ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ 'ದಿ ಇಂಡಿಯನ್ ಹೌಸ್'

ರಾಮ್ ಚರಣ್ ನಿರ್ಮಾಣದ ದಿ ಇಂಡಿಯಾ ಹೌಸ್ ಹೆಸರಿನಡಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ತೆಲುಗಿನ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ನಟಿಸಲಿದ್ದಾರೆ. ಇಂದು ಹಂಪಿಯ ವಿರೂಪಾಕ್ಷ ಸನ್ನಿಧಿಯಲ್ಲಿ ದಿ ಇಂಡಿಯಾ ಹೌಸ್ ಸಿನಿಮಾದ ಮುಹೂರ್ತ ನೆರವೇರಿದೆ.

Written by - Yashaswini V | Last Updated : Jul 2, 2024, 01:47 PM IST
  • ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ದಿ ಇಂಡಿಯನ್ ಹೌಸ್'
  • ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿ 'ದಿ ಇಂಡಿಯಾ ಹೌಸ್' ವನ್ನು ಕಟ್ಟಿಕೊಡಲಾಗುತ್ತಿದೆ.
  • ಸಿನಿಮಾದಲ್ಲಿ ನಾಯಕ ನಿಖಿಲ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ 'ದಿ ಇಂಡಿಯನ್ ಹೌಸ್' title=

The India House: ಆರ್‌ಆರ್‌ಆರ್ (RRR) ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan), ಇತ್ತೀಚೆಗೆ ವಿ ಮೆಗಾ ಪಿಕ್ಚರ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ತಮ್ಮ ಮೊದಲ ಸಿನಿಮಾ ಆಗಿ ಸಾರ್ವಕರ್ ಜೀವನ ಕತೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. 

ದಿ ಇಂಡಿಯಾ ಹೌಸ್ (The India House) ಹೆಸರಿನಡಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ತೆಲುಗಿನ ನಿಖಿಲ್ ಸಿದ್ಧಾರ್ಥ್ (Nikhil Siddharth) ನಾಯಕನಾಗಿ ನಟಿಸಲಿದ್ದಾರೆ. ಇಂದು ಹಂಪಿಯ ವಿರೂಪಾಕ್ಷ ಸನ್ನಿಧಿಯಲ್ಲಿ ದಿ ಇಂಡಿಯಾ ಹೌಸ್ ಸಿನಿಮಾದ ಮುಹೂರ್ತ ನೆರವೇರಿದೆ. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಇದನ್ನೂ ಓದಿ- ಕದ್ದು ಮುಚ್ಚಿ ರಾಮ್‌ ಚರಣ್‌ ಮನೆಯಲ್ಲಿದ್ದ ಗುಟ್ಟು ರಟ್ಟು ಮಾಡಿದ ಖ್ಯಾತ ನಟಿ !

ದಿ ಕಾಶ್ಮೀರಿ ಫೈಲ್ಸ್ (The Kashmiri Files), ಕಾರ್ತಿಕೇಯ-2 ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಅಭಿಷೇಕ್ ಅಗರ್ವಾಲ್ ತಮ್ಮದೇ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಹಾಗೂ ರಾಮ್ ಚರಣ್ ಒಡೆತನದ ವಿ ಮೆಗಾ ಪಿಕ್ಚರ್ಸ್ (V Mega Pictures) ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದೆ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿ 'ದಿ ಇಂಡಿಯಾ ಹೌಸ್' ವನ್ನು ಕಟ್ಟಿಕೊಡಲಾಗುತ್ತಿದೆ. ಸಿನಿಮಾದಲ್ಲಿ ನಾಯಕ ನಿಖಿಲ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸ್ಟಾರ್ ಅನುಪಮ್ ಖೇರ್ ನಟಿಸುತ್ತಿರುವ ಈ ಸಿನಿಮಾಗೆ ರಾಮ್ ವಂಶಿ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.  ಅನುಪಮ್ ಅವರು ಶ್ಯಾಮ್‌ಜಿ ಕೃಷ್ಣ ವರ್ಮಾ ಅವರ ಪಾತ್ರ ನಿರ್ವಹಿಸಲಿದ್ದಾರೆ. ನಿಖಿಲ್ ಸಿದ್ದಾರ್ಥ್ ಗೆ ಜೋಡಿಯಾಗಿ ಸಾಯಿ ಮಂಜ್ರೇಕರ್ ಬಣ್ಣ ಹಚ್ಚಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ- ಕನ್ನಡ ನಟಿಯರಲ್ಲಿ ಅತೀ ಹೆಚ್ಚು ಇನ್ಸ್ಟಾಗಾಮ್‌ ಫಾಲೋವರ್ಸ್‌ ಹೊಂದಿರುವ ನಟಿ ಇವರೇ ನೋಡಿ...

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿ ಬರುತ್ತಿರು  ದಿ ಇಂಡಿಯನ್ ಹೌಸ್ ಸಿನಿಮಾಗೆ ಕ್ಯಾಮೆರಾನ್ ಬ್ರೈಸನ್ ಕ್ಯಾಮೆರಾ ಹಿಡಿಯಲಿದ್ದಾರೆ. ಕಾರ್ತಿಕೇಯ 2 ನಂತರ ನಿಖಿಲ್, ಅನುಪಮ್ ಖೇರ್, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಜೊತೆ ದಿ ಇಂಡಿಯಾ ಹೌಸ್ ಸಿನಿಮಾಗಾಗಿ ಮತ್ತೊಮ್ಮೆ ಒಂದಾಗಿದ್ದಾರೆ. ಈ ಚಿತ್ರದ ರೆಗ್ಯುಲರ್ ಶೂಟಿಂಗ್ ನಾಳೆಯಿಂದ ಶುರುವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News