Ashwini Puneet Rajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಧರಿಸಿರುವ ಈ ವಾಚ್ ಯಾವುದು? ಅದರ ಬೆಲೆ ಎಷ್ಟು ಗೊತ್ತಾ?

Ashwini Puneet Rajkumar: ಅಪ್ಪು ನಡೆಸುತ್ತಿದ್ದ ಕಾರ್ಯಗಳ ಮುಂದಾಳತ್ವವನ್ನು ಇದೀಗ ಅಶ್ವಿನಿ ಅವರು ವಹಿಸಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಗಳಿಂದ ಹಿಡಿದು ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ ಮಾಡುವ ತನಕ ಪುನೀತ್ ರಾಜ್ ಕುಮಾರ್ ಅವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದರು. ಇದೀಗ ಆ ಎಲ್ಲಾ ಕಾರ್ಯಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸುತ್ತಿದ್ದಾರೆ.

Written by - Bhavishya Shetty | Last Updated : Nov 17, 2022, 04:47 PM IST
    • ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೆಚ್ಚಾಗಿ ಮನೆಯಿಂದ ಹೊರ ಬರುತ್ತಿರಲಿಲ್ಲ
    • ಅಪ್ಪು ಅಗಲಿಕೆಯ ನಂತರ ಅಶ್ಬಿನಿಯವರೇ ಗಟ್ಟಿಗಿತ್ತಿಯಂತೆ ನಿಂತು ಕೆಲಸಗಳನ್ನು ನಡೆಸುತ್ತಿದ್ದಾರೆ
    • ಅಶ್ವಿನಿ ಅವರ ಕೈಯಲ್ಲಿರುವ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ
Ashwini Puneet Rajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಧರಿಸಿರುವ ಈ ವಾಚ್ ಯಾವುದು? ಅದರ ಬೆಲೆ ಎಷ್ಟು ಗೊತ್ತಾ? title=
Ashwini Puneeth Rajkumar

Ashwini Puneet Rajkumar: ದಿವಂಗತ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ವರುಷಗಳೇ ಕಳೆದಿದೆ. ಆದರೆ ಅವರು ಬದುಕಿದ್ದಾಗ ಮಾಡಿರುವ ಸಾಧನೆಗಳು ಇಂದಿಗೂ ಅವರನ್ನು ಅಭಿಮಾನಿಗಳ ಮನದಲ್ಲಿ ಬದುಕುಳಿಯುವಂತೆ ಮಾಡಿದೆ. ಒಬ್ಬ ಜವಾಬ್ದಾರಿಯುತ ನಟನಾಗಿ ಕನ್ನಡ ಚಿತ್ರರಂಗವನ್ನಾಳಿದ ಪುನೀತ್ ಸ್ಥಾನವನ್ನು ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತುಂಬುತ್ತಿದ್ದಾರೆ.

ಇದನ್ನೂ ಓದಿ: Rashmika Mandanna : ಮಗನನ್ನು ಮದುವೆಯಾಗುವಂತೆ ರಶ್ಮಿಕಾಗೆ ಆಫರ್ ನೀಡಿದ್ರಾ ರವಿಚಂದ್ರನ್‌..!

ಅಪ್ಪು ನಡೆಸುತ್ತಿದ್ದ ಕಾರ್ಯಗಳ ಮುಂದಾಳತ್ವವನ್ನು ಇದೀಗ ಅಶ್ವಿನಿ ಅವರು ವಹಿಸಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಗಳಿಂದ ಹಿಡಿದು ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ ಮಾಡುವ ತನಕ ಪುನೀತ್ ರಾಜ್ ಕುಮಾರ್ ಅವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದರು. ಇದೀಗ ಆ ಎಲ್ಲಾ ಕಾರ್ಯಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸುತ್ತಿದ್ದಾರೆ.

ಅಪ್ಪು ಇದ್ದಾಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೆಚ್ಚಾಗಿ ಮನೆಯಿಂದ ಹೊರ ಬರುತ್ತಿರಲಿಲ್ಲ. ಆಗ ಎಲ್ಲಾ ಕೆಲಸಗಳನ್ನು ಅಪ್ಪು ನೋಡಿಕೊಳ್ಳುತ್ತಿದ್ದರು. ಆದರೆ ಅವರ ಅಗಲಿಕೆಯ ನಂತರ ಅಶ್ಬಿನಿಯವರೇ ಗಟ್ಟಿಗಿತ್ತಿಯಂತೆ ನಿಂತು ಪತಿ ಬಿಟ್ಟು ಹೋದ ಕೆಲಸಗಳನ್ನು ನಡೆಸುತ್ತಿದ್ದಾರೆ. ಸದ್ಯ ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕೈಯಲ್ಲಿರುವ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Janhvi Kapoor : ಜಾನ್ವಿಗೆ ಬಾತ್ ರೂಂ ಲಾಕ್‌ ಮಾಡಲು ಬಿಡುತ್ತಿರಲಿಲ್ಲವಂತೆ ತಾಯಿ ಶ್ರೀದೇವಿ.!

ಇದು ಬ್ರ್ಯಾಂಡೆಡ್ ವಾಚ್ ಗಳಲ್ಲಿ ಒಂದಾದ ರೋಲೆಕ್ಸ್ ವಾಚ್. ಇದರ ನಿಜವಾದ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ. ಅಪರೂಪಕ್ಕೊಮ್ಮೆ ಈ  ವಾಚ್ ಧರಿಸುವ ಅಶ್ವಿನಿ ಅವರು ಮಾಮೂಲಿ ದಿನಗಳಲ್ಲಿ ಬಹಳಷ್ಟು ಸರಳತೆಯಿಂದ ಇರುತ್ತಾರೆ. ಅಪ್ಪು ಜನರ ಜೊತೆ ಬೆರೆಯುವಂತೆ ಅಶ್ವಿನಿಯವರು ಕೂಡ ಜನರ ಜೊತೆ ಹೆಚ್ಚಾಗಿ ಒಡನಾಟ ಬೆಳೆಸಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News