ಹ್ಯಾಟ್ರಿಕ್ ಹೀರೋ ಶಿವಣ್ಣ, ಕಮಲ್ ಹಾಸನ್ ಮತ್ತು ಚಿರಂಜೀವಿ ಎನರ್ಜಿ ಸೀಕ್ರೆಟ್ ಏನು?

ಸ್ಯಾಂಡಲ್‌ವುಡ್ ಎವರ್‌ಗ್ರೀನ್ ನಟ ಅಂದ್ರೆ ಯಾರು? ಬ್ಯುಸಿಯೇಸ್ಟ್ ನಟ ಅಂದ್ರೆ ಯಾರು? ಮೋಸ್ಟ್ ಎನರ್ಜಿಕ್ ನಟ ಅಂದ್ರೆ ಯಾರು? ಹೀಗೆ ಹತ್ತಾರು ಪ್ರಶ್ನೆ ಕೇಳಿದ್ರೂ ಅಲ್ಲಿ ಸಿಗುವ ಒಂದೇ ಒಂದು ಉತ್ತರ ಅದು ಶಿವಣ್ಣ. ಶಿವಣ್ಣನ ವಯಸ್ಸು 60. ಬಟ್ ಸಿನಿಮಾದಲ್ಲಿ ಅವ್ರಿನ್ನು ಸ್ಟಿಲ್ ಥರ್ಟಿ ಅಷ್ಟೇ. ಆ ಮಟ್ಟಿಗೆ ಆಕ್ಟೀವ್ ಇರೋ ಏಕೈಕ ನಟ. ಸೂಪರ್‌ಸ್ಟಾರ್‌ಗಳು ವರ್ಷಕ್ಕೆ ಒಂದು ಸಿನಿಮಾ ಮಾಡೋದೆ ಕಷ್ಟ.

Written by - YASHODHA POOJARI | Last Updated : Feb 4, 2023, 09:29 AM IST
  • ಹ್ಯಾಟ್ರಿಕ್ ಹೀರೋ ಶಿವಣ್ಣ, ಕಮಲ್ ಹಾಸನ್, ಚಿರಂಜೀವಿ ಎನರ್ಜಿ ಸೀಕ್ರೆಟ್ ಏನು?
  • ಸೂಪರ್ ಸೀನಿಯರ್‌ಗಳು ಮಯಸ್ಸು ಮಾಗ್ತಿದ್ರು ಯಣಗ್‌ ಆಗಿ ಕಾಣೋದು ಹೇಗೆ?
ಹ್ಯಾಟ್ರಿಕ್ ಹೀರೋ ಶಿವಣ್ಣ, ಕಮಲ್ ಹಾಸನ್ ಮತ್ತು ಚಿರಂಜೀವಿ ಎನರ್ಜಿ ಸೀಕ್ರೆಟ್ ಏನು? title=
ShivaRajkumar, Kamal Haasan, Chiranjeevi,

ಸ್ಯಾಂಡಲ್‌ವುಡ್ ಎವರ್‌ಗ್ರೀನ್ ನಟ ಅಂದ್ರೆ ಯಾರು? ಬ್ಯುಸಿಯೇಸ್ಟ್ ನಟ ಅಂದ್ರೆ ಯಾರು? ಮೋಸ್ಟ್ ಎನರ್ಜಿಕ್ ನಟ ಅಂದ್ರೆ ಯಾರು? ಹೀಗೆ ಹತ್ತಾರು ಪ್ರಶ್ನೆ ಕೇಳಿದ್ರೂ ಅಲ್ಲಿ ಸಿಗುವ ಒಂದೇ ಒಂದು ಉತ್ತರ ಅದು ಶಿವಣ್ಣ. ಶಿವಣ್ಣನ ವಯಸ್ಸು 60. ಬಟ್ ಸಿನಿಮಾದಲ್ಲಿ ಅವ್ರಿನ್ನು ಸ್ಟಿಲ್ ಥರ್ಟಿ ಅಷ್ಟೇ. ಆ ಮಟ್ಟಿಗೆ ಆಕ್ಟೀವ್ ಇರೋ ಏಕೈಕ ನಟ. ಸೂಪರ್‌ಸ್ಟಾರ್‌ಗಳು ವರ್ಷಕ್ಕೆ ಒಂದು ಸಿನಿಮಾ ಮಾಡೋದೆ ಕಷ್ಟ. ಅಂತದ್ರಲ್ಲಿ ಶಿವಣ್ಣನ ವರ್ಷಕ್ಕೆ ಕಮ್ಮಿಯಂದ್ರು ನಾಲ್ಕು ಚಿತ್ರಗಳು ಬರ್ತಾವೆ.. ಅಷ್ಟೂ ಚಿತ್ರಗಳು ಸಕ್ಸಸ್ ಕಾಣ್ತಾವೆ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ವೇಧ.. ಕಳೆದ ವರ್ಷ ಎಂಡ್‌ನಲ್ಲಿ ರಿಲೀಸ್ ಆದ ವೇದ ಇಂದಿಗೂ ಅದ್ದೂರಿ ಪ್ರದರ್ಶನ ಕಾಣ್ತಿದೆ.. ಸದ್ಯದಲ್ಲೇ 50 ಡೇಸ್ ಸೆಲೆಬ್ರೇಷನ್ ಮಾಡೋ ಪ್ಲ್ಯಾನ್‌ನಲ್ಲಿದೆ ಚಿತ್ರತಂಡ.. ಈ ವರ್ಷ ಕೂಡ ಮೂರು ಚಿತ್ರಗಳು ರಿಲೀಸ್ ಆಗೋದ್ರಲ್ಲಿ ಮಿಸ್ಸೇ ಇಲ್ಲಾ..ಸೋ ಶಿವಣ್ಣನಿಗೆ ನಮ್ಮ ಕಡೆಯಿಂದಲೂ ಹಾಟ್ಸ್ ಆಫ್.

ಇದನ್ನೂ ಓದಿ : Thalapathy 67 : ದಳಪತಿ ವಿಜಯ್ 67ನೇ ಸಿನಿಮಾದ ಟೈಟಲ್‌ ರಿವೀಲ್‌..! ʼಲಿಯೋʼ ಬ್ಲಡಿ ಸ್ವೀಟ್ 

ಇನ್ನು  ಕಮಲ್ ಹಸನ್ ಕಥೆ ಕೂಡ ಬೇರಿಲ್ಲಾ.. ವಯಸ್ಸು 68 ಕಂಪ್ಲೀಟ್ ಆಗಿ ನಾಲ್ಕು ತಿಂಗಳಾಗಿದೆ.. ಬಟ್ ನಟನೆಗೆ ಮಾತ್ರ ವಯಸ್ಸಾಗಿಲ್ಲಾ,, ಅದಕ್ಕೆ ಬೆಸ್ಟ್ ಎಕ್ಸಾಂಪಲ್ ವಿಕ್ರಂ ಸಿನಿಮಾ.. ವಿಕ್ರಂ ಚಿತ್ರದ ಮೂಲಕ ಸೂಪರ್ ಗೆಲುವು ಕಂಡ್ರು. ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 4೦೦ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆಯಿತು.. ಅದರ ಹಿಂದೆನೆ ಮತ್ತಷ್ಟು ಚಿತ್ರಗಳಲ್ಲಿ ಕಮಲ್ ಹಾಸನ್ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಇಂಡಿಯನ್ 2 ಚಿತ್ರ ರಿಲೀಸ್ ಆಗಲಿದೆ.. ಆ ಚಿತ್ರ ಕೂಡ ಭರ್ಜರಿ ಗೆಲುವು ಕಾಣೋದ್ರಲ್ಲಿ ನೋ ಡೌಟ್ ಅಂತಿದೆ ಸಿನಿ ವಲಯ.

ಇದನ್ನೂ ಓದಿ : Unstoppable Pawan kalyan : ಬಿಗ್‌ ಸಿನಿಮಾ ರೇಂಜ್‌ಗೆ ಟಿವಿ ಶೋ ರಿಲೀಸ್‌... ಆಹಾ..! ಪವನ್‌.. ಬಾಪ್‌ ಕಾ ಬಾಪ್‌..

ಇನ್ನು ಟಾಲಿವುಡ್ ಬಗ್ಗೇ ಹೇಳೋದೆ ಬೇಕಿಲ್ಲಾ.. ಅಲ್ಲಿನ ಸೂಪರ್ ಸೀನಿಯರ್‌ಗಳ ಮುಂದೆ ಜ್ಯೂನಿಯರ್‌ಗಳೇ ಕಳೆಗುದಿಂದಿದ್ದಾರೆ.. ಮೇಗಾಸ್ಟಾರ್ ಚಿರಂಜೀವಿ, 60ರ ಅರಳೋ ಮರಳೋ ವಯಸ್ಸು ಕಳೆದು 7 ವರ್ಷಗಳೇ ಆಗೋಗಿದೆ.. ಅರ್ಥಾತ್ 67 ವರ್ಷ ಈಗ.. ಆದ್ರೆ ಅವರ ಸಿನಿಮಾ ಲಿಸ್ಟ್ ನೋಡಿದ್ರೆ ನೀವೇ ಶಾಕ್ ಆಗ್ತೀರಾ.. ಅಬ್ಬಾ ಕಮ್ಮಿ ಅಂದ್ರೂ 8ಚಿತ್ರಗಳು ಕ್ಯೂನಲ್ಲಿವೆ.. ಬಾಕ್ಸ್ ಆಫೀಸ್‌ನಲ್ಲಿ ಇಂದಿಗೂ ಮೇಗಾಸ್ಟಾರ್ ಚಿತ್ರಗಳದ್ದೇ ಮೇಲುಗೈ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ವಾಲ್ತೇರು ವೀರಯ್ಯ.. ಇದೇ ಸಂಕ್ರಾಂತಿಗೆ ರಿಲೀಸ್ ಆದ ಈ ಚಿತ್ರ ಜಸ್ಟ್ ಮೂರೇ ಮೂರು ದಿನದಲ್ಲಿ 1೦೦ ಕೋಟಿ ಕಲೆಕ್ಷನ್ ಮಾಡಿತ್ತು. ಆ ಮೂಲಕ ಮೆಗಾಸ್ಟಾರ್ ಗಲ್ಲಾಪೆಟ್ಟಿಗೆಯ ಗತ್ತೇನು ಅನ್ನೋದನ್ನ ತೋರಿಸಿತ್ತು.. ಇದೇ ವರ್ಷ ಚಿರಂಜೀವಿ ಮತ್ತೆರಡು ಚಿತ್ರಗಳು ರಿಲೀಸ್ ಆಗಲಿದ್ದು, ವರ್ಷದ ಎಂಡ್ ಒಳಗೆ ಕೇವಲ ಮೆಗಾಸ್ಟಾರ್ ಚಿತ್ರಗಳಿಂದ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಆಗೋದಂತು ಗ್ಯಾರೆಂಟಿ.

ಒಟ್ನಲ್ಲಿ ಸೂಪರ್ ಸೀನಿಯರ್‌ಗಳು ಮಯಸ್ಸು ಮಾಗ್ತಾ ಇದ್ರು, ಇವರ ಸಿನಿಮಾಗಳು ಮಾತ್ರ ಯಾವ ಜ್ಯೂನಿಯರ್ ಸ್ಟಾರ್‌ಗಳು ಕಮ್ಮಿ ಇಲ್ಲದಂತಿವೆ.. ಇಂದಿಗೂ ಅಭಿಮಾನಿಗಳನ್ನ ಅದೇ ಲೆವೆಲ್‌ನಲ್ಲಿ ರಂಜಿಸ್ತಿವೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News