Corona Care Tips: ನಿಮಗೂ ಕರೋನಾ ಲಕ್ಷಣಗಳಿದ್ದರೆ, ಡೋಂಟ್ ವರಿ ಈ ಡ್ರಿಂಕ್ಸ್ ಕುಡಿಯಿರಿ

ನೀವು ಕರೋನಾ ಪಾಸಿಟಿವ್ ಆಗಿದ್ದರೆ ಅಥವಾ ಕರೋನಾ ಲಕ್ಷಣಗಳಿದ್ದರೆ ಭಯಪಡಬೇಡಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದು ಶೀಘ್ರದಲ್ಲೇ ಗುಣಮುಖರಾಗಬಹುದು.

Written by - Yashaswini V | Last Updated : Apr 28, 2021, 03:23 PM IST
  • ಕರೋನಾವನ್ನು ಸೋಲಿಸುವಲ್ಲಿ ದೇಹದಲ್ಲಿರುವ ರೋಗನಿರೋಧಕ ಶಕ್ತಿ ದೊಡ್ಡ ಪಾತ್ರ ವಹಿಸುತ್ತದೆ
  • ನಿತ್ಯ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
  • ಅದು ನೋಯುತ್ತಿರುವ ಗಂಟಲು, ಕೆಮ್ಮಿನ ಸಮಸ್ಯೆಯಿಂದ ನಿಮಗೆ ಬಹಳ ಪ್ರಯೋಜನಕಾರಿ
Corona Care Tips: ನಿಮಗೂ ಕರೋನಾ ಲಕ್ಷಣಗಳಿದ್ದರೆ, ಡೋಂಟ್ ವರಿ ಈ ಡ್ರಿಂಕ್ಸ್ ಕುಡಿಯಿರಿ title=
Corona Care Tips

Covid-19 Care Tips: ದೇಶದಲ್ಲಿ ಕಳೆದ ಎರಡು ವಾರಗಳಿಂದ ಕರೋನಾ ಸೋಂಕಿತರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಲಕ್ಷಾಂತರ ಮಂದಿ ಹೋಂ ಕ್ವಾರೆಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಕರೋನಾ ಪಾಸಿಟಿವ್ ಇದ್ದರೆ ಅಥವಾ ಕರೋನಾ ಲಕ್ಷಣಗಳಿದ್ದರೆ ಭಯಪಡುವ ಅಗತ್ಯವಿಲ್ಲ. ನೀವು ಮನೆಯಲ್ಲಿ ಸರಿಯಾಗಿ ಕೇರ್ ತೆಗೆದುಕೊಳ್ಳುವ ಮೂಲಕ ಶೀಘ್ರವೇ ಚೇತರಿಸಿಕೊಳ್ಳಬಹುದು.

ಕರೋನಾವನ್ನು ಸೋಲಿಸುವಲ್ಲಿ ದೇಹದ ಬಲವಾದ ರೋಗನಿರೋಧಕ ಶಕ್ತಿ ದೊಡ್ಡ ಪಾತ್ರ ವಹಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ನಿಮ್ಮ ರೋಗನಿರೋಧಕ ಶಕ್ತಿ ಬಲವಾಗಿರುವುದು ಬಹಳ ಮುಖ್ಯ.

ಕಷಾಯ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಕರೋನಾ (Coronavirus) ಯುಗದಲ್ಲಿ ತಪ್ಪದೇ ಕಷಾಯವನ್ನು ಕುಡಿಯುವುದರಿಂದ ಜನರು ಕರೋನಾದಿಂದ ರಕ್ಷಣೆ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ - Pulse Oximeter: ಆಕ್ಸಿಮೀಟರ್ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಇಲ್ಲಿದೆ ಅಗ್ಗದ ಆಯ್ಕೆ

ಕಷಾಯ ತಯಾರಿಸುವುದು ಹೇಗೆ?
ಕಷಾಯ ತಯಾರಿಸುವುದು ತುಂಬಾ ಸುಲಭ. ಅದಕ್ಕಾಗಿ ಒಂದು ಲೋಟ ನೀರು ತೆಗೆದುಕೊಳ್ಳಿ. ಇದಕ್ಕೆ 4 ಕರಿಮೆಣಸು ಸೇರಿಸಿ. ಇದರ ನಂತರ, ಇದಕ್ಕೆ 4 ತುಳಸಿ ಎಲೆಗಳನ್ನು ಸೇರಿಸಿ. ಒಂದು ತುಂಡು ಶುಂಠಿಯನ್ನು ಕುಟ್ಟಿ ಹಾಕಿ, ಸಣ್ಣ ತುಂಡು ದಾಲ್ಚಿನ್ನಿ ಸೇರಿಸಿ. 

ಇವೆಲ್ಲವನ್ನೂ ಚೆನ್ನಾಗಿ ಕುದಿಸಿ. ನೀರು ಅರ್ಧವಾಗುವವರೆಗೆ ಕುದಿಸಿ, ಅದನ್ನು ಒಂದು ಲೋಟಕ್ಕೆ ಸೋಸಿಕೊಳ್ಳಿ. ನಿಮಗಿಷ್ಟವಿದ್ದರೆ ಅದರಲ್ಲಿ ಒಂದು ಚಮಚ ಜೇನುತುಪ್ಪ (Honey) ವನ್ನು ಮಿಶ್ರಣ ಮಾಡಿ. ಚಹಾದಂತೆ ನಿಧಾನವಾಗಿ ಕುಡಿಯಿರಿ.

ಇದನ್ನೂ ಓದಿ - ಕರೋನಾ ಎರಡನೇ ಅಲೆಯಿಂದ ಬಚಾವಾಗಲು ಏನು ತಿನ್ನಬೇಕು ಏನು ತಿನ್ನಬಾರದು? ಏನು ಹೇಳುತ್ತೆ WHO

ನಿತ್ಯ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಅದು ನೋಯುತ್ತಿರುವ ಗಂಟಲು, ಕೆಮ್ಮಿನ ಸಮಸ್ಯೆಗೆ ಕೂಡ ಇದು ನಿಮಗೆ ಬಹಳ ಪ್ರಯೋಜನಕಾರಿಯಾಗಿದೆ.  

ಆದರೆ ನಿಮಗೆ ಅತಿಸಾರ ಅಥವಾ ಹೊಟ್ಟೆ ನೋವು ಇದ್ದರೆ, ನೀವು ಬೆಳಗಿನ ಉಪಹಾರವಾದ ಒಂದು ಗಂಟೆ ಬಳಿಕ ಅಥವಾ ಸಂಜೆ ಕುಡಿಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News