Acidity Problems: ನಿಮ್ಮನ್ನು ಕಾಡುವ ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು!

ಬೆಳೆ ಕಾಳುಗಳನ್ನು ತಿನ್ನುವುದರಿಂದ ಅನೇಕರಿಗೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಕೆಲವು ಮನೆಮದ್ದುಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಅಸಿಡಿಟಿ ಸಂದರ್ಭದಲ್ಲಿ ಈ ಮನೆಮದ್ದುಗಳಿಂದ ನಿಮಗೆ ಪರಿಹಾರ ಸಿಗುತ್ತದೆ.

Written by - Puttaraj K Alur | Last Updated : Oct 10, 2022, 08:20 AM IST
  • ಗ್ಯಾಸ್ ಸಮಸ್ಯೆಗೆ ಕರಿಮೆಣಸು & ಕೊತ್ತಂಬರಿ ಸೊಪ್ಪಿನ ರಸವನ್ನು ಮಜ್ಜಿಗೆಗೆ ಬೆರೆಸಿ ಸೇವಿಸಿ
  • ಒಂದು ಕಪ್ ನೀರಿಗೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಸೇವಿಸಿದರೆ ಗ್ಯಾಸ್ ಸಮಸ್ಯೆಗೆ ಮುಕ್ತಿ
  • ಆಹಾರ ಸೇವಿಸಿದ ನಂತರ ಹುರಿದ ಜೀರಿಗೆಯನ್ನು ಪುಡಿಮಾಡಿ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿರಿ
Acidity Problems: ನಿಮ್ಮನ್ನು ಕಾಡುವ ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು! title=
ಅಸಿಡಿಟಿ ಸಮಸ್ಯೆಗೆ ಮನೆಮದ್ದುಗಳು

ನವದೆಹಲಿ: ಬೇಳೆಕಾಳುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳಲ್ಲಿ ಬಹಳಷ್ಟು ಪ್ರೋಟೀನ್ ಮತ್ತು ಅಗತ್ಯ ಖನಿಜಗಳಿರುತ್ತವೆ. ಆದರೆ ಬೇಳೆಕಾಳುಗಳನ್ನು ಸೇವಿಸಿದ ನಂತರ ಅನೇಕ ಜನರಿಗೆ ಗ್ಯಾಸ್ ಸಮಸ್ಯೆ ಬರುತ್ತದೆ. ಆದ್ದರಿಂದ ಬೆಳೆಕಾಳುಗಳನ್ನು ಯಾವಾಗಲೂ ಸರಿಯಾದ ಸಮಯದಲ್ಲಿ ಮಾತ್ರ ತಿನ್ನೇಬೇಕು. ಅವರೆಕಾಳು, ಅಲಸಂದಿ, ಬೇಳೆ ಮುಂತಾದ ಕೆಲವು ಕಾಳುಗಳನ್ನು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಹೆಚ್ಚಲು ಶುರುವಾಗುತ್ತದೆ. ಈ ಸಮಸ್ಯೆಗೆ ಯಾವ ಮನೆಮದ್ದು ಬಳಸಿದರೆ ಸೂಕ್ತ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

ಮಜ್ಜಿಗೆ ಸೇವಿಸಿ

ಮೊಸರನ್ನು ಮಜ್ಜಿಗೆ ಮಾಡಲು ಬಳಸುತ್ತಾರೆ. ಲ್ಯಾಕ್ಟಿಕ್ ಆಮ್ಲವು ಮಜ್ಜಿಗೆಯಲ್ಲಿ ಕಂಡುಬರುತ್ತದೆ. ಗ್ಯಾಸ್ ಸಮಸ್ಯೆ ಕಂಡು ಬಂದರೆ ಸ್ವಲ್ಪ ಕರಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನ ರಸವನ್ನು ಮಜ್ಜಿಗೆಗೆ ಬೆರೆಸಿ ಸೇವಿಸಿ. ಮಜ್ಜಿಗೆ ಸೇವನೆಯಿಂದ ಗ್ಯಾಸ್ ಸಮಸ್ಯೆಯಿಂದ ತಕ್ಷಣ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಬಿಎಸ್ಎಫ್ ಯೋಧನ ಅಂಗಾಗ ದಾನ

ಆಪಲ್ ವಿನೆಗರ್

ಸೊಪ್ಪನ್ನು ತಿನ್ನುವುದರಿಂದ ಆಸಿಡ್ ರಿಫ್ಲೆಕ್ಸ್ ಸಮಸ್ಯೆ ಉಂಟಾಗುತ್ತದೆ, ಇದರಿಂದಾಗಿ ಹೊಟ್ಟೆಯಲ್ಲಿ ಆಮ್ಲದ ಕೊರತೆ ಉಂಟಾಗುತ್ತದೆ. ಈ ರೀತಿ ಆದಾಗ ನಿಮಗೆ ಆಪಲ್ ವಿನೆಗರ್ ಹೆಚ್ಚು ಉಪಯುಕ್ತವಾಗಬಹುದು. ಒಂದು ಕಪ್ ನೀರಿಗೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಮತ್ತು ಅದನ್ನು ಸರಿಯಾಗಿ ಮಿಶ್ರಣ ಮಾಡಿ. ದಿನಕ್ಕೆ 2 ಬಾರಿ ಇದನ್ನು ಸೇವಿಸಿ. ಹೀಗೆ ಮಾಡುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಜೀರಿಗೆ ಬಳಸಿ

ಜೀರಿಗೆಯಿಂದ ಗ್ಯಾಸ್ ಸಮಸ್ಯೆ ದೂರವಾಗುತ್ತದೆ. ಇದನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದಲ್ಲದೆ ಹೊಟ್ಟೆನೋವು ದೂರವಾಗುತ್ತದೆ. ಆಹಾರ ಸೇವಿಸಿದ ನಂತರ ಹುರಿದ ಜೀರಿಗೆಯನ್ನು ಪುಡಿಮಾಡಿ ನೀರಿನಲ್ಲಿ ಮಿಶ್ರಣ ಮಾಡಿ. ಅದರ ನಂತರ ಅದನ್ನು ಸೇವಿಸಿ. ಬಿಸಿ ನೀರಿಗೆ ಜೀರಿಗೆ ಸೇರಿಸಿ ಸಹ ಕುಡಿಯಬಹುದು.

ಇದನ್ನೂ ಓದಿ: Garlic-Water Benefits: ಉಗುರು ಬೆಚ್ಚನೆಯ ನೀರು-ಬೆಳ್ಳುಳ್ಳಿಯಿಂದಾಗುವ ಈ ಲಾಭಗಳು ನಿಮಗೆ ತಿಳಿದಿವೆಯಾ?

ತುಳಸಿ ಬಳಸಿ

ತುಳಸಿ ಎಲೆಗಳನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆಯಿಂದ ತಕ್ಷಣ ಪರಿಹಾರ ಸಿಗುತ್ತದೆ. ಗ್ಯಾಸ್ ಸಮಸ್ಯೆ ಇದ್ದರೆ ತಾಜಾ ತುಳಸಿ ಎಲೆಗಳನ್ನು ಒಡೆದು ತಿನ್ನಬೇಕು. ನೀವು ಇದನ್ನು ಸರಳವಾಗಿ ತಿನ್ನಲು ಬಯಸದಿದ್ದರೆ, ಬಿಸಿ ನೀರಿನಲ್ಲಿ ಹಾಕಿ ಸಹ ಸೇವಿಸಬಹುದು.

ದಾಲ್ಚಿನ್ನಿ ಚಹಾ

ದಾಲ್ಚಿನ್ನಿ ತಿನ್ನುವುದು ಹೊಟ್ಟೆಯ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದಲ್ಲದೆ ದಾಲ್ಚಿನ್ನಿ ಜೀರ್ಣಾಂಗವ್ಯೂಹದ ಸೋಂಕುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಗ್ಯಾಸ್ ಸಮಸ್ಯೆ ಇದ್ದಲ್ಲಿ ದಾಲ್ಚಿನ್ನಿಯಿಂದ ತಯಾರಿಸಿದ ಟೀ ಸೇವಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News