ಈ ಆರೋಗ್ಯ ಲಾಭಗಳಿಗಾಗಿ ನಿತ್ಯವೂ ಒಂದು ಕಪ್ ಮೊಸರು ತಿನ್ನಬೇಕು

Benefits Of Yogurt : ನಿತ್ಯವೂ ಮೊಸರು ತಿಂದರೆ ಆರೋಗ್ಯಕ್ಕೆ  ಅನೇಕ ರೀತಿಯ ಪ್ರಯೋಜನಗಳಾಗುವುದು.  ಕೆಲವೊಂದು ರೋಗಗಳಿಗೆ ಪರಿಹಾರವಾಗಿ ಮೊಸರು ಕೆಲಸ ಮಾಡುತ್ತದೆ.   

Written by - Ranjitha R K | Last Updated : Oct 9, 2023, 03:21 PM IST
  • ಮೊಸರು ಹಾಲಿನಿಂದ ಮಾಡಿದ ಡೈರಿ ಉತ್ಪನ್ನವಾಗಿದೆ.
  • ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಕಂಡು ಬರುತ್ತದೆ.
  • ಮೊಸರು ತಿನ್ನುವುದರಿಂದ ಆಗುವ ಪ್ರಯೋಜನಗಳು
ಈ ಆರೋಗ್ಯ ಲಾಭಗಳಿಗಾಗಿ ನಿತ್ಯವೂ ಒಂದು ಕಪ್ ಮೊಸರು ತಿನ್ನಬೇಕು  title=

Benefits Of Yogurt : ಮೊಸರು ಹಾಲಿನಿಂದ ಮಾಡಿದ ಡೈರಿ ಉತ್ಪನ್ನವಾಗಿದೆ. ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಕಂಡು ಬರುತ್ತದೆ. ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳು ಲ್ಯಾಕ್ಟೋಬಾಸಿಲಸ್ ಬಲ್ಗೇರಿಕಸ್ ಮತ್ತು ಸ್ಟ್ರೆಪ್ಟೋಕೊಕಸ್ ಥರ್ಮೋಫಿಲಸ್ ಅನ್ನು ಒಳಗೊಂಡಿರುತ್ತವೆ. ಇದು ಲ್ಯಾಕ್ಟೋಸ್ ಅನ್ನು ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತಿಸುತ್ತದೆ. ಇದರಿಂದಾಗಿ ಮೊಸರು ಉತ್ಪತ್ತಿಯಾಗುತ್ತದೆ. ನಿತ್ಯವೂ ಮೊಸರು ತಿಂದರೆ ಆರೋಗ್ಯಕ್ಕೆ  ಅನೇಕ ರೀತಿಯ ಪ್ರಯೋಜನಗಳಾಗುವುದು.  

ಮೊಸರು ತಿನ್ನುವುದರಿಂದ ಆಗುವ ಪ್ರಯೋಜನಗಳು : 
1. ಜೀರ್ಣಕ್ರಿಯೆ ಸುಧಾರಿಸುತ್ತದೆ : 

ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಇದು ಪ್ರಯೋಜನಕಾರಿ ಬ್ಯಾಕ್ಟೀರಿಯಾ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಮಲಬದ್ಧತೆ ಮತ್ತು ಅತಿಸಾರದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದಲ್ಲದೆ, Lactose Intolerance ಸಮಸ್ಯೆಯೂ ಕಡಿಮೆಯಾಗುತ್ತದೆ.

ಇದನ್ನೂ ಓದಿ : Watermelon Seed Benefits: ಕಲ್ಲಂಗಡಿ ಬೀಜಗಳಲ್ಲಿದೆ ಆರೋಗ್ಯದ ನಿಧಿ

2. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ:
ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ನ್ಯಾಚ್ಯುರಲ್ ಆಂಟಿ ಬಾಡೀಸ್  (natural antibodies ) ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.  ಇದನ್ನು ನಿತ್ಯ ತಿನ್ನುವುದರಿಂದ ವೈರಲ್ ರೋಗಗಳ ಅಪಾಯವು ಸಾಕಷ್ಟು ಕಡಿಮೆಯಾಗುತ್ತದೆ.

3. ತೂಕ ನಿಯಂತ್ರಣದಲ್ಲಿರುತ್ತದೆ:
ನಿಮ್ಮ ಆಹಾರದಲ್ಲಿ ಮೊಸರು ಇದ್ದರೆ, ತೂಕವನ್ನು ನಿಯಂತ್ರಿಸುವ ನಿಮ್ಮ ಕನಸು ಖಂಡಿತವಾಗಿಯೂ ಈಡೇರುತ್ತದೆ. ಮೊಸರಿನಲ್ಲಿ ತೀರಾ ಕಡಿಮೆ ಪ್ರಮಾಣದ ಕ್ಯಾಲೊರಿಗಳಿರುತ್ತದೆ. ಅದರಲ್ಲಿ ಹೇರಳವಾದ ಪ್ರೋಟೀನ್ ಕಂಡುಬರುತ್ತದೆ. ಈ ಕಾರಣದಿಂದಾಗಿ,  ನಿಮಗೆ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಹಸಿವಾಗದೇ ಹೋದಾಗ ಕಡಿಮೆ ಆಹಾರ ಸೇವಿಸುತ್ತೀರಿ. ಹಾಗಾಗಿ ದೇಹ ತೂಕ ಕಡಿಮೆಯಾಗುತ್ತದೆ. 

ಇದನ್ನೂ ಓದಿ : Period Pain: ಅಸಹನೀಯ ಮುಟ್ಟಿನ ನೋವಿನಿಂದ ಪರಿಹಾರಕ್ಕಾಗಿ 5 ಪರಿಣಾಮಕಾರಿ ಮನೆಮದ್ದುಗಳಿವು

4. ಹೃದಯದ ಆರೋಗ್ಯ ಸುಧಾರಿಸುತ್ತದೆ :
ಹೃದಯ ಕಾಯಿಲೆ ಇರುವವರು ಅಥವಾ ಹೃದ್ರೋಗದಿಂದ ದೂರವಿರಲು ಬಯಸುವವರು ಇಂದಿನಿಂದಲೇ ಮೊಸರು ತಿನ್ನಲು ಆರಂಭಿಸಿ. ಪ್ರೋಬಯಾಟಿಕ್‌ಗಳು, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಇದರಲ್ಲಿ ಕಂಡುಬರುತ್ತವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News