ಆ ನಟಿಯರೆಲ್ಲ ದುರಹಂಕಾರಿಗಳು.. ಆದರೆ ಸೌಂದರ್ಯ ಮತ್ತು ತ್ರಿಷಾ ಹಾಗಲ್ಲ..! ರಂಬಾ ಶಾಕಿಂಗ್‌ ಹೇಳಿಕೆ

Actress Rambha : 90ರ ದಶಕದಲ್ಲಿ ಖ್ಯಾತಿ ಗಳಿಸಿದ್ದ ರಂಬಾ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ನಟಿಯರ ಬಗ್ಗೆ ಮತ್ತು ಇತರ ನಟಿಯರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಕೆಲವು ನಟಿಯರು ತಮ್ಮನ್ನು ಕಂಡರೆ ನಿರ್ಲಕ್ಷಿಸುತ್ತಾರೆ ಅಂತ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ... ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

Written by - Krishna N K | Last Updated : Jun 29, 2024, 01:20 PM IST
    • 90ರ ದಶಕದಲ್ಲಿ ಖ್ಯಾತಿ ಗಳಿಸಿದ ನಟಿಯರಲ್ಲಿ ರಂಬಾ ಕೂಡ ಒಬ್ಬರು.
    • ನಟಿ ರಂಬಾ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
    • ನಟಿ ರಂಬಾ ಇತ್ತೀಚಿನ ಸಂದರ್ಶನವೊಂದರಲ್ಲಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ.
ಆ ನಟಿಯರೆಲ್ಲ ದುರಹಂಕಾರಿಗಳು.. ಆದರೆ ಸೌಂದರ್ಯ ಮತ್ತು ತ್ರಿಷಾ ಹಾಗಲ್ಲ..! ರಂಬಾ ಶಾಕಿಂಗ್‌ ಹೇಳಿಕೆ title=
Rambha

Rambha on Nayanthara and Trisha : 90ರ ದಶಕದಲ್ಲಿ ಖ್ಯಾತಿ ಗಳಿಸಿದ ನಟಿಯರಲ್ಲಿ ರಂಬಾ ಕೂಡ ಒಬ್ಬರು. ರಂಬಾ 90 ರ ದಶಕದ ಮಕ್ಕಳ ನೆಚ್ಚಿನ ನಟಿಯರಲ್ಲಿ ಒಬ್ಬರು ಮತ್ತು ಕನ್ನಡ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಹಿಂದಿ ಮತ್ತು ಭೋಜ್‌ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ರಂಬಾ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅವರು 1992 ರಲ್ಲಿ ಮಲಯಾಳಂ ಚಲನಚಿತ್ರ ʼಸರ್ಗಮ್ʼ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಆಗ ಅವರಿಗೆ ಕೇವಲ 15 ವರ್ಷ. ಮೊದಲ ಚಿತ್ರ ಹಿಟ್ ಆಗುತ್ತಿದ್ದಂತೆ ರಂಬಾಗೆ ಸಿನಿಮಾ ಅವಕಾಶಗಳು ಬರತೊಡಗಿದವು. ಅದೇ ವರ್ಷದಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಇದನ್ನೂ ಓದಿ:ವಾರಾಹಿ ದೀಕ್ಷೆʼಯಲ್ಲಿ ಪವನ್ ಕಲ್ಯಾಣ್..! ಈ ವ್ರತದ ಮಹತ್ವ.. ಮಾತೆ ʼವಾರಾಹಿ ದೇವಿʼ ಯಾರು ಗೊತ್ತೆ..?

1993 ರಲ್ಲಿ, ನವರಸ ನಾಯಕ ಜಗ್ಗೇಶ್‌ ನಟನೆಯ ಸರ್ವರ್‌ ಸೋಮಣ್ಣ ಸಿನಿಮಾದ ಮೂಲಕ ರಂಬಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  ಕೆಂಪಯ್ಯ ಐಪಿಎಸ್‌, ಓ ಪ್ರೇಮವೇ, ಪಾಂಜಾಲಿ, ಬಾವ ಬಾಮೈದ, ಸಾಹುಕಾರ, ಪಾಂಡು ರಂಗ ವಿಠಲ, ಗಂಡುಗಲಿ ಕುಮಾರ ರಾಮ, ಅನಾಥರು ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಂಬಾ ಕುತೂಹಲಕಾರಿ ವಿಷಯಗಳನ್ನು ಹೊರ ಹಾಕಿದ್ದಾರೆ.. ಆಗ ಚಿತ್ರರಂಗದಲ್ಲಿ ನಿಮ್ಮ ಗೆಳತಿ ಯಾರು ಎಂದು ಕೇಳಿದಕ್ಕೆ, ಉತ್ತರಿಸಿದ ನಟಿ, ಚಿತ್ರರಂಗದಲ್ಲಿ ನನ್ನ ನೆಚ್ಚಿನ ನಟಿ ಅಂದ್ರೆ ಸೌಂದರ್ಯ. ನನಗೆ ಅವರಂದ್ರೆ ತುಂಬಾ ಇಷ್ಟ. ಚಿತ್ರರಂಗದಲ್ಲಿ ತೀರಾ ಆತ್ಮೀಯ ಗೆಳೆತನ ಎಂಬುದೇನೂ ಇರಲ್ಲಲ್ಲ ಎಂದಿದ್ದಾರೆ..

ಇದನ್ನೂ ಓದಿ:ಖ್ಯಾತ ಸೀರಿಯಲ್‌ ನಟಿ, ಬಿಗ್ ಬಾಸ್ ಸ್ಪರ್ಧಿಗೆ ʼಸ್ತನ ಕ್ಯಾನ್ಸರ್‌.ʼ.! ಕಣ್ಣೀರಿಟ್ಟ ಅಭಿಮಾನಿಗಳು

ಈಗಿನ ಪೀಳಿಗೆಯಲ್ಲಿ ತಮ್ಮ ನೆಚ್ಚಿನ ನಟಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ರಂಬಾ, ನಯನತಾರಾ, ತ್ರಿಶಾ, ಇಲಿಯಾನಾ, ಕಾಜಲ್ ಹೀಗೆ ಸಾಕಷ್ಟು ನಟಿಯರಿದ್ದರೂ ನನಗೆ ತ್ರಿಷಾ ಎಂದರೆ ಹೆಚ್ಚು ಇಷ್ಟ. ನಾನು ಅವರನ್ನು ಒಂದೆರಡು ಬಾರಿ ಮಾತ್ರ ಭೇಟಿ ಮಾಡಿದ್ದೇನೆ ಎಂದರು. ಅಲ್ಲದೆ, ಭಾವುಕರಾಗಿ ಮಾತನಾಡಿದ ಅವರು, ಬೇರೆ ನಟಿಯರು ಹಾಗಲ್ಲ.. ನನ್ನನ್ನು ಕಂಡರೂ ನಿರ್ಲಕ್ಷಿಸುತ್ತಾರೆ ಎಂದು ಶಾಕಿಂಗ್‌ ವಿಚಾರ ಬಿಚ್ಚಿಟ್ಟರು.

ಸಧ್ಯ ರಂಭಾ ಕೆನಡಾದ ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ಅವರನ್ನು 2010 ರಲ್ಲಿ ವಿವಾಹವಾದರು. ಸಧ್ಯ ದಂಪತಿಗೆ 2 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ರಂಭಾ ಭಾಗವಹಿಸಿರುವುದು ಗಮನಾರ್ಹ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News