EXCLUSIVE : ʼಪ್ಯಾನ್‌ ವರ್ಲ್ಡ್ ಸಿನಿಮಾʼಗೆ ಯಶ್‌ ತಯಾರಿ.. ಮಾಸ್ಟರ್ ಪೀಸ್‌ ಬಿಗ್‌ ಪ್ಲಾನ್‌ ರಿವೀಲ್‌..!

ಕೆಜಿಎಫ್‌ 2 ನಂತರ ಯಶ್‌ ಮುಂದಿನ ಸಿನಿಮಾ ಯಾವುದು ಅಂತ ರಾಕಿ ಅಭಿಮಾನಿಗಳು ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಇದೀಗ ರಾಕಿಭಾಯ್‌ ಬಿಗ್‌ ಐಡಿಯಾ ಒಂದು ರಿವೀಲ್‌ ಆಗಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ದೊಡ್ಡ ಮಟ್ಟದ ಚಿತ್ರಕ್ಕೆ ಕಿರಾತಕ ಪ್ಲಾನ್ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದಕ್ಕೆ ಪುರಾವೆಗಳು ಕೂಡಾ ಸಿಕ್ಕಿವೆ.

Written by - Krishna N K | Last Updated : Jan 9, 2023, 03:28 PM IST
  • ಕೆಜಿಎಫ್‌ 2 ನಂತರ ಯಶ್‌ ಮುಂದಿನ ಸಿನಿಮಾ ಯಾವುದು ಅಂತ ರಾಕಿ ಅಭಿಮಾನಿಗಳು ತಲೆಕೆಡಿಸಿಕೊಂಡು ಕುಳಿತಿದ್ದಾರೆ.
  • ಮುಂದಿನ ಸಿನಿಮಾಗೆ ಕಾಲಿವುಡ್, ಟಾಲಿವುಡ್ ಡೈರೆಕ್ಟರ್ ಬರ್ತಾರೆ ಅನ್ನೋ ಚರ್ಚೆ ನಡೆದಿದೆ.
  • ಮಾನ್ಸ್ಟರ್‌ ರಾಕಿ ತಮ್ಮ ಹೊಸ ಚಿತ್ರಕ್ಕೆ ಹಾಲಿವುಡ್ ಡೈರೆಕ್ಟರ್ ಕರೆತರಲು ತೆರೆ ಮರೆಯಲ್ಲೆ ಸಜ್ಜಾಗ್ತಿದ್ದಾರೆ ಎಂದು ಹೇಳಲಾಗಿದೆ.
EXCLUSIVE : ʼಪ್ಯಾನ್‌ ವರ್ಲ್ಡ್ ಸಿನಿಮಾʼಗೆ ಯಶ್‌ ತಯಾರಿ.. ಮಾಸ್ಟರ್ ಪೀಸ್‌ ಬಿಗ್‌ ಪ್ಲಾನ್‌ ರಿವೀಲ್‌..! title=

Yash19 updates : ಕೆಜಿಎಫ್‌ 2 ನಂತರ ಯಶ್‌ ಮುಂದಿನ ಸಿನಿಮಾ ಯಾವುದು ಅಂತ ರಾಕಿ ಅಭಿಮಾನಿಗಳು ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಇದೀಗ ರಾಕಿಭಾಯ್‌ ಬಿಗ್‌ ಐಡಿಯಾ ಒಂದು ರಿವೀಲ್‌ ಆಗಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ದೊಡ್ಡ ಮಟ್ಟದ ಚಿತ್ರಕ್ಕೆ ಕಿರಾತಕ ಪ್ಲಾನ್ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದಕ್ಕೆ ಪುರಾವೆಗಳು ಕೂಡಾ ಸಿಕ್ಕಿವೆ.

ಯಸ್‌... ಕೆಜಿಎಫ್‌ 2 ಭಾರತೀಯ ಸಿನಿರಂಗವನ್ನು ಸ್ಯಾಂಡಲ್ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಸಿನಿಮಾ. ಕೆಜಿಎಫ್‌ ಧೂಳಿನ ಕಣದ ರಭಸ ಹೇಗಿತ್ತು ಅಂದ್ರೆ, ಅನ್ಯಭಾಷೆಯ ಸಿನಿ ಪ್ರೇಕ್ಷಕರ ಬಾಯಲ್ಲಿ ರಾಕಿಭಾಯ್‌.. ರಾಕಿಭಾಯ್‌.. ಎನ್ನುವ ಘೋಷಣೆ ಕೇಳುವಂತೆ ಮಾಡಿತ್ತು. ಕೆಜಿಎಫ್‌ ಕಪ್ಪು ಮಣ್ಣಿನಲ್ಲಿ ವಿಜಯ್‌ ಕಿರಗಂದೂರು ಬಂಗಾರದ ಬೆಳೆ ತೆಗೆದಿದ್ದರು. ಅಲ್ಲದೆ, ದೇಶಕ್ಕೆ ಪ್ರಶಾಂತ್‌ ನೀಲ್‌ ಎಂಬ ಚಾಣಾಕ್ಷ ನಿರ್ದೇಶನ ಪರಿಚಯವಾಗಿತ್ತು. ಇದೀಗ ಯಶ್‌ ಅಭಿಮಾನಿಗಳ ಕೂಗು ಒಂದೇ... ಯಶ್‌ 19 ಯಾವಾಗ ಎಂಬುವುದು.

ಇದನ್ನೂ ಓದಿ: Shaakuntalam Trailer : ಸಮಂತಾ ʼಶಕುಂತಲಾʼ ಟ್ರೇಲರ್‌ ಅದ್ಭುತ, ಅಲ್ಲು ಅರ್ಜುನ್‌ ಮಗಳ ಎಂಟ್ರಿ ಸೂಪರ್‌..!

ʼರಾಜಾ ಹುಲಿʼ ಒಮ್ಮೆ ಮುಂದಕ್ಕೆ ಹೆಜ್ಜೆ ಇಟ್ರೆ ಬೇಟೆಯಾಡದೇ ಹಿಂದಿರುಗುವುದಿಲ್ಲ. ಎಂತೆಂತಹ ಸ್ಟಾರ್‌ಗಳು ಒಂದು ಬಿಗ್‌ ಹಿಟ್‌ ನೀಡಿ ಎರಡನೇ ಇನ್ನಿಂಗ್ಸ್‌ನಲ್ಲಿ ಸೋಲುಂಡಿದ್ದಾರೆ. ಆದ್ರೆ ಯಶ್‌ ಅಂತಹ ತಪ್ಪು ಮಾಡಲು ಸಿದ್ದರಾಗಿಲ್ಲ. ಅಲ್ಲದೆ, ತಮ್ಮ ಅಭಿಮಾನಿಗಳು ತಲೆತಗ್ಗಿಸುವ ಕೆಲಸವನ್ನು ಎಂದಿಗೂ ಮಾಡಲ್ಲ ಎಂದು ಯಶ್‌ ಶಪಥ ಮಾಡಿದ್ದಾರೆ. ಅದರಂತೆ ದುಡುಕದೆ ಯಶ್‌ ಎಚ್ಚರಿಕೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ.

ಯಾರೂ ನಿರೀಕ್ಷೇ ಮಾಡದ ರೀತಿ ವಿಭಿನ್ನವಾಗಿ ಅಲೋಚನೆ ಮಾಡ್ತಿರೋ ರಾಕಿಭಾಯ್, ಬಹು ದೊಡ್ಡ ಹೆಜ್ಜೆ ಇಡಲು ರೆಡಿಯಾಗಿದ್ದಾರೆ. ಅವರ ಮುಂದಿನ ಸಿನಿಮಾಗೆ ಕಾಲಿವುಡ್, ಟಾಲಿವುಡ್ ಡೈರೆಕ್ಟರ್ ಬರ್ತಾರೆ ಅನ್ನೋ ಚರ್ಚೆ ನಡೆದಿದೆ. ಇದರ ನಡುವೆ ಹೊಸ ಸುದ್ದಿಯೊಂದು ಕೇಳಿ ಬಂದಿದ್ದು, ಮಾನ್ಸ್ಟರ್‌ ರಾಕಿ ತಮ್ಮ ಹೊಸ ಚಿತ್ರಕ್ಕೆ ಹಾಲಿವುಡ್ ಡೈರೆಕ್ಟರ್ ಕರೆತರಲು ತೆರೆ ಮರೆಯಲ್ಲೆ ಸಜ್ಜಾಗ್ತಿದ್ದಾರೆ ಎಂದು ಹೇಳಲಾಗಿದೆ. ಯಶ್ 19 ಗೆ ಹಾಲಿವುಡ್ ಸ್ಟಾರ್ ಡೈರೆಕ್ಟರ್ ಆಕ್ಷನ್ ಕಟ್ ಹೇಳೊ ಸಾಧ್ಯತೆ ಕೂಡ ಹೆಚ್ಚಿದೆ.

ಇದನ್ನೂ ಓದಿ: Garadi: ಯೋಗರಾಜ್ ಭಟ್ ‘ಗರಡಿ’ ಮನೆಯ ಕಸರತ್ತು ಅಂತ್ಯ, ಶೀಘ್ರವೇ ತೆರೆಮೇಲೆ ಕುಸ್ತಿಯಾಟ!

ಕನ್ನಡಕ್ಕೆ ಹಾಲಿವುಡ್ ಡೈರೆಕ್ಟರ್, ಸ್ಟಂಟ್ ಮಾಸ್ಟರ್, ಕ್ಯಾಮರಾ ಮ್ಯಾನ್ ಕರೆತರಲು ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ ಮಾಸ್ಟರ್ ಪೀಸ್. ಅದಕ್ಕಾಗಿ ರಾಕಿ ನಿರಂತವಾಗಿ ಹಾಲಿವುಡ್ ಸ್ಟಾರ್ ಡೈರೆಕ್ಟರ್ ಜೊತೆ ಸಂಪರ್ಕದಲ್ಲಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ʼಅವತಾರ್ʼ ಸ್ಟಂಟ್ ಮಾಸ್ಟರ್ ಜೆಜೆ ಪೇರಿ ಜೊತೆ ಕಾಣಿಸಿಕೊಂಡು ಯಶ್ ಕುತೂಹಲ ಮೂಡಿಸಿದ್ದರು. ತಮ್ಮ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳೇ ಹೇಳ್ತಾರೆ ಎಂದಿದರುವ ರಾಕಿಗೆ, ಹಾಲಿವುಡ್ ಚಿತ್ರ ಮಾಡುವಂತೆ ಫ್ಯಾನ್ಸ್‌ ಡಿಮ್ಯಾಂಡ್ ಇಟ್ಟಿದ್ದಾರೆ.

ವಿಭಿನ್ನವಾದ ಸಿನಿಮಾ ಮೂಲಕ ನಿಮ್ಮ ಮುಂದೆ ಬರ್ತಿನಿ ಅಂತ ಬೇರೆ ಅಭಿಮಾನಿಗಳಿಗೆ ಯಶ್ ಮಾತು ಕೊಟ್ಟಿದ್ದಾರೆ. ಅಲ್ಲದೆ, ʼಅವತಾರ್ʼ ಮೇಕಿಂಗ್‌ಗೆ ರಾಕಿ ಮನಸೋತಿದ್ದಾರೆ. ಅವತಾರ್ ಸ್ಟಂಟ್ ಮಾಸ್ಟರ್ ಜೊತೆ ಕೂಡ ಕಾಣಿಸಿಕೊಂಡಿದ್ದು, ಇಂಡಿಯನ್‌ ಸಿನಿ ಇಂಡಸ್ಟ್ರಿಯಲ್ಲಿ ಹೊಸ ಚರ್ಚೆ ಶುರುವಾಗಿದ್ದು, ರಾಕಿಭಾಯ್ ಮುಂದಿನ ಚಿತ್ರ ಪ್ಯಾನ್‌ ಇಂಡಿಯಾನ ಅಲ್ಲ ಪ್ಯಾನ್ ವರ್ಲ್ಡ್ ಎಂದು ಹೇಳಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ರಾಕಿಂಗ್ ಸ್ಟಾರ್‌ನ ಮುಂದಿನ ಸಿನಿಮಾಗೆ ಹಣ ಹಾಕಲಿದೆ, ಸುಮಾರು 400 ಕೋಟಿ ಬಜೆಟ್‌ನಲ್ಲಿ ಈ ಅದ್ದೂರಿ ಸಿನಿಮಾ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News