲಿಯ ಕ್ಯಾಲಬ್ರಿಯಾ ಪ್ರದೇಶದಲ್ಲಿ ಕಂಡುಬರುವ ಸಿಟ್ರಸ್ ಪ್ರಜಾತಿಯ ಹಣ್ಣಾಗಿದೆ. ಜ್ವರ ಮತ್ತು ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಾಂಪ್ರದಾಯಿಕ ಇಟಾಲಿಯನ್ ಔಷಧದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇತ್ತೀಚೆಗೆ, ಕೆಲವು ಸಂಶೋಧನೆಗಳು ಈ ಹಣ್ಣಿನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಬಹಿರಂಗಪಡಿಸಿವೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ ಎಂದು ಅವು ಸಾರಿವೆ.
ಬರ್ಗಮಾಟ್ ಕಿತ್ತಳೆ ಕೊಲೆಸ್ಟ್ರಾಲ್ ಅನ್ನು ಹೇಗೆ ನಿಯಂತ್ರಿಸುತ್ತದೆ?
ಬೆರ್ಗಮಾಟ್ ಕಿತ್ತಳೆ ತಿನ್ನುವುದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಕ್ಲಿನಿಕಲ್ ಅಧ್ಯಯನಗಳು ಕಂಡುಕೊಂಡಿವೆ. ಈ ಹಣ್ಣು ದೇಹದ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬೆರ್ಗಮಾಟ್ ಕಿತ್ತಳೆಯಲ್ಲಿರುವ ಪಾಲಿಫಿನಾಲ್ಗಳು ಕೊಲೆಸ್ಟ್ರಾಲ್ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ನಿರ್ದಿಷ್ಟ ಕಿಣ್ವಗಳ ಮೇಲೆ ಪರಿಣಾಮ ಬೀರಬಹುದು ಎಂದು ಲ್ಯಾಬ್ ಅಧ್ಯಯನಗಳು ಸೂಚಿಸುತ್ತವೆ.
ಬೆರ್ಗಮಾಟ್ ಕಿತ್ತಳೆ ಈ ಕೆಳಗಿನ ಫಲಿತಾಂಶಗಳನ್ನು ಹೊಂದಿದೆ ಎಂದು 12 ಅಧ್ಯಯನಗಳು ಪತ್ತೆ ಹಚ್ಚಿವೆ:
ಒಟ್ಟು ಕೊಲೆಸ್ಟ್ರಾಲ್ ಅನ್ನು 12.3% ರಿಂದ 31.3% ಕ್ಕೆ ಇಳಿಸುತ್ತದೆ
LDL ಕೊಲೆಸ್ಟ್ರಾಲ್ನಲ್ಲಿ 7.6% ರಿಂದ 40.8% ರಷ್ಟು ಇಳಿಕೆ ಮಾಡುತ್ತದೆ.
ಟ್ರೈಗ್ಲಿಸರೈಡ್ಗಳಲ್ಲಿ 11.5% ರಿಂದ 39.5% ರಷ್ಟು ಇಳಿಕೆ ಮಾಡುತ್ತದೆ.
ಇದನ್ನೂ ಓದಿ-ರಕ್ತನಾಳಗಳಲ್ಲಿ ಜಿಡ್ಡುಗಟ್ಟಿ ಕುಳಿತಿರುವ Bad Cholesterol ಅನ್ನು ಕರಗಿಸುವ ಶಕ್ತಿ ಈ ಹಸಿರು ಸೊಪ್ಪುಗಳಿಗಿವೆ
ಒಟ್ಟು ಎಂಟು ಪ್ರಯೋಗಗಳಲ್ಲಿ, ಬೆರ್ಗಮಾಟ್ ಕಿತ್ತಳೆ ಸೇವನೆಯ ನಂತರ ಉತ್ತಮ ಕೊಲೆಸ್ಟ್ರಾಲ್ (ಎಚ್ಡಿಎಲ್) ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ನ ಮಟ್ಟವು ಹೆಚ್ಚಾಗುತ್ತದೆ ಎಂದು ಕಂಡುಬಂದಿದೆ. ಈ ಅಧ್ಯಯನಗಳು ಬೆರ್ಗಮಾಟ್ ಕಿತ್ತಳೆಯ ಪರಿಣಾಮಗಳು ಡೋಸ್ ಅವಲಂಬಿತವಾಗಿರಬಹುದು ಮತ್ತು ಅದನ್ನು ಸ್ಟ್ಯಾಟಿನ್ ಔಷಧಿಗಳ ಸಂಯೋಜನೆಯಲ್ಲಿ ತೆಗೆದುಕೊಳ್ಳಬಹುದು ಎಂದು ತೋರಿಸಿವೆ. ವಿಶೇಷವಾಗಿ ಸ್ಟ್ಯಾಟಿನ್ ಔಷಧಿಗಳನ್ನು (ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುವ ಔಷಧಿಗಳು) ತೆಗೆದುಕೊಳ್ಳದವರಿಗೆ ಬೆರ್ಗಮಾಟ್ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ-Bad Cholesterol Control: ಶರೀರದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರ ಹಾಕುವ ದಮ್ಮು ಈ ಹಸಿರು ಎಲೆಗಳಲ್ಲಿದೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.