ಡಯಾಬಿಟೀಸ್ ನಿಯಂತ್ರಣಕ್ಕೆ ತರಲು ಈ ಒಂದು ಸೊಪ್ಪು ತಿಂದರೆ ಸಾಕು .!

ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಲವಾರು ನೈಸರ್ಗಿಕ ಮಾರ್ಗಗಳಿವೆ. ಸಬ್ಬಸಿಗೆ ಸೊಪ್ಪನ್ನು ಬಳಸಿದರೆ ಅದರ ಪರಿಣಾಮವು ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ. 

Written by - Ranjitha R K | Last Updated : Jul 22, 2022, 11:15 AM IST
  • ಮಧುಮೇಹ ಕಾಯಿಲೆಗೆ ಬೆಸ್ಟ್ ಔಷಧಿ ಸಬ್ಬಸಿಗೆ ಸೊಪ್ಪು
  • ದೇಹದಲ್ಲಿ ಇನ್ಸುಲಿನ್ ಹೆಚ್ಚಿಸುತ್ತದೆ ಈ ಸೊಪ್ಪು
  • ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು
ಡಯಾಬಿಟೀಸ್ ನಿಯಂತ್ರಣಕ್ಕೆ ತರಲು ಈ ಒಂದು ಸೊಪ್ಪು ತಿಂದರೆ ಸಾಕು .! title=
Dill Leaves For Diabetes (file photo)

ಬೆಂಗಳೂರು : ಮಧುಮೇಹ ಕಾಯಿಲೆ ಇರುವ ವ್ಯಕ್ತಿಯ ದೇಹದಲ್ಲಿ ಇರುವ ಪ್ರಾಕ್ಸಿಸ್ ಇನ್ಸುಲಿನ್ ಅನ್ನು ಸರಿಯಾಗಿ ಸ್ರವಿಸಲು ಸಾಧ್ಯವಾಗುವುದಿಲ್ಲ. ಇನ್ಸುಲಿನ್ ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ. ಇದರ ಸಹಾಯದಿಂದ ನಮ್ಮ ಜೀವಕೋಶಗಳು ರಕ್ತದ ಮೂಲಕ ಸಕ್ಕರೆಯನ್ನು ಪಡೆಯುತ್ತವೆ. ಅದು ಶಕ್ತಿಯನ್ನು ನೀಡುತ್ತದೆ. ಮಧುಮೇಹ ರೋಗಿಗಳು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುವುದಿಲ್ಲ.

ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು : 
ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಲವಾರು ನೈಸರ್ಗಿಕ ಮಾರ್ಗಗಳಿವೆ. ಸಬ್ಬಸಿಗೆ ಸೊಪ್ಪನ್ನು ಬಳಸಿದರೆ ಅದರ ಪರಿಣಾಮವು ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ. ಮಧುಮೇಹ ರೋಗಿಗಳಿಗೆ ಸಬ್ಬಸಿಗೆ ಸೊಪ್ಪು ಔಷಧಿಯಂತೆ ಕೆಲಸ ಮಾಡುತ್ತದೆ. 

ಇದನ್ನೂ ಓದಿ : ಶನಿ ಸಂಕ್ರಮಣದಿಂದ ಬದಲಾಗುತ್ತೆ ಈ ಮೂರು ರಾಶಿಗಳ ಭವಿಷ್ಯ!

ಸಬ್ಬಸಿಗೆ ಸೊಪ್ಪು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ : 
ಪ್ರಪಂಚದಾದ್ಯಂತ ನಡೆದ ಎಲ್ಲಾ ಸಂಶೋಧನೆಗಳಲ್ಲಿ, ಸಬ್ಬಸಿಗೆ  ಸೊಪ್ಪು ಟೈಪ್ 2 ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎನ್ನುವುದು ಸಾಬೀತಾಗಿದೆ. ವಾಸ್ತವವಾಗಿ, ಈ ಸೊಪ್ಪು ನಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತವೆ.  ಈ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. 

ಸಬ್ಬಸಿಗೆ ಸೊಪ್ಪು ಬಳಸುವುದು ಹೇಗೆ ? 
1. ಸಬ್ಬಸಿಗೆ ಸೊಪ್ಪನ್ನು ಅನೇಕ ರೀತಿಯಲ್ಲಿ ಆಹಾರದಲ್ಲಿ ಬಳಸಬಹುದು.  ಇದರ ರುಚಿಯನ್ನು ಹೆಚ್ಚಿಸಲು ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ಜೀರಿಗೆ ಮತ್ತು ಸಾಸಿವೆಗಳನ್ನು ಸಹ ಬಳಸಲಾಗುತ್ತದೆ.

ಇದನ್ನೂ ಓದಿ : 30 ವರ್ಷಗಳ ನಂತರ ಈ ರಾಶಿಯವರನ್ನು ಹರಸಲಿದ್ದಾನೆ ಶನಿ ದೇವ

2. ಸಬ್ಬಸಿಗೆ  ಸೊಪ್ಪನ್ನು ಸೇವಿಸುವ ಆರೋಗ್ಯಕರ ವಿಧಾನವೆಂದರೆ ಅದರ ರಸವನ್ನು ತೆಗೆಡು ಕುಡಿಯುವುದು. ಮೊದಲು ಅದರ ಸೊಪ್ಪನ್ನು ಮಿಕ್ಸಿಯಲ್ಲಿ  ಹಾಕಿ ರುಬ್ಬಿಕೊಳ್ಳಿ. ನಂತರ ರುಚಿಗೆ ಅನುಗುಣವಾಗಿ ನಿಂಬೆ ಮತ್ತು  ಬ್ಲಾಕ್ ಸಾಲ್ಟ್ ಸೇರಿಸಿ ಕುಡಿಯಬಹುದು. 

3. ಇನ್ನು ರೊಟ್ಟಿಯನ್ನು ಮಾಡುವಾಗ ಸಬ್ಬಸಿಗೆ ಸೊಪ್ಪನ್ನು ಸೇರಿಸಿದರೆ ರುಚಿಯೂ ಹೆಚ್ಚುತ್ತದೆ.  ರೋಗ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.  ಇದಲ್ಲದೇ ಸಲಾಡ್ ಸೂಪ್ ಅಥವಾ ಉಪ್ಪಿನಕಾಯಿ ತಯಾರಿಸಿ ಸೇವಿಸಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News