ಬೆಳಗ್ಗೆ ಹಳಸಿದ ಬಾಯಿಯಿಂದ ಈ ಎಲೆಗಳನ್ನು ಅಗೆಯಿರಿ, ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತದೆ!

Taming Diabetes: ಆಯುರ್ವೇದದಲ್ಲಿ ಮಧುಮೇಹ ಕಾಯಿಲೆ ಇರುವವರಿಗೆ ಪ್ರಯೋಜನಕಾರಿಯಾದ ಅನೇಕ ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇಂದು ನಾವು ನಿಮಗೆ 3 ಅತ್ಯುತ್ತಮ ಎಲೆಗಳ ಕುರಿತು ಮಾಃತಿಯನ್ನು ನೀಡುತ್ತಿದ್ದು, ಅದರ ಸಾರವು ರಕ್ತದಲ್ಲಿನ ಸಕ್ಕರೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ.  

Written by - Nitin Tabib | Last Updated : Aug 27, 2023, 12:20 AM IST
  • ಮಾವಿನ ಎಲೆಗಳಿಂದ ಇನ್ಸುಲಿನ್ ಉತ್ಪಾದನೆಯು ಉತ್ತಮವಾಗಿರುತ್ತದೆ. ಇದಲ್ಲದೆ, ಮಾವಿನ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಸಹ ಸಹಾಯಕವಾಗಿವೆ.
  • ಅವುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಪೆಕ್ಟಿನ್ ಮತ್ತು ಫೈಬರ್ ಕಂಡುಬರುತ್ತದೆ. ನೀವು ಬಯಸಿದರೆ, ಈ ಎಲೆಗಳನ್ನು ಅಗಿಯಿರಿ
  • ಅಥವಾ 10 ರಿಂದ 15 ಮಾವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಈ ನೀರನ್ನು ರಾತ್ರಿಯಿಡೀ ಇರಿಸಿ. ಮರುದಿನ ಬೆಳಿಗ್ಗೆ ಫಿಲ್ಟರ್ ಮಾಡಿ ಮತ್ತು ಈ ನೀರನ್ನು ಸೇವಿಸಿ
ಬೆಳಗ್ಗೆ ಹಳಸಿದ ಬಾಯಿಯಿಂದ ಈ ಎಲೆಗಳನ್ನು ಅಗೆಯಿರಿ, ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತದೆ! title=

ಬೆಂಗಳೂರು: ಮಧುಮೇಹವಿದೆ ಎಂದರೆ ನಿಮ್ಮ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಉತ್ಪಾದನೆಯು ಕಡಿಮೆಯಾಗಿದೆ ಅಥವಾ ನಿಮ್ಮ ದೇಹಕ್ಕೆ ಇನ್ಸುಲಿನ್ ಸರಿಯಾಗಿ ಉತ್ಪತ್ತಿಸಲು ಆಗುತ್ತಿಲ್ಲ ಎಂದರ್ಥ. ಎರಡೂ ಸಂದರ್ಭಗಳಲ್ಲಿ, ನೀವು ಏನು ತಿಂದರೂ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಮಧುಮೇಹ ನಿಯಂತ್ರಣಕ್ಕಾಗಿ ನೀವು ಔಷಧಿ ಅಥವಾ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರೂ ಸಹ, ನೀವು ಕೆಲವು ಆಯುರ್ವೇದ ಎಲೆಗಳ ಸಾರವನ್ನು ತೆಗೆದುಕೊಳ್ಳಬೇಕು, ಏಕೆಂದರೆ ಅವು ಸಕ್ಕರೆಯನ್ನು ಕಡಿಮೆ ಮಾಡಲು ನೈಸರ್ಗಿಕವಾಗಿ ದೇಹದಲ್ಲಿನ ಇನ್ಸುಲಿನ್ ಅನ್ನು ಸಕ್ರಿಯಗೊಳಿಸುತ್ತವೆ.

ಮಧುಮೇಹದಲ್ಲಿ ಆಹಾರ ಸೇವನೆಯ ಬಳಿಕ ರಕ್ತದಲ್ಲಿನ ಇನ್ಸುಲಿನ್ ವೇಗವು ತುಂಬಾ ನಿಧಾನವಾಗುತ್ತದೆ, ಆದರೆ ಈ ಎಲೆಗಳನ್ನು ಅಗಿದು ತಿಂದಾಗ, ಅವು ಇನ್ಸುಲಿನ್ ವೇಗವನ್ನು ಹೆಚ್ಚಿಸುತ್ತವೆ ಮತ್ತು ಮೇದೋಜ್ಜೀರಕ ಗ್ರಂಥಿಯಲ್ಲಿ ಅದರ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಬೆಳಗ್ಗೆ ಈ ಎಲೆಗಳನ್ನು ಹಳಸಿದ ಬಾಯಿಯಲ್ಲಿ ಅಗಿಯುವುದರಿಂದ ಅದರ ಪರಿಣಾಮವನ್ನು ನಾವು ದ್ವಿಗುಣಗೊಳಿಸಬಹುದು. ನಿಮ್ಮ ರಕ್ತದಲ್ಲಿಯೂ ಕೂಡ ಸಕ್ಕರೆ ನಿಯಂತ್ರಣ ತಪ್ಪಿದ್ದರೆ, ನೀವು ದಿನಕ್ಕೆ ಮೂರು ಬಾರಿ ಈ ಎಲೆಗಳನ್ನು ಅಗೆಯಬಹುದು. ನೀವು ಅವುಗಳ ರಸವನ್ನು ಕುಡಿಯಬಹುದು ಅಥವಾ ಜಗಿದು ತಿನ್ನಬಹುದು.

ಮಧುಮೇಹವನ್ನು ನಿಯಂತ್ರಿಸಲು ಹಸಿರು ಎಲೆಗಳು
ಹಾಗಲಕಾಯಿ ಎಲೆಗಳು-
ಹಾಗಲಕಾಯಿಯಂತೆಯೇ ಇದರ ಬಳ್ಳಿಯ ಎಲೆಗಳು ಕೂಡ ಎಲ್ಲಾ ರೀತಿಯ ಔಷಧೀಯ ಗುಣಗಳನ್ನು ಹೊಂದಿದ್ದು ,ಅದು ಮಾನವ ದೇಹದ ಆರೋಗ್ಯಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಲಕಾಯಿ ಎಲೆಗಳಲ್ಲಿ ಕಬ್ಬಿಣ, ಮೆಗ್ನೀಸಿಯಮ್, ವಿಟಮಿನ್, ಪೊಟ್ಯಾಸಿಯಮ್, ವಿಟಮಿನ್-ಸಿ ತರಕಾರಿಗಳಂತೆ ಸಮೃದ್ಧವಾಗಿದೆ. ಹಾಗಲಕಾಯಿ ಎಲೆಗಳು ತಿಳಿ ಹಸಿರು ಮತ್ತು ಉದ್ದವಾದ ಆಕಾರದಲ್ಲಿರುತ್ತವೆ. ಬೆಂಗಳೂರಿನ ಜೀವೋತ್ತಮ್ ಆಯುರ್ವೇದಿಕ್ ಸೆಂಟರ್ ಪ್ರಕಾರ, ಹಾಗಲಕಾಯಿ ಎಲೆಗಳಲ್ಲಿ ವಿಟಮಿನ್ ಮತ್ತು ಖನಿಜಗಳು ಮತ್ತು ವಿಸಿನ್ ಮತ್ತು ಪಾಲಿಪೆಪ್ಟೈಡ್ ಪಿ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಹುಣಸೆ ಎಲೆಗಳು- ಹುಣಸೆಹಣ್ಣಿನ ಹಸಿರು ಎಲೆಗಳನ್ನು ಅಗಿಯಿರಿ ಅಥವಾ ನೀವು ಅದನ್ನು ಒಣಗಿಸಿ ಪುಡಿ ಮಾಡಬಹುದು. ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಎರಡು ಚಮಚ ಬೆರೆಸಿ ಸೇವಿಸಲು ಪ್ರಾರಂಭಿಸಿ. ಇದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಸ್ವಲ್ಪ ಸಮಯದಲ್ಲೇ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹುಣಸೆ ಎಲೆಗಳಲ್ಲಿ ಪ್ರೋಟೀನ್, ಕೊಬ್ಬು ಮತ್ತು ಫೈಬರ್ ಸಮೃದ್ಧವಾಗಿದೆ. ಇದಲ್ಲದೆ, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಮತ್ತು ಬೀಟಾ-ಕ್ಯಾರೋಟಿನ್ ಕೂಡ ಇದರಲ್ಲಿದೆ. ಈ ಎಲೆಗಳು ಇನ್ಸುಲಿನ್ ಕೊರತೆಯನ್ನು ಸರಿಪಡಿಸುವ ಫ್ಲೇವನಾಯ್ಡ್‌ಗಳು, ಪಾಲಿಫಿನಾಲ್‌ಗಳು, ವಿಟಮಿನ್-ಸಿ ಮತ್ತು ಪೊಟ್ಯಾಸಿಯಮ್‌ಗಳನ್ನು ಸಹ ಹೊಂದಿರುತ್ತವೆ. ಇದರೊಂದಿಗೆ ಇದರಲ್ಲಿರುವ ಫಾಸ್ಫರಸ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಮಾವಿನ ಎಲೆಗಳು- ಮಾವಿನ ಎಲೆಗಳಿಂದ ಇನ್ಸುಲಿನ್ ಉತ್ಪಾದನೆಯು ಉತ್ತಮವಾಗಿರುತ್ತದೆ. ಇದಲ್ಲದೆ, ಮಾವಿನ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಸಹ ಸಹಾಯಕವಾಗಿವೆ. ಅವುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಪೆಕ್ಟಿನ್ ಮತ್ತು ಫೈಬರ್ ಕಂಡುಬರುತ್ತದೆ. ನೀವು ಬಯಸಿದರೆ, ಈ ಎಲೆಗಳನ್ನು ಅಗಿಯಿರಿ ಅಥವಾ 10 ರಿಂದ 15 ಮಾವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಈ ನೀರನ್ನು ರಾತ್ರಿಯಿಡೀ ಇರಿಸಿ. ಮರುದಿನ ಬೆಳಿಗ್ಗೆ ಫಿಲ್ಟರ್ ಮಾಡಿ ಮತ್ತು ಈ ನೀರನ್ನು ಸೇವಿಸಿ.

ಇದನ್ನೂ ಓದಿ-ಸುಖಕರ ದಾಂಪತ್ಯ ಜೀವನದಲ್ಲಿ ತೊಡಕನ್ನುಂಟು ಮಾಡುತ್ತವೆ ಈ ಕಾಯಿಲೆಗಳು.. ಎಚ್ಚರ!

ನೀವು ಈ ಮೂರು ಎಲೆಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ತಿನ್ನಬಹುದು.

ಇದನ್ನೂ ಓದಿ-ಕೆಟ್ಟ ಕೊಲೆಸ್ಟ್ರಾಲ್ ನಿಂದ ನೀವೂ ತೊಂದರೆಗೊಳಗಾಗಿದ್ದರೆ ನಿಮ್ಮ ನಿತ್ಯದ ಆಹಾರದಲ್ಲಿ ಈ ಕೆಂಪು ಹಣ್ಣು ಶಾಮೀಲುಗೊಳಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News