Drinking Water Before Brushing: ಬೆಳಗ್ಗೆ ಬ್ರಷ್ ಮಾಡದೆಯೇ ನೀರು ಕುಡಿಯುವುದು ಲಾಭಕಾರಿಯೇ ಅಥವಾ ಹಾನಿಕಾರಕ?

Drinking Water In The Morning: ಸಾಮಾನ್ಯವಾಗಿ ಬೆಳಗ್ಗೆ ಎದ್ದ ನಂತರ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ, ಆದರೆ ಗಂಟಲು ಒದ್ದೆ ಮಾಡುವ ಮೊದಲು ಹಲ್ಲುಜ್ಜಬೇಕೇ ಅಥವಾ ಬೇಡವೇ ಎಂಬ ಗೊಂದಲ ಬಹುತೇಕರಿಗೆ ಕಾಡುತ್ತದೆ.  

Written by - Nitin Tabib | Last Updated : May 29, 2022, 09:43 PM IST
  • ಸಾಮಾನ್ಯವಾಗಿ ಬೆಳಗ್ಗೆ ಎದ್ದ ನಂತರ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ,
  • ಆದರೆ ಮೊದಲು ಹಲ್ಲುಜ್ಜಬೇಕೇ ಅಥವಾ ಬೇಡವೇ ಎಂಬ ಗೊಂದಲ ಬಹುತೇಕರಿಗೆ ಕಾಡುತ್ತದೆ.
  • ಬನ್ನಿ ಈ ಕುರಿತು ತಜ್ಞರು ಏನನ್ನು ಹೇಳುತ್ತಾರೆ ತಿಳಿದುಕೊಳ್ಳೋಣ
Drinking Water Before Brushing: ಬೆಳಗ್ಗೆ ಬ್ರಷ್ ಮಾಡದೆಯೇ ನೀರು ಕುಡಿಯುವುದು ಲಾಭಕಾರಿಯೇ ಅಥವಾ ಹಾನಿಕಾರಕ? title=
Drinking Water Before Brush In Morning

Drinking Water For Health: ನಾವು ಪ್ರತಿದಿನ ಬೆಳಗ್ಗೆ ಎದ್ದು ಹಲ್ಲುಜ್ಜುತ್ತೇವೆ, ಇದು ನಮ್ಮ ಹಲ್ಲು ಮತ್ತು ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಎಲ್ಲಾ ರೀತಿಯ ದುರ್ವಾಸನೆಗಳನ್ನು ಹೋಗಲಾಡಿಸುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಬ್ರಶ್ ಮಾಡದೆಯೇ ಬೆಳಗಿನ ಉಪಾಹಾರವನ್ನು ಮಾಡಬಾರದು ಎಂಬ ಸಲಹೆ ನೀಡಲಾಗುತ್ತದೆ. ಏಕೆಂದರೆ ಸೂಕ್ಷ್ಮ ಜೀವಿಗಳು ಬಾಯಿಯಲ್ಲಿ ಇರುತ್ತವೆ ಮತ್ತು ಅವು ಆಹಾರದ ಮೂಲಕ ಹೊಟ್ಟೆಯನ್ನು ತಲುಪುತ್ತವೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಹೀಗಿರುವಾಗ ಬೆಳಗ್ಗೆ ಎದ್ದು ಹಳ್ಳುಜ್ಜದೆಯೇ ನೀರು ಕುಡಿಯಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ಎದುರಾಗುತ್ತದೆ.

ಕುಡಿಯುವ ನೀರು ಆರೋಗ್ಯಕ್ಕೆ ಬಹಳ ಮುಖ್ಯ
ಖ್ಯಾತ ಡಯಟೀಶಿಯನ್ ನಿಖಿಲ್ ವ್ಯಾಟ್ಸ್ ಹೇಳುವ ಪ್ರಕಾರ ಪ್ರಕಾರ, 'ಓರ್ವ ಆರೋಗ್ಯವಂತ ವ್ಯಕ್ತಿ ದಿನಕ್ಕೆ 8 ರಿಂದ 10 ಗ್ಲಾಸ್ ನೀರುಕುಡಿಯಬೇಕು, ಇದು ದೇಹವನ್ನು ಹೈಡ್ರೇಟ್ ಆಗಿ ಇರಿಸುತ್ತದೆ ಮತ್ತು ಬೇಸಿಗೆಯಲ್ಲಿ ಇದನ್ನು ಅನುಸರಿಸುವುದ ತುಂಬಾ ಮುಖ್ಯವಾಗಿದೆ' ಎನ್ನುತ್ತಾರೆ. ಈ ಕಾರಣದಿಂದಲೇ ಬೆಳಗ್ಗೆ ಎದ್ದಾಗ ನಮಗೆ ತುಂಬಾ ಬಾಯಾರಿಕೆಯಾಗುತ್ತಿದೆ, ಆಗ ನಾವು ಬ್ರಷ್ ಮಾಡಿದ್ದೇವೋ ಅಥವಾ  ಇಲ್ಲವೋ ಎಂಬುದರ ಕುರಿತು ಹೆಚ್ಚಾಗಿ ಯೋಚಿಸುವುದಿಲ್ಲ .

ಹಲ್ಲುಜ್ಜದೆ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು
ಬೆಳಗ್ಗೆ ಎದ್ದು ಬ್ರಶ್ ಮಾಡದೆ ನೀರು ಕುಡಿದರೆ ಅದರಿಂದ ಯಾವುದೇ ಹಾನಿ ಇಲ್ಲ  ಮತ್ತು ಅದರಿಂದ ಸಾಕಷ್ಟು ಲಾಭಗಳಿವೆ ಎಂದು ನಿಮಗೆ ಹೇಳಿದರೆ, ನಿಮಗೂ ಕೂಡ ಆಶ್ಚರ್ಯವಾಗಬಹುದು.

1. ಬೆಳಗ್ಗೆ ಹಲ್ಲುಜ್ಜುವ ಮೊದಲು ಒಂದು ಲೋಟ ನೀರು ಕುಡಿದರೆ, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ರೀತಿಯ ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ.

2. ಬ್ರಶ್ ಮಾಡದೆಯೇ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ, ಜೊತೆಗೆ ಇದು ಬಾಯಿಯ ವಾಸನೆಯನ್ನು ಸಹ ತೆಗೆದುಹಾಕುತ್ತದೆ.

3. ಹಲ್ಲುಜ್ಜದೆ ನೀರು ಕುಡಿಯುವುದರಿಂದ ಕೂದಲು ಸ್ಟ್ರಾಂಗ್ ಆಗುತ್ತವೆ ಮತ್ತು ಹೊಳೆಯುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

4. ಈ ರೀತಿ ನೀರು ಕುಡಿಯುವುದರಿಂದ ಮುಖ ಮತ್ತು ತ್ವಚೆಯಲ್ಲಿ ಅದ್ಭುತವಾದ ಹೊಳಪು ಬರುತ್ತದೆ ಮತ್ತು ಮುಖ ಕಾಂತಿಯುತವಾಗಿ ಕಾಣಿಸಲು ಆರಂಭಿಸುತ್ತದೆ.

5. ನೀವು ಮಧುಮೇಹಿಗಳಾಗಿದ್ದರೆ, ನೀವು ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಿರಿ ಮತ್ತು ಅದಕ್ಕಾಗಿ ಬ್ರಷ್ ಮಾಡಲು ಕಾಯಬೇಡಿ.

6. ಈ ರೀತಿ ನೀರು ಕುಡಿಯುವುದರಿಂದ ಬೊಜ್ಜು ಕೂಡ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ-Cholesterol Symptoms: ಕಾಲಿನಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ

7. ಬ್ರಶ್ ಮಾಡದೆ ನೀರು ಕುಡಿಯುವುದರಿಂದ ಮಲಬದ್ಧತೆ, ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳೂ ನಿವಾರಣೆಯಾಗುತ್ತವೆ. 

ಇದನ್ನೂ ಓದಿ-Ginger Oil: ಈ ಎಣ್ಣೆ ಬಳಕೆಯಿಂದ ಕೀಲುನೋವು ಮಂಗಮಾಯ, ನೀವೂ ಟ್ರೈ ಮಾಡಿ ನೋಡಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News