Urfi Javed : ಖ್ಯಾತ ಗೀತರಚನೆಕಾರ ʼಜಾವೇದ್‌ ಅಖ್ತರ್‌ ಉರ್ಫಿ ಅಜ್ಜʼ... ನೆಟ್ಟಿಗರು ಶಾಕ್‌..!

Urfi javed With Javed Akhtar : ಸೋಷಿಯಲ್‌ ಮೀಡಿಯಾ ಫೇಮ್‌, ಹಿಂದಿ ಬಿಗ್‌ ಬಾಸ್‌ ಸ್ಪರ್ಧಿ ಉರ್ಫಿ ಜಾವೇದ್ ಫ್ಯಾಷನ್ ಶೋಗಾಗಿ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಗೀತರಚನೆಕಾರ, ನಟ ಜಾವೇದ್ ಅಖ್ತರ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಸೇಲ್ಫಿ ಒಂದನ್ನು ಕ್ಲಿಕ್‌ಸಿಕೊಂಡಿದ್ದಾರೆ. ಆ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಉರ್ಫಿ ಅಖ್ತರ್‌ ಅವರನ್ನು ʼಎ ಲೆಜೆಂಡ್ʼ ಎಂದು ಕರೆದಿದ್ದಾರೆ. ಅಲ್ಲದೆ, ʼಕೊನೆಗೂ ನನ್ನ ಅಜ್ಜನನ್ನು ಭೇಟಿಯಾದೆʼ ಎಂದು ತಮಾಷೆ ಮಾಡಿದ್ದಾರೆ.

Written by - Krishna N K | Last Updated : Jan 8, 2023, 07:00 PM IST
  • ಉರ್ಫಿ ಜಾವೇದ್ ಫ್ಯಾಷನ್ ಶೋಗಾಗಿ ದೆಹಲಿಗೆ ತೆರಳಿದ್ದಾರೆ.
  • ಗೀತರಚನೆಕಾರ, ನಟ ಜಾವೇದ್ ಅಖ್ತರ್ ಅವರನ್ನು ಭೇಟಿಯಾಗಿದ್ದಾರೆ.
  • ಸೇಲ್ಫಿ ಒಂದನ್ನು ಕ್ಲಿಕ್‌ಸಿಕೊಂಡು ಕೊನೆಗೂ ನನ್ನ ಅಜ್ಜನನ್ನು ಭೇಟಿಯಾದೆʼ ಎಂದು ತಮಾಷೆ ಮಾಡಿದ್ದಾರೆ.
Urfi Javed : ಖ್ಯಾತ ಗೀತರಚನೆಕಾರ ʼಜಾವೇದ್‌ ಅಖ್ತರ್‌ ಉರ್ಫಿ ಅಜ್ಜʼ... ನೆಟ್ಟಿಗರು ಶಾಕ್‌..! title=

Urfi javed : ಸೋಷಿಯಲ್‌ ಮೀಡಿಯಾ ಫೇಮ್‌, ಹಿಂದಿ ಬಿಗ್‌ ಬಾಸ್‌ ಸ್ಪರ್ಧಿ ಉರ್ಫಿ ಜಾವೇದ್ ಫ್ಯಾಷನ್ ಶೋಗಾಗಿ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಗೀತರಚನೆಕಾರ, ನಟ ಜಾವೇದ್ ಅಖ್ತರ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಸೇಲ್ಫಿ ಒಂದನ್ನು ಕ್ಲಿಕ್‌ಸಿಕೊಂಡಿದ್ದಾರೆ. ಆ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಉರ್ಫಿ ಅಖ್ತರ್‌ ಅವರನ್ನು ʼಎ ಲೆಜೆಂಡ್ʼ ಎಂದು ಕರೆದಿದ್ದಾರೆ. ಅಲ್ಲದೆ, ʼಕೊನೆಗೂ ನನ್ನ ಅಜ್ಜನನ್ನು ಭೇಟಿಯಾದೆʼ ಎಂದು ತಮಾಷೆ ಮಾಡಿದ್ದಾರೆ.

ಇನ್‌ಸ್ಟಾ ಸ್ಟೇಟಸ್‌ ಫೋಟೋದಲ್ಲಿ ಉರ್ಫಿ ನೀಲಿ ಬಣ್ಣದ ಮೇಲಂಗಿಯನ್ನು ಧರಿಸಿದ್ದಾರೆ. ಜಾವೇದ್ ಕಪ್ಪು ಶಾಲು ಮತ್ತು ಬೂದು ಕುರ್ತಾವನ್ನು ಧರಿಸಿದ್ದಾರೆ. ಅಖ್ತರ್‌ ನಗುತ್ತಾ ಉರ್ಫಿ ಕ್ಯಾಮರಾಗೆ ಪೋಸ್‌ ಕೋಟ್ಟಿದ್ದಾರೆ. ʼಕೊನೆಗೂ ನನ್ನ ಅಜ್ಜನನ್ನು ಇಂದು ಭೇಟಿಯಾದೆ.. ಬೆಳಿಗ್ಗೆಯೇ ಅನೇಕ ಜನರು ಅವರ ಸೆಲ್ಫಿಗಾಗಿ ಸಾಲುಗಟ್ಟಿದರು, ಆದರೆ ಅವರು ಯಾರನ್ನೂ ನಿರಾಕರಿಸಲಿಲ್ಲ, ಎಲ್ಲರೊಂದಿಗೆ ನಗುಮೊಗದಿಂದ ಪೋಸ್‌ ನೀಡಿದ್ರು. ಅವರು ತುಂಬಾ ಕೂಲಾಗಿದ್ದರು. ನನಗೆ ಆಶ್ಚರ್ಯವಾಯ್ತು...! ಎಂದು ಲೈನ್ಸ್‌ ಬರೆದು ಉರ್ಫಿ ಗುಲಾಬಿ, ಸ್ಮೈಲ್‌ ಮತ್ತು ಹಾರ್ಟ್‌ ಎಮೋಜಿ ಹಾಕಿದ್ದರು.

ಇದನ್ನೂ ಓದಿ: DBoss Kranti : ʼಕ್ರಾಂತಿʼ ಸೆಂಟರ್‌ ಅಟ್ರ್ಯಾಕ್ಷನ್‌ ಆಯ್ತು ದರ್ಶನ್‌ ಬಾಡಿ ಲುಕ್‌..!

ಇತ್ತೀಚಿಗೆ ದೆಹಲಿ ಪ್ರವಾಸದ ಸಮಯದಲ್ಲಿದ್ದ ಉರ್ಫಿ ತನಗೆ ʼಬಟ್ಟೆ ಅಂದ್ರೆ ಅಲರ್ಜಿʼ ಎಂಬ ಹೇಳಿಕೆ ನೀಡಿದ್ದರು. ಅಲ್ಲದೆ, ಬಟ್ಟೆ ಧರಿಸಿದ್ರೆ ಹುಣ್ಣು ಏಳ್ತವೆ ಅಂತ ತಿಳಿಸಿದ್ದರು. ಅದಕ್ಕೆ ನೆಟ್ಟಿಗರು ಚಳಿಗಾಲದಲ್ಲಿಯೂ ಇದೇ ಸಮಸ್ಯೆ ಇದೆಯಾ ಅಂತ ಕಿಚಾಯಿಸಿದ್ದರು. ಈ ಕುರಿತು ಮತ್ತೊಂದು ವಿಡಿಯೋ ಹಂಚಿಕೊಂಡ ಉರ್ಫಿ, ʼಹಾಗಾದರೆ ನಾನು ಯಾಕೆ ಬಟ್ಟೆ ಧರಿಸುವುದಿಲ್ಲ ಅಂತ ಈಗ ನಿಮಗೆ ತಿಳಿದಿದೆ. ನಾನು ಬಟ್ಟೆ ಹಾಕಿದ್ರೆ ನನ್ನ ದೇಹವು ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ. ಅದಕ್ಕೆ ಪುರಾವೆ ಇದೆ, ಅದಕ್ಕಾಗಿಯೇ ನಾನು ಆಗಾಗ್ಗೆ ಬೆತ್ತಲೆಗುತ್ತೇನೆ. ನನ್ನ ದೇಹಕ್ಕೆ ಬಟ್ಟೆ ಅಲರ್ಜಿ ಎಂದು ಹೇಳಿದ್ದರು.

ಉರ್ಫಿ ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತಾರೆ. ಎಷ್ಟೇ ವಿವಾದಾತ್ಮಕ ಕಾಮೆಂಟ್ಸ್‌ ಬಂದ್ರೂ ಸಹ ಆಕೆ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ, ಮಹಾರಾಷ್ಟ್ರ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಅವರು ಉರ್ಫಿ ಡ್ರೆಸ್ಸಿಂಗ್ ಸೆನ್ಸ್ ಅಸಭ್ಯವಾಗಿದೆ ಮತ್ತು ಸಮಾಜಕ್ಕೆ ಇದು ಕೆಟ್ಟ ಸಂದೇಶ ನೀಡುತ್ತದೆ ಎಂದು ಆರೋಪಿಸಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಉರ್ಫಿಯ ಬಂಧನಕ್ಕೂ ಒತ್ತಾಯಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News