ಈ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಲೇ ಬಾರದು! ಇಲ್ಲವಾದರೆ ಆಸ್ಪತ್ರೆಗೆ ಅಲೆದಾಡಬೇಕಾಗಿ ಬರಬಹುದು

Drink Water After Eating Fruits: ಕೆಲವು ಹಣ್ಣುಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬಾರದು. ಹಾಗಿದ್ದರೆ ಯಾವ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬಾರದು ನೋಡೋಣ. 

Written by - Ranjitha R K | Last Updated : Mar 28, 2023, 10:42 AM IST
  • ಕೆಲವರಿಗೆ ಏನನ್ನಾದರೂ ತಿಂದ ನಂತರ ನೀರು ಕುಡಿಯುವ ಅಭ್ಯಾಸ ಇರುತ್ತದೆ
  • ಆದರೆ ಕೆಲವು ಹಣ್ಣು ತಿಂದು ನೀರು ಕುಡಿಯಬಾರದು
  • ಈ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬೇಡಿ
ಈ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಲೇ ಬಾರದು! ಇಲ್ಲವಾದರೆ ಆಸ್ಪತ್ರೆಗೆ ಅಲೆದಾಡಬೇಕಾಗಿ ಬರಬಹುದು  title=

Drink Water After Eating Fruits : ಹೆಚ್ಚಿನವರಿಗೆ ಯಾವುದೇ ಆಹಾರವನ್ನು ತಿಂದ ಕೂಡಲೇ  ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸ ಪ್ರತಿ ಬಾರಿಯೂ ಸರಿಯಲ್ಲ. ಕೆಲವೊಂದು ಆಹಾರ ಸೇವನೆ ನಂತರ ನೀರು ಕುಡಿಯುವುದು ನಿಷಿದ್ದ. ಕೆಲವರು ಹಣ್ಣು ತಿಂದ ತಕ್ಷಣ ನೀರು ಕುಡಿಯುತ್ತಾರೆ. ಆದರೆ ಹಾಗೆ ಮಾಡುವುದು ಬಹಳ ಅಪಾಯಕಾರಿ. ಹೌದು, ಕೆಲವು ಹಣ್ಣುಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬಾರದು. ಹಾಗಿದ್ದರೆ ಯಾವ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬಾರದು ನೋಡೋಣ. 

ಈ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬೇಡಿ : 
ಪೇರಳೆಹಣ್ಣು  :
ಹೆಚ್ಚಿನ ಜನರು ಪೇರಳೆಹಣ್ಣು ತಿಂದ ನಂತರ ನೀರು ಕುಡಿಯುತ್ತಾರೆ. ಆದರೆ ಪೇರಳೆ ತಿಂದ ತಕ್ಷಣ ನೀರು ಕುಡಿಯಬಾರದು. ಯಾಕೆಂದರೆ  ಪೇರಳೆ ತಿಂದು ನೀರು ಕುಡಿದರೆ ಜೀರ್ಣಕ್ರಿಯೆ ಹಾಳಾಗುತ್ತದೆ. ಈ ಕಾರಣಕ್ಕಾಗಿ ಪೇರಳೆ ಹಣ್ಣು  ತಿಂದ ನಂತರ ನೀರು ಕುಡಿಯಬಾರದು.

ಇದನ್ನೂ ಓದಿ : Green Cardamom : ಏಲಕ್ಕಿಯಲ್ಲಿದೆ ಆರೋಗ್ಯದ ಖಜಾನೆ : ಹೀಗೆ ಸೇವಿಸಿ ಪ್ರಯೋಜನ ಪಡೆಯಿರಿ

ಬಾಳೆಹಣ್ಣು : 
ಬಾಳೆಹಣ್ಣು ತಿಂದ ತಕ್ಷಣ ಕೂಡಾ ನೀರು ಕುಡಿಯಬಾರದು.  ಬಾಳೆಹಣ್ಣು ತಿಂದ ಕೂಡಲೇ ನೀರು ಕುಡಿದರೂ ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಬಾಳೆಹಣ್ಣು ತಿಂದ ನಂತರ, ನ ತಪ್ಪಿಯೂ  ನೀರನ್ನು ಕುಡಿಯಬಾರದು.

ಪಿಯರ್ಸ್ ಹಣ್ಣು  :
ಪಿಯರ್ಸ್ ಹಣ್ಣು ಸೇವಿಸಿದ ತಕ್ಷಣ ನೀರು ಕುಡಿದರೆ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿಯೇ  ಪಿಯರ್ಸ್ ಹಣ್ಣು ತಿಂದ ನಂತರ ನೀರು ಕುಡಿಯಬಾರದು.

ಸೇಬು :
ಸೇಬು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಸೇಬು ಸೇವಿಸಿದ ನಂತರ ನೀರು ಕುಡಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕರ. ಅದಕ್ಕಾಗಿಯೇ ಸೇಬು ತಿಂದ ನಂತರ ನೀರು ಕುಡಿಯಬೇಡಿ.

ಇದನ್ನೂ ಓದಿ : Stomach Problems : ಬೆಳಗ್ಗೆ ಹೊಟ್ಟೆ ಸರಿಯಾಗಿ ಸ್ವಚ್ಛವಾಗುತ್ತಿಲ್ಲವೇ? ಹಾಗಿದ್ರೆ, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಸೇವಿಸಿ

ದಾಳಿಂಬೆ :
ದಾಳಿಂಬೆಯಲ್ಲಿ ಪೋಷಕಾಂಶಗಳು ತುಂಬಿವೆ. ಇದು ಕಬ್ಬಿಣ ಮತ್ತು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಅಂಶಗಳನ್ನು ಒಳಗೊಂಡಿದೆ. ಆದರೆ ನೀವು ದಾಳಿಂಬೆ  ತಿಂದ ನಂತರ ನೀರು ಕುಡಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತದೆ. ಹಾಗಾಗಿ ಈ ಹಣ್ಣನ್ನು ಸೇವಿಸಿದ ನಂತರ ನೀರನ್ನು ಕುಡಿಯಬೇಡಿ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News