ನಗಬೇಡಿ..! ಹೃದಯಾಘಾತ ಬಾತ್ ರೂಮಿನಲ್ಲೇ ಹೆಚ್ಚು.! ಏನದು ಲಿಂಕ್..?

ಹೃದಯಾಘಾತಕ್ಕೆ ಕಾರಣಗಳು ಹಲವಾರು ಇವೆ. ಆದೇನೆ ಇರಲಿ. ಆದರೆ, ಬಹುತೇಕ ಹೃದಯಾಘಾತಗಳು ಸಂಭವಿಸಿದ್ದು ಬೆಳಗ್ಗಿನ ಹೊತ್ತಲ್ಲಿ. ಅದರಲ್ಲೂ ಬಾತ್ ರೂಂನಲ್ಲಿರುವಾಗಲೇ ಹೆಚ್ಚಿನ ಹೃದಯಾಘಾತಗಳು ಸಂಭವಿಸಿವೆ.

Written by - Ranjitha R K | Last Updated : Jan 19, 2021, 02:31 PM IST
  • ಸಮೀಕ್ಷೆ ಪ್ರಕಾರ ಹೃದಯಾಘಾತ ಹೆಚ್ಚಾಗಿ ಆಗೋದು ಬಾತ್ ರೂಮಿನಲ್ಲಿ..!
  • ನೀವು ಬಳಸೋ ಕಮೋಡಿಗೂ ಹೃದಯಾಘಾತಕ್ಕೂ ಇದೆ ಸೀರಿಯಸ್ ಲಿಂಕ್..!
  • ಹೊಟ್ಟೆ ಕ್ಲೀನ್ ಮಾಡಲು ಅಧಿಕ ಪ್ರೆಶರ್ ಹಾಕಿದರೆ ಅಪಾಯ ಗ್ಯಾರಂಟಿ
ನಗಬೇಡಿ..! ಹೃದಯಾಘಾತ ಬಾತ್ ರೂಮಿನಲ್ಲೇ ಹೆಚ್ಚು.! ಏನದು ಲಿಂಕ್..? title=
ಸಮೀಕ್ಷೆ ಪ್ರಕಾರ ಹೃದಯಾಘಾತ ಹೆಚ್ಚಾಗಿ ಆಗೋದು ಬಾತ್ ರೂಮಿನಲ್ಲಿ(file photo)

ಬೆಂಗಳೂರು : ಹಾರ್ಟ್ ಅಟ್ಯಾಕ್ ಮನುಕುಲವನ್ನು ಕಾಡುವ ಗಂಭೀರ ಸಮಸ್ಯೆ. ಹೃದಯಾಘಾತಕ್ಕೆ ಕಾರಣಗಳು ಹಲವಾರು ಇವೆ. ಆದೇನೆ ಇರಲಿ. ಆದರೆ, ಬಹುತೇಕ ಹೃದಯಾಘಾತಗಳು ಸಂಭವಿಸಿದ್ದು ಬೆಳಗ್ಗಿನ ಹೊತ್ತಲ್ಲಿ. ಅದರಲ್ಲೂ ಬಾತ್ ರೂಂನಲ್ಲಿರುವಾಗಲೇ ಹೆಚ್ಚಿನ ಹೃದಯಾಘಾತಗಳು ಸಂಭವಿಸಿವೆ (Heart Attack In Washroom). 

ಬಾತ್ ರೂಮಿಗೂ ಹೃದಯಾಘಾತಕ್ಕೂ ಲಿಂಕ್ ಏನು..?
ಹೃದಯಾಘಾತಕ್ಕೂ (Heart Attack) ರಕ್ತಕ್ಕೂ ನೇರ ಸಂಬಂಧವಿದೆ.  ರಕ್ತದ (Blood) ಮೂಲಕ ನಮ್ಮ ದೇಹಕ್ಕೆ ಆಮ್ಲಜನಕ ಮತ್ತು ಅಗತ್ಯ ಪೋಷಕಾಂಶಗಳ ಪೂರೈಕೆಯಾಗುತ್ತದೆ. ರಕ್ತನಾಳಗಳಲ್ಲಿ ಬ್ಲಾಕ್ಸ್  ಸೃಷ್ಟಿಯಾದಾಗ ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣದಲ್ಲಿ ಏರಿಳಿಕೆಯಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ : DANGER ! ಚಹಾ ಜೊತೆ ತಪ್ಪಿಯೂ ಈ ತಪ್ಪು ಮಾಡಬೇಡಿ..! ಅಪಾಯ ಖಚಿತ

ಬಾತ್ ರೂಮಿನಲ್ಲೇ ಏಕಾಗುತ್ತದೆ ಹೃದಯಾಘಾತ..?
ಬಹಳಷ್ಟು ಹೃದಯಾಘಾತ ಕೇಸ್ ಗಳು ಸಂಭವಿಸಿದ್ದು ಬಾತ್ ರೂಮಿನಲ್ಲೇ( Bath Room). ಈ ಅಂಶವನ್ನು ನಾವು ಪರಿಗಣಿಸಲೇಬೇಕು.  ಇದರ ಹಿಂದೆ ಹಲವಾರು ಕಾರಣಗಳಿವೆ.   ಆ ಕಾರಣಗಳು ಯಾವುವು ಎಂಬುದು ನಿಮಗೆ ಗೊತ್ತಿರಬೇಕು.  ಇದರಿಂದ ನೀವು ಮತ್ತು ಪರಿವಾರ ಅಜ್ಞಾತ ಮೃತ್ಯುಪಾಶದಿಂದ ಬಚಾವ್ ಆಗಬಹುದು. 
ಗೊತ್ತಿರಲಿ, ಬೆಳಗ್ಗೆ ಟಾಯ್ಲೆಟೆಗೆ (Toilet) ಹೋಗುವಾಗ ಹೊಟ್ಟೆಕ್ಲೀನ್ ಮಾಡಲು ಸಿಕ್ಕಾಪಟ್ಟೆ ಪ್ರೆಶರ್ ಹಾಕುತ್ತೇವೆ. ಅದರಲ್ಲೂ ಇಂಡಿಯನ್ ಕಮೋಡ್ ನಲ್ಲಿ ಟಾಯ್ಲೆಟ್ ಮಾಡುತ್ತಿದ್ದರೆ, ಆ ಪ್ರೆಶರ್ ಇನ್ನೂ ಹೆಚ್ಚಾಗಿರುತ್ತದೆ. ನಿಮ್ಮ ಪ್ರೆಶರ್ ನೇರ ಧಮನಿಗಳ ಮೇಲೆ ಬೀಳುತ್ತದೆ. ಹೆಚ್ಚಿನ ಹೃದಯಾಘಾತಕ್ಕೆ  ಇದೇ ಕಾರಣ

ಬಾತ್ ರೂಮಿನ ತಾಪಮಾನ : 
ಮನೆಯ ಇತರ ಕೋಣೆಗಳಿಗೆ ಹೋಲಿಸಿದರೆ, ಬಾತ್ ರೂಮ್ ತಾಪಮಾನ ಸ್ವಲ್ಪ ಕಡಿಮೆಯೇ ಇರುತ್ತದೆ. ನೀವು ಬಾತ್ ರೂಮಿಗೆ ತೆರಳಿದಾಗ  ದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ದೇಹ ತನ್ನ ರಕ್ತ ಪರಿಚಲನೆ (Blood Circulation) ಯ ವೇಗವನ್ನು ಹೆಚ್ಚಿಸುತ್ತದೆ. ಧಮನಿಗಳಲ್ಲಿ ರಕ್ತ ಪರಿಚಲನೆಯ ( ವೇಗ ಹೆಚ್ಚಿದಾಗ ಹೃದಯಾಘಾತವಾಗಬಹುದು.

ಇದನ್ನೂ ಓದಿ : ತಪ್ಪಿಯೂ ಬೋರಲು ಮಲಗಬೇಡಿ..! ಕಾಡಬಹುದು ಇನ್ನಿಲ್ಲದ ಸಮಸ್ಯೆ..!

ಬೆಳಗ್ಗೆ ಅಧಿಕ ರಕ್ತದೊತ್ತಡ:
ಬೆಳಗ್ಗಿನ ಹೊತ್ತಿನಲ್ಲಿ ಸಾಮಾನ್ಯವಾಗಿ ಬಿಪಿ ಸ್ವಲ್ಪ ಹೈ (High Blood Pressure)  ಇರುತ್ತದೆ.  ಹೀಗಿರುವಾಗ ಬಾತ್ ರೂಮಿನಲ್ಲಿ ಸ್ನಾನಕ್ಕೆ ಹೊರಟ ನಾವು ಸ್ವಲ್ಪ ತಂಪಾದ ಅಥವಾ ಬಿಸಿಬಿಸಿ ನೀರನ್ನು(Hot Water) ತಲೆ ಮೇಲೆ ಸುರಿದುಕೊಂಡಾಗ ಬಿಪಿ ಏರಿಳಿತವಾಗುತ್ತದೆ. ಇದು ಕೂಡಾ ಹೃದಯಾಘಾತಕ್ಕೆ ಕಾರಣವಾಗಬಹುದು. 

ಹಾಗಾದ್ರೆ ಬಾತ್ ರೂಮ್ ಟಿಪ್ಸ್ ಏನು..?
1. ಇಂಡಿಯನ್ ಕಮೋಡ್ ಬಳಸುತ್ತಿದ್ದರೆ, ಬಹಳ ಹೊತ್ತು ಒಂದೇ ಭಂಗಿಯಲ್ಲಿರಬೇಡಿ. 
2. ಟಾಯ್ಲೆಟ್ ನಲ್ಲಿ ಅವಸರ ಬೇಡ, ಹೊಟ್ಟೆ ಕ್ಲೀನ್ ಮಾಡಲು ಪ್ರೆಶರ್ ಹಾಕಲೇಬೇಡಿ. ಸಹಜ ಕ್ರಿಯೆಗೆ ಅವಕಾಶ ಕೊಡಿ. ತಡ ಆದರೂ ಸಮಸ್ಯೆ ಏನಿಲ್ಲ
3. ಸ್ನಾನ ಮಾಡುವಾಗ ಬಿಸಿ ಅಥವಾ ತಣ್ಣೀರನ್ನು ಮೊದಲು ಪಾದಕ್ಕೆ ಹಾಕಿ, ನಂತರ ಕಾಲಿಗೆ ಸುರಿಯಿರಿ. ಬಳಿಕೆ ತಲೆಗೆ ನೀರು ಹಾಕಿಕೊಳ್ಳಿ. ಇದರಿಂದ ದೇಹದ ತಾಪಮಾನದಲ್ಲಿ ಬದಲಾವಣೆ ಆಗುವುದಿಲ್ಲ
4. ಬಾತ್ ಟಬ್ ನಲ್ಲಿ ಸ್ನಾನ ಮಾಡುವಿರಾದರೆ, ತುಂಬಾ ಹೊತ್ತು ಬಿಸಿನೀರ ಟಬ್ ನಲ್ಲಿರಬೇಡಿ. ಇದು ಕೂಡಾ ದೇಹದ ತಾಪಮಾನದಲ್ಲಿ ಏರಿಳಿತಕ್ಕೆ ಕಾರಣವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News