ಕಡುಬೇಸಿಗೆಯಲ್ಲಿ ಈ 9 ಆಹಾರಗಳಿಂದ ಸಾಧ್ಯವಾದಷ್ಟೂ ದೂರ ಇರಿ.!

ಬೇಸಿಗೆಯಲ್ಲಿ ಐಸ್ ಕ್ರೀಂ  ಹೆಚ್ಚು ತಿನ್ನಬಾರದು ಎಂದರೆ ನೀವು ಖಂಡಿತಾ ನಕ್ಕು ಬಿಡುತ್ತೀರಿ. ಆದರೆ, ಗೊತ್ತಿರಲಿ. ಐಸ್ ಕ್ರೀಂ ನೋಡಿದಾಕ್ಷಣ ತಿನ್ನಲು ಟೆಂಪ್ಟ್ ಆಗುತ್ತದೆ. ಆದರೆ, ಐಸ್ಕ್ರೀಂ ನಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ ಇರುತ್ತದೆ.

Written by - Ranjitha R K | Last Updated : Mar 14, 2021, 10:11 AM IST
  • ಇನ್ನೇನು ಕಡುಬೇಸಿಗೆ ನಿಮ್ಮನ್ನು ಕಾಡಲಾರಂಭಿಸುತ್ತದೆ.
  • ಈ ಹೊತ್ತಿನಲ್ಲಿ ತಿನ್ನುವ ಆಹಾರದ ಬಗ್ಗೆ ತುಸು ಹೆಚ್ಚೇ ಗಮನ ಇಡಬೇಕು.
  • ಆಹಾರ ಆದಷ್ಟೂ ಸಾದಾ ಸೀದ ಇರಬೇಕು.
ಕಡುಬೇಸಿಗೆಯಲ್ಲಿ ಈ 9 ಆಹಾರಗಳಿಂದ ಸಾಧ್ಯವಾದಷ್ಟೂ ದೂರ ಇರಿ.! title=
ಇನ್ನೇನು ಕಡುಬೇಸಿಗೆ ನಿಮ್ಮನ್ನು ಕಾಡಲಾರಂಭಿಸುತ್ತದೆ. (file photo)

ಬೆಂಗಳೂರು : ಇನ್ನೇನು ಕಡುಬೇಸಿಗೆ (Summer) ನಿಮ್ಮನ್ನು ಕಾಡಲಾರಂಭಿಸುತ್ತದೆ. ಈ  ಹೊತ್ತಿನಲ್ಲಿ ತಿನ್ನುವ ಆಹಾರದ (Food) ಬಗ್ಗೆ ತುಸು ಹೆಚ್ಚೇ ಗಮನ ಇಡಬೇಕು. ಆಹಾರ ಆದಷ್ಟೂ ಸಾದಾ ಸೀದ ಇರಬೇಕು. ಇವತ್ತು ನಾವು 9 ಆಹಾರದ ಬಗ್ಗೆ ಹೇಳುತ್ತೇವೆ. ಈ 9 ಆಹಾರಗಳನ್ನು ನೋಡಿದರೆ ನಿಮ್ಮ ಬಾಯಲ್ಲಿ ನೀರೂರುತ್ತದೆ. ಆದರೆ, ಬೇಸಿಗೆ ಸಮಯದಲ್ಲಿ ಈ 9 ಆಹಾರಗಳನ್ನು ಸಾಧ್ಯವಾದಷ್ಟೂ ಕಡಿಮೆ ತಿನ್ನಬೇಕು. ಯಾವುದು ಆ 9 ಆಹಾರ..? ನೋಡೋಣ

1. ಗ್ರಿಲ್ಡ್ ಮಾಂಸ : 
ಬೇಸಿಗೆಯಲ್ಲಿ  ಗ್ರಿಲ್ಡ್ ಚಿಕನ್ (Grilled Chicken) ಅಥವಾ ಮಟನ್ ತಿನ್ನುವುದರಿಂದ ದೂರ ಇರಬೇಕು. ಗ್ರಿಲ್ಡ್ ಮಾಂಸ ಅಥವಾ ಬಾರ್ಬೆಕ್ಯೂ ಮಾಂಸವನ್ನು ಅತ್ಯಧಿಕ ತಾಪಮಾನದಲ್ಲಿ ಸಿದ್ದಪಡಿಸಲಾಗುತ್ತದೆ. ಆಹಾರ ತಜ್ಞರ ಮಾತು ಕೇಳುವುದಾದರೆ, ಅತ್ಯಧಿಕ ತಾಪಮಾನದಲ್ಲಿ ಬೇಯುವ ಮಾಂಸ ತಿಂದರೆ ಕ್ಯಾನ್ಸರ್‍ ನಂತಹ (Cancer) ಕಾಯಿಲೆ ಬರುವ ಸಾಧ್ಯತೆ ಇದೆಯಂತೆ..!

ಇದನ್ನೂ ಓದಿ : ಮಹಿಳೆಯರೇ ಗಮನಿಸಿ! Corona Vaccine ನಿಮ್ಮ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರಲು ಕಾರಣ ಏನು ಗೊತ್ತೇ?

2. ಐಸ್ ಕ್ರೀಂ:
ಬೇಸಿಗೆಯಲ್ಲಿ ಐಸ್ ಕ್ರೀಂ (Ice cream) ಹೆಚ್ಚು ತಿನ್ನಬಾರದು ಎಂದರೆ ನೀವು ಖಂಡಿತಾ ನಕ್ಕು ಬಿಡುತ್ತೀರಿ. ಆದರೆ, ಗೊತ್ತಿರಲಿ. ಐಸ್ ಕ್ರೀಂ ನೋಡಿದಾಕ್ಷಣ ತಿನ್ನಲು ಟೆಂಪ್ಟ್ ಆಗುತ್ತದೆ. ಆದರೆ, ಐಸ್ಕ್ರೀಂ ನಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ (Sugar) ಇರುತ್ತದೆ. ಇದರಿಂದ ಖಂಡಿತಾ ಬೊಜ್ಜು ಬೆಳೆಯುತ್ತದೆ. ಮಧುಮೇಹಿಗಳಂತೂ ತಿನ್ನಲೇ ಬಾರದು.  ಬೇಸಿಗೆಯಲ್ಲಿ ಹಿತಮಿತವಾಗಿ ಐಸ್ ಕ್ರೀಂ  ತಿನ್ನಿ.

3. ಅಲ್ಕೋಹಾಲ್..!
`ಎಣ್ಣೆ' ಪ್ರಿಯರು ಸಾಮಾನ್ಯವಾಗಿ ಕಡುಬೇಸಿಗೆಯಲ್ಲಿ ಚಿಲ್ಡ್ ಬೀಯರ್, ಚಿಲ್ಡ್ ವಿಸ್ಕಿ ಅಥವಾ ವೈನ್ ಕುಡಿಯಲು ಇಷ್ಟ ಪಡುತ್ತಾರೆ. ಚಿಲ್ಡ್ ಬೀಯರ್, ವಿಸ್ಕಿ ಆ ಹೊತ್ತಿನ ದಾಹ ತೀರಿಸಬಹುದು. ಆದರೆ, ದೇಹದ ತಾಪಮಾನ ಏರಿಸಿಬಿಡುತ್ತದೆ. ಇದು ಡೀಹೈಡ್ರೇಶನ್ ಗೆ  ಕಾರಣವಾಗುತ್ತದೆ. ಡಿಹೈಡ್ರೇಶನ್ ಉಂಟಾದಾಗ ದೇಹದ ರೋಗ ನಿರೋಧಕ ಶಕ್ತಿ (Immunity) ಕಡಿಮೆ ಆಗುತ್ತದೆ. ಕಾಯಿಲೆ ಬೀಳುವ ಅಪಾಯ ಇರುತ್ತದೆ.

4. ಡೈರಿ ಉತ್ಪನ್ನಗಳು :
ಬೇಸಿಗೆಯಲ್ಲಿ ನೀವು ಅತಿ ಹೆಚ್ಚು ಕೋಲ್ಡ್ ಮಿಲ್ಕ್ ಶೇಕ್ (Milk shake) ಕುಡಿಯುತ್ತಿದ್ದರೆ, ಸ್ವಲ್ಪ ಕಂಟ್ರೋಲ್ ಮಾಡುವುದು ಉತ್ತಮ. ಬೇಸಿಗೆಯಲ್ಲಿ ಡೈರಿ ಉತ್ಪನ್ನಗಳ ಸೇವನೆ ಕಡಿಮೆ ಮಾಡುವುದು ಉತ್ತಮ. ಬೇಸಿಗೆಯಲ್ಲಿ  ಸೆಖೆ ಹೆಚ್ಚಾದ ಹಾಗೆ ಹಾಲು (Milk), ಬೆಣ್ಣೆ ಮತ್ತು ಚೀಸ್ ಬೇಗ ಜೀರ್ಣವಾಗುವುದಿಲ್ಲ. ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ : Tulsi :ಅಮೃತ ಸಮಾನ ಈ ತುಳಸಿ ರಸ..! ತಿಳಿಯಿರಿ ಆರೋಗ್ಯಕ್ಕೇನು ಲಾಭ.!

5. ಜಂಕ್ ಫುಡ್, ಫ್ರೈಡ್ ಫುಡ್ ಬೇಡ :
ಬೇಸಿಗೆಯಲ್ಲಿ (Summer) ಎಣ್ಣೆ ಜಾಸ್ತಿ ಇರುವ ಆಹಾರ, ಜಂಕ್ ಫುಡ್, ಕರಿದ ಅಥವಾ ಹುರಿದ ಆಹಾರ ಆದಷ್ಟು (Friesd food) ಕಡಿಮೆ ತಿನ್ನಬೇಕು.  ಇವು ಶರೀರದ ಒಳಗೆ ದಾಹ ಅಥವಾ ಉರಿಯನ್ನು ಸೃಷ್ಟಿಸುತ್ತವೆ. ಇದರಿಂದ ನಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

6. ಡ್ರೈಫುಡ್ಸ್.:
ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮುಂತಾದ ಡ್ರೈಫುಡ್ಸ್ (Dry fruits) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಬೇಸಿಗೆಯಲ್ಲಿ ಮಾತ್ರ ಇವನ್ನು ಹೆಚ್ಚಿಗೆ ತಿನ್ನಬಾರದು. ಯಾಕೆಂದರೆ, ಡ್ರೈಪುಡ್ಸ್ ದೇಹದ ಒಳಗೆ ಉರಿ ಸೃಷ್ಟಿಸಿಬಿಡುತ್ತವೆ.  ಹಾಗಾಗಿ ಡ್ರೈಪುಡ್ಸ್ ಬೇಸಿಗೆಯಲ್ಲಿ ಕಡಿಮೆ ತಿನ್ನಿ.

7. ಅಧಿಕ ಟೀ ಅಥವಾ ಕಾಫಿ :
ಕೆಲವರಿಗೆ ಕಾಫಿ (coffee) ಅಥವಾ ಟೀ ಇಲ್ಲದೆ ದಿನ ಸರಿಯುವುದಿಲ್ಲ. ಬೇಸಿಗೆ ದಿನಗಳಲ್ಲಿ ಕಾಫಿ, ಟೀ ಕುಡಿಯುವ ಅಭ್ಯಾಸ ಕಡಿಮೆ ಮಾಡಬೇಕು. ಬೇಸಿಗೆಯಲ್ಲಿ ಕಾಫಿ, ಟೀ ಹೆಚ್ಚಾದರೆ ಡಿಹೈಡ್ರೇಶನ್ (Dehydration) ಉಂಟಾಗುತ್ತದೆ. ಕಾಫಿ, ಟೀ ಬದಲು ಗ್ರೀನ್ ಟೀ ಕುಡಿಯಬಹುದು. 

ಇದನ್ನೂ ಓದಿ : Termeric Benefits : ಅರಸಿನ, ಲಿಂಬೆಯನ್ನು ಹೀಗೆ ಬಳಸಿ! ಆರೋಗ್ಯಕ್ಕೆ ಎಷ್ಟು ಹಿತಕಾರಿ ನೋಡಿ.!

8. ಮಸಾಲೆ ವಸ್ತು ಬೇಡವೇ ಬೇಡ.!
ದಾಲ್ಚಿನಿ, ಲವಂಗ, ಕರಿಮೆಣಸು ಇತ್ಯಾದಿ ಗರಂ ಮಸಾಲೆ ಸಾಮಾನುಗಳು ದೇಹದೊಳಗೆ ಉರಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ತಿನ್ನಬೇಕು.  ಮಸಾಲೆ ಸಾಮಾನುಗಳನ್ನು ಬೇಸಿಗೆಯಲ್ಲಿ ಅಧಿಕ ತಿಂದರೂ ಕೂಡಾ ಡಿಹೈಡ್ರೇಶನ್ ಉಂಟಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. 

9. ಮಾವಿನ ಹಣ್ಣು :
ಬೇಸಿಗೆಯಲ್ಲಿ ಮಾವಿನ ಹಣ್ಣು (Mango) ಭರ್ಜರಿಯಾಗಿ ಸಿಗುತ್ತದೆ. ಬೇಸಿಗೆ ಅಂದರೆ ಅದು ಮಾವಿನ ಹಣ್ಣಿನ ಪರ್ವ. ಮಾವು ತಿನ್ನಬಾರದು ಎಂದೇನೂ ಹೇಳುವುದಿಲ್ಲ. ಆದರೆ, ಸಿಕ್ಕಾಪಟ್ಟೆ ಮಾವು ತಿನ್ನಬಾರದು. ಹಿತಮಿತ ಮಾವು ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ಮಿತಿ ಮೀರಿದರೆ, ಹೊಟ್ಟೆನೋವು, ತಲೆನೋವು, ಡಯರಿಯಾ ಉಂಟಾಗುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News