ಸೇವಿಸುವ ವಿಧಾನ ಹೀಗಿದ್ದರೆ ಅನ್ನ, ಚಪಾತಿ ತಿಂದರೂ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !

ಪ್ರಿ-ಡಯಾಬಿಟಿಸ್ ಸಂದರ್ಭದಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳು, ತರಕಾರಿಗಳು,ಕೊಬ್ಬು ಮತ್ತು ಪ್ರೋಟೀನ್‌ ಪ್ರಮಾಣವನ್ನು ಸುಲಭವಾಗಿ ಸಮತೋಲನಗೊಳಿಸುವ ಮೂಲಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.  

Written by - Ranjitha R K | Last Updated : Apr 4, 2024, 03:34 PM IST
  • ಪ್ರಿ-ಡಯಾಬಿಟಿಸ್ ನಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.
  • ಇದು ಟೈಪ್ 2 ಮಧುಮೇಹಕ್ಕಿಂತ ಕಡಿಮೆಯಾಗಿರುತ್ತದೆ.
  • ಈ ಹಂತದಲ್ಲಿ ಸಕ್ಕರೆಯನ್ನು ನಿಯಂತ್ರಿಸಿದರೆ,ಟೈಪ್ 2 ಮಧುಮೇಹವನ್ನು ತಪ್ಪಿಸಬಹುದು.
ಸೇವಿಸುವ ವಿಧಾನ ಹೀಗಿದ್ದರೆ ಅನ್ನ, ಚಪಾತಿ ತಿಂದರೂ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !  title=

Prediabetes care : ಪ್ರಿ-ಡಯಾಬಿಟಿಸ್ ನಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದು ಟೈಪ್ 2 ಮಧುಮೇಹಕ್ಕಿಂತ ಕಡಿಮೆಯಾಗಿರುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಪ್ರಿ-ಡಯಾಬಿಟಿಸ್ ಮಧುಮೇಹದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮಗಿರುವ ಕೊನೆಯ ಅವಕಾಶವಾಗಿರುತ್ತದೆ. ಈ ಹಂತದಲ್ಲಿ ಸಕ್ಕರೆಯನ್ನು ನಿಯಂತ್ರಿಸಿದರೆ,ಟೈಪ್ 2 ಮಧುಮೇಹವನ್ನು ತಪ್ಪಿಸಬಹುದು. 

ಪ್ರಿ-ಡಯಾಬಿಟಿಸ್ ಸಂದರ್ಭದಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳು, ತರಕಾರಿಗಳು,ಕೊಬ್ಬು ಮತ್ತು ಪ್ರೋಟೀನ್‌ ಪ್ರಮಾಣವನ್ನು ಸುಲಭವಾಗಿ ಸಮತೋಲನಗೊಳಿಸುವ ಮೂಲಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.  

ಇದನ್ನೂ ಓದಿ : ನೆನಪಿರಲಿ !ನೆಲ್ಲಿಕಾಯಿಯನ್ನು ಹಚ್ಚುವ ಮೊದಲು ಈ ರೀತಿ ಮಾಡಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು !

ಆಹಾರ ಸೇವಿಸುವ ಕ್ರಮ ಹೀಗಿರಬೇಕು : 
 ಆಹಾರ ಸೇವಿಸುವಾಗ ಬೇಳೆಕಾಳುಗಳು ಮತ್ತು ತರಕಾರಿಗಳನ್ನು ಮೊದಲು ತೆಗೆದುಕೊಳ್ಳಬೇಕು.ಅಕ್ಕಿ ಮತ್ತು ಚಪಾತಿಯಂಥಹ ಕಾರ್ಬೋಹೈಡ್ರೇಟ್ ಗಳನ್ನು  ನಂತರ ತಿನ್ನಬೇಕು.ಈ ಕಾರಣದಿಂದಾಗಿ,ದೇಹದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ನಾವು ಅನುಸರಿಸುವ ದಿನಚರಿಯು ಪ್ರಿ-ಡಯಾಬಿಟಿಕ್ ರೋಗಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಹಾರವನ್ನು ಈ ನಿಯಮದ ಪ್ರಕಾರ ಸೇವಿಸುವುದರಿಂದ ತೂಕ ನಿಯಂತ್ರಣದಲ್ಲಿಯೂ ಸಹಾಯ ಮಾಡುತ್ತದೆ. 

 ಪ್ರಿ-ಡಯಾಬಿಟಿಕ್ ಇದ್ದಾಗ ಸಕ್ಕರೆಯ ಮಟ್ಟ ಎಷ್ಟಿರುತ್ತದೆ ? :
ಮೇಯೊ ಕ್ಲಿನಿಕ್ ಪ್ರಕಾರ, 100 mg/dL (5.6 mmol/L) ಗಿಂತ ಕಡಿಮೆಯಿದ್ದರೆ  ನಾರ್ಮಲ್. 100 ರಿಂದ 125 mg/dL (5.6 to 6.9 mmol/L)ಇದ್ದಾಗ  ಪ್ರಿಡಯಾಬಿಟಿಸ್ ಎನ್ನಲಾಗುತ್ತದೆ. 

ಇದನ್ನೂ ಓದಿ : ಬಿಕ್ಕಿ ಬಿಕ್ಕಿ ಅಳುವಾಗ ಮೂಗಿನಿಂದ ನೀರು ಏಕೆ ಬರುತ್ತೆ ಗೊತ್ತೆ..? ಕುತೂಹಲ ವಿಷಯ ಇಲ್ಲಿದೆ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News