Alia Bhatt:ಆಲಿಯಾ ಭಟ್ ಅವರನ್ನು ಆಕರ್ಷಿಸುತ್ತದಂತೆ ಹುಡುಗರಲ್ಲಿನ ಈ ವಿಶೇಷ ಗುಣ!

Alia Bhatt:ಕಾರ್ಯಕ್ರಮದ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಕಪಿಲ್ ಶರ್ಮಾ ಆಲಿಯಾಗೆ ಪ್ರಶ್ನೆಯೊಂದನ್ನ ಕೇಳಿದ್ದಾರೆ.

Edited by - Zee Kannada News Desk | Last Updated : Jan 3, 2022, 10:12 AM IST
  • 'ದಿ ಕಪಿಲ್ ಶರ್ಮಾ ಶೋ' ಗೆ ಬಂದಿದ್ದ ಆಲಿಯಾ ಭಟ್
  • ಇದರಲ್ಲಿ ಕಪಿಲ್ ಶರ್ಮಾ ಆಲಿಯಾಗೆ ಪ್ರಶ್ನೆಯೊಂದನ್ನ ಕೇಳಿದ್ದಾರೆ
  • ಈ ಪ್ರಶ್ನೆ ಕೇಳಿ ಆಲಿಯಾ ಭಟ್ ನಗಲು ಆರಂಭಿಸುತ್ತಾರೆ
Alia Bhatt:ಆಲಿಯಾ ಭಟ್ ಅವರನ್ನು ಆಕರ್ಷಿಸುತ್ತದಂತೆ ಹುಡುಗರಲ್ಲಿನ ಈ ವಿಶೇಷ ಗುಣ! title=
ಆಲಿಯಾ ಭಟ್

ನವದೆಹಲಿ: ಬಾಲಿವುಡ್ ನಟಿ ಆಲಿಯಾ ಭಟ್ (Bollywood actress Alia Bhatt) ಇತ್ತೀಚಿನ ದಿನಗಳಲ್ಲಿ ತಮ್ಮ 'RRR' ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದಾರೆ. 

ಈ ಚಿತ್ರದ ಪ್ರಚಾರಕ್ಕಾಗಿ ಅವರು 'ದಿ ಕಪಿಲ್ ಶರ್ಮಾ ಶೋ' (The Kapil Sharma Show) ಗೆ ಬಂದಿದ್ದರು. ಈ ವೇಳೆ ನಟರಾದ ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಎಸ್‌ಎಸ್ ರಾಜಮೌಳಿ ಸಹ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 

ಕಾರ್ಯಕ್ರಮದ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಕಪಿಲ್ ಶರ್ಮಾ ಆಲಿಯಾಗೆ ಪ್ರಶ್ನೆಯೊಂದನ್ನ ಕೇಳಿದ್ದಾರೆ.

ಕಪಿಲ್ ಶರ್ಮಾ ಹೇಳುತ್ತಾರೆ, "ನಾವು ಕೇಳಿದಂತೆ ಆಲಿಯಾ ಅವರಿಗೆ ಮೊದಲು ಆಕರ್ಷಿಸುವ ಯಾವುದಾದರೂ  ಇದ್ದರೆ ಅದು ವಾಸನೆಯಂತೆ. ಹಾಗಾದರೆ ಒಬ್ಬ ಹುಡುಗ ನಿಮಗೆ ಪ್ರಪೋಸ್ ಮಾಡಿದರೆ, ಆಗ ನೀವು ಏನು ಹೇಳುತ್ತೀರಿ? ನಾನು ಯೋಚಿಸಿ ನಂತರ ನಿನಗೆ ಹೇಳುತ್ತೇನೆ ಎಂದೋ ಅಥವಾ ನಾನು ವಾಸನೆ ನೋಡಿ ಹೇಳುತ್ತೇನೆ ಎಂದೋ?"

 

 

ಈ ಪ್ರಶ್ನೆ ಕೇಳಿ ಆಲಿಯಾ ಭಟ್ ನಗಲು ಆರಂಭಿಸುತ್ತಾರೆ. ಅಲ್ಲದೇ, ಎಸ್‌ಎಸ್ ರಾಜಮೌಳಿ, ಜೂನಿಯರ್ ಎನ್‌ಟಿಆರ್ ಮತ್ತು ಅವರ ಪಕ್ಕದಲ್ಲಿ ಕುಳಿತ ರಾಮ್ ಚರಣ್ ಕೂಡ ನಗಲು ಪ್ರಾರಂಭಿಸುತ್ತಾರೆ.

ಇದಕ್ಕೂ ಮುನ್ನ ಕಾರ್ಯಕ್ರಮದ ಪ್ರೋಮೋವೊಂದು ಬಹಿರಂಗವಾಗಿದ್ದು, ಇದರಲ್ಲಿ ಕಪಿಲ್ ಆಲಿಯಾಗೆ 'RRR' ಗೆ ಸಹಿ ಹಾಕುವ ಮೊದಲು ಚಿತ್ರದ ಕಥೆಯನ್ನು ಕೇಳಿದ್ದೀರಾ ಅಥವಾ 'R' ಹೆಸರು ಕೇಳಿಯೇ ಸಹಿ ಹಾಕಿದ್ರಾ? ಎಂದು ಕೇಳುವುದನ್ನು ನೋಡಬಹುದು. ಇದನ್ನು ಕೇಳಿದ ಆಲಿಯಾ ನಾಚಿಕೆ ಪಡುತ್ತಾರೆ. 

 

 

ಇದನ್ನೂ ಓದಿ: Covid 3rd Wave: ‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ರಾಧೆ ಶ್ಯಾಮ್’ಗಿಲ್ಲ ಆತಂಕ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News