ಇಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಈ ಒಂದು ಹಸಿರು ಹಣ್ಣು

ಕಿವಿಯಲ್ಲಿ ಕಂಡುಬರುವ ಪೋಷಕಾಂಶಗಳು ಕ್ಯಾಲೋರಿಗಳಲ್ಲಿ ಬಹಳ ಕಡಿಮೆ ಮತ್ತು ತಮ್ಮ ಫಿಟ್ನೆಸ್ ಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.  ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ. ಕಿವಿಯಲ್ಲಿ ನಾರಿನಂಶ ಮತ್ತು ಪೊಟ್ಯಾಶಿಯಂ ಅಧಿಕವಾಗಿದೆ. 

Written by - Ranjitha R K | Last Updated : May 1, 2023, 04:42 PM IST
  • ಕಿವಿಯು ವರ್ಷವಿಡೀ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಹಣ್ಣಾಗಿದೆ.
  • ಈ ಹಣ್ಣಿನಲ್ಲಿ ನಿಮ್ಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಸಮೃದ್ಧವಾಗಿದೆ
  • ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ.
ಇಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಈ ಒಂದು ಹಸಿರು ಹಣ್ಣು  title=

ಬೆಂಗಳೂರು : ಕಿವಿಯು ವರ್ಷವಿಡೀ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಹಣ್ಣಾಗಿದೆ. ಈ ಹಣ್ಣಿನಲ್ಲಿ ನಿಮ್ಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಸಮೃದ್ಧವಾಗಿರುವ ಕಾರಣ ಇದನ್ನು ಸೂಪರ್‌ಫುಡ್ ವಿಭಾಗದಲ್ಲಿ ಇರಿಸಲಾಗಿದೆ. ಕಿವಿ ಹಣ್ಣಿನ ಚರ್ಮವು ಹಸಿರು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತದೆ. ಬೇರೆ ಹಣ್ಣುಗಳಿಗೆ ಹೋಲಿಸಿದರೆ ಇದರ ಬೆಲೆ ತುಸು ದುಬಾರಿ. ಈ ಹಣ್ಣು ದುಬಾರಿಯಾದರೂ ಆರೋಗ್ಯದ ಗಣಿ.  ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ. ಕಿವಿಯಲ್ಲಿ ನಾರಿನಂಶ ಮತ್ತು ಪೊಟ್ಯಾಶಿಯಂ ಅಧಿಕವಾಗಿದೆ. 

ಕಿವಿಯಲ್ಲಿ ಕಂಡುಬರುವ ಪೋಷಕಾಂಶಗಳು ಕ್ಯಾಲೋರಿಗಳಲ್ಲಿ ಬಹಳ ಕಡಿಮೆ ಮತ್ತು ತಮ್ಮ ಫಿಟ್ನೆಸ್ ಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಫೈಬರ್ ಸಮೃದ್ಧವಾಗಿದೆ. ಇದು ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅಂತೆಯೇ, ಒಂದು ಮಧ್ಯಮ ಕಿವಿ ಹಣ್ಣಿನಲ್ಲಿ 61 ಕ್ಯಾಲೋರಿಗಳು, ಕೊಬ್ಬು 0.5 ಗ್ರಾಂ, ಸೋಡಿಯಂ    3ಮಿ.ಗ್ರಾಂ, ಕಾರ್ಬೋಹೈಡ್ರೇಟ್ ಗಳು 15 ಗ್ರಾಂ,
ಸಕ್ಕರೆ    9 ಗ್ರಾಂ, ಆಹಾರದ ಫೈಬರ್ 3 ಗ್ರಾಂ, ಪ್ರೋಟೀನ್ 1.1 ಗ್ರಾಂನಷ್ಟಿರುತ್ತದೆ.  

ಇದನ್ನೂ ಓದಿ : ದಾಳಿಂಬೆ ಹಣ್ಣಿನಿಂದಾಗುವ ಪ್ರಯೋಜನಗಳೇನು ಗೊತ್ತಾ..?

ಕಿವಿ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು : 
1. ಹೃದ್ರೋಗ ಇರುವವರು ಆಗಾಗ ಕಿವಿ ಹಣ್ಣು ತಿನ್ನುವುದು ಒಳ್ಳೆಯದು. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
2. ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ ಕಿವಿ ಹಣ್ಣನ್ನು ಖಂಡಿತವಾಗಿ ಸೇವಿಸಿ. ಇದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.
3. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ,  ಮಧುಮೇಹ ರೋಗಿಗಳಿಗೆ ಹಾನಿ ಮಾಡುವುದಿಲ್ಲ. ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4. ಕಿವಿ ಹಣ್ಣು  ತಿನ್ನುವುದರಿಂದ  ವಿಷಕಾರಿ ಅಂಶಗಳು ದೇಹದಿಂದ ಹೊರಹೋಗಲು ಪ್ರಾರಂಭಿಸುತ್ತವೆ ಮತ್ತು ಅದರ ಸಕಾರಾತ್ಮಕ ಪರಿಣಾಮವು ನಮ್ಮ ಚರ್ಮದ ಮೇಲೆ ಗೋಚರಿಸುತ್ತದೆ.
5. ಕಿವಿ ಹಣ್ಣಿನ ನಿಯಮಿತ ಸೇವನೆಯು ಚರ್ಮಕ್ಕೆ ಅದ್ಭುತವಾದ ಹೊಳಪನ್ನು ನೀಡುತ್ತದೆ ಮತ್ತು ಸುಕ್ಕುಗಳನ್ನು ದೂರ ಮಾಡುತ್ತದೆ.

ಇದನ್ನೂ ಓದಿ : ಚಿಕನ್‌ ತಿನ್ನುವುದರರಿಂದಾಗುವ ಆರೋಗ್ಯ ಪ್ರಯೋಜನಗಳಿವು..!

6. ಉದರದ ಸಮಸ್ಯೆ ಇರುವವರು ನಿಯಮಿತವಾಗಿ ಕಿವಿ ಹಣ್ಣನ್ನು ತಿನ್ನಬೇಕು.
7. ಕಿವಿ ಹಣ್ಣು ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
8. ಕಿವಿ ಹಣ್ಣಿನಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿದೆ.  ಇದು ಗರ್ಭಿಣಿಯರಿಗೆ ಪ್ರಯೋಜನಕಾರಿಯಾಗಿದೆ.
9. ಕಿವಿ ಹಣ್ಣನ್ನು ತಿನ್ನುವುದು ನಮ್ಮ ಮೂಳೆಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಇದು ಕೀಲು ನೋವನ್ನು ನಿವಾರಿಸುತ್ತದೆ.
10. ಖಿನ್ನತೆಯಿಂದ ಬಳಲುತ್ತಿರುವವರು ಒತ್ತಡವನ್ನು ಕಡಿಮೆ ಮಾಡಲು ಕಿವಿ ಹಣ್ಣನ್ನು ತಿನ್ನಬೇಕು.
11. ಕಿವಿ ಹಣ್ಣು ರೋಗನಿರೋಧಕ ಶಕ್ತಿಯನ್ನು ಬಹಳವಾಗಿ ಹೆಚ್ಚಿಸುತ್ತದೆ ಇದು ಅನೇಕ ರೋಗಗಳು ಮತ್ತು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
12. ಕಿವಿ ಹಣ್ಣು ಉತ್ತಮ ಜೀರ್ಣಕಾರಿಗೆ ಸಹಾಯಕವಾಗಿದೆ. ಇದು ಪಿತ್ತರಸ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 
13. ಕಿವಿ ಹಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇದ್ದು ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಹಲ್ಲುಗಳನ್ನು ನಿರ್ಮಿಸಲು ಕ್ಯಾಲ್ಸಿಯಂ ಅತ್ಯಗತ್ಯ. 
14. ಕಿವಿ ಹಣ್ಣು ಕೆಲವು ಕ್ಯಾನ್ಸರ್ ಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಹೇಳಲಾಗಿದೆ. ವಾರದಲ್ಲಿ ಐದಕ್ಕಿಂತ ಹೆಚ್ಚು ಬಾರಿ ಕಿವಿ ಹಣ್ಣನ್ನು ತಿನ್ನುವ ಮಹಿಳೆಯರು ಸ್ತನ ಕ್ಯಾನ್ಸರ್ ಅಪಾಯದಿಂದ ದೂರ ಉಳಿಯುತ್ತಾರೆ ಎಂದು ಅಧ್ಯಯನಗಳು ತೋರಿಸುತ್ತವೆ.
15. ಮಾಗಿದ ಕಿವಿ ಹಣ್ಣನ್ನು ಸೇವಿಸುವುದು ಅಥವಾ ತಾಜಾ ಕಿವಿ ಹಣ್ಣನ್ನು ಜ್ಯೂಸ್ ಮಾಡುವುದರಿಂದ ವಯಸ್ಸಾದ ಸಂಕೇತಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ : ಈ ನಾಲ್ಕು ಹಣ್ಣನ್ನು ಸೇವಿಸುವ ಮೂಲಕ ಡಯಾಬಿಟೀಸ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು!

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದಕ್ಕೆ ಜವಾಬ್ದಾರನಾಗಿರುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News