Hugging health Benefits: ಪ್ರೀತಿಯಿಂದ ಪರಸ್ಪರರು ಅಪ್ಪಿಕೊಳ್ಳುವುದು ಸಾಮಾನ್ಯ. ಅಪ್ಪುಗೆ ತಾಯಿ, ಮಕ್ಕಳು, ಸ್ನೇಹಿತರು, ಹೆಂಡತಿ, ಗಂಡ, ಅಣ್ಣ, ತಂಗಿ, ಪ್ರೇಮಿಗಳು, ಹೀಗೆ ವಿವಿಧ ಸಂಬಂಧವನ್ನು ಅವಲಂಬಿಸಿರುತ್ತದೆ. ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು ತಿಳಿಯೋಣ..
ಅಪ್ಪುಗೆ ಒತ್ತಡ, ಆತಂಕ, ಒಂಟಿತನ, ಖಿನ್ನತೆ ರಕ್ತದೊತ್ತಡ ಇತ್ಯಾದಿಯನ್ನು ಕಡಿಮೆ ಮಾಡುತ್ತದೆ. ಆಲಿಂಗನವು ದೇಹದಲ್ಲಿ ಆಕ್ಸಿಟೋಸಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯನ್ನು ಸಂತೋಷಪಡಿಸುತ್ತದೆ ಎಂದು ಕೆಲವು ಸಂಶೋಧನೆಗಳು ತೋರಿಸಿವೆ. ಆಕ್ಸಿಟೋಸಿನ್ ಪ್ರೀತಿಯ ಹಾರ್ಮೋನ್ ಆಗಿದೆ, ಇದು ಪಿಟ್ಯುಟರಿ ಗ್ರಂಥಿಯಲ್ಲಿ ಬಿಡುಗಡೆಯಾಗುತ್ತದೆ.
ಇದನ್ನೂ ಓದಿ:ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರ ಹಲವಾರು ಪ್ರಯೋಜನಗಳು!
ದಿನದಲ್ಲಿ 20 ಸೆಕೆಂಡುಗಳ ಕಾಲ ಅಪ್ಪಿಕೊಂಡರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆಲಿಂಗನದಿಂದ ಮಾನವೀಯ ಸಂಬಂಧ, ಬಾಂಧವ್ಯ, ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಅಪ್ಪಿಕೊಳ್ಳುವುದು ಒತ್ತಡ, ಆತಂಕ ಮತ್ತು ಒಂಟಿತನವನ್ನು ಸಹ ಕಡಿಮೆ ಮಾಡುತ್ತದೆ.
ಅಪ್ಪುಗೆ ಪ್ರೀತಿ, ಸ್ನೇಹ, ಭರವಸೆ, ಬೆಂಬಲವನ್ನು ವ್ಯಕ್ತಪಡಿಸುವ ಒಂದು ಅದ್ಭುತ ಮಾರ್ಗ. ಪ್ರತಿದಿನ ಇಪ್ಪತ್ತು ಸೆಕೆಂಡುಗಳ ಕಾಲ ಹಗ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ನಿಮ್ಮದಾಗುತ್ತದೆ. ಹಗ್ ಮಾಡುವುದು ಅಂದ್ರೆ ಕೇವಲ ಮನುಷ್ಯರನ್ನ ಅಷ್ಟೇ ಅಲ್ಲ, ಪ್ರಾಣಿಗಳನ್ನೂ ಸಹ ಅಪ್ಪಿಕೊಳ್ಳಬಹುದು.
ಇದನ್ನೂ ಓದಿ:ದೇಹದಲ್ಲಿನ ಈ ಬದಲಾವಣೆ ಪ್ರೋಟೀನ್ ಕೊರತೆಯ ಲಕ್ಷಣಗಳಾಗಿವೆ.!
ಆರೋಗ್ಯಕ್ಕೆ ಒಳ್ಳೆಯದು ಅಂತ ಸಿಕ್ಕ ಸಿಕ್ಕವರನ್ನು ಅಪ್ಪಿಕೊಳ್ಳುವ ಮೊದಲು ನೀವು ಅವರ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ನಿಮ್ಗೆ ಚನ್ನಾಗಿ ಗೊತ್ತೆ ಇದೆ. ಇನ್ನು ತಬ್ಬಿಕೊಳ್ಳುವಾಗ ಕಣ್ಣನ್ನು ಮುಚ್ಚಿ, ನಿಮ್ಮ ದೇಹವನ್ನು ಎದುರಿಗಿರುವ ದೇಹಕ್ಕೆ ಹತ್ತಿರವಾಗಿ ಸ್ಪರ್ಶಿಸಿ. ಅಪ್ಪುಗೆ ನಂಬಲಾಗದಷ್ಟು ಶಕ್ತಿಯುತವಾದ ಭಾವನಾತ್ಮಕ ಚಿಕಿತ್ಸೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.