ಆ ಮಾಡೆಲ್ ನ ಜೊತೆಗಿನ ಬೋಲ್ಡ್ ಫೋಟೋ ಶೂಟ್ ನಿಂದಾಗಿಯೇ ಮಿರ್ಜಾ–ಮಲಿಕ್ ದಂಪತಿ ಡೈವರ್ಸ್?

ಪಾಕಿಸ್ತಾನದ ಸ್ಟಾರ್ ಕ್ರಿಕೆಟ ಆಟಗಾರ ಶೋಯೆಬ್ ಮಲಿಕ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಅವರಿಗೆ ಇಜಾನ್ ಮಿರ್ಜಾ ಮಲಿಕ್ ಎಂಬ ಗಂಡು ಮಗು ಕೂಡ ಇದೆ. ಆದರೆ ಈಗ ಇತ್ತೀಚಿನ ವದಂತಿ ಪ್ರಕಾರ ಇಬ್ಬರು ವಿಚ್ಚೇದನ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

Written by - Zee Kannada News Desk | Last Updated : Nov 11, 2022, 01:37 AM IST
  • ಅದಕ್ಕೆ ಅವರು ಸ್ಪಷ್ಟ ಉತ್ತರವನ್ನು ನೀಡಲಿಲ್ಲ.
  • ಆದಾಗ್ಯೂ, ಸಾನಿಯಾ ಈಗ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ಮೌನವಾಗಿರುವುದರಿಂದ ಇದಕ್ಕೆ ಯಾವುದೇ ದೃಢೀಕರಣವಿಲ್ಲ.
  • ಸಾನಿಯಾ ಮತ್ತು ಮಲಿಕ್ ಇಬ್ಬರೂ ಈಗ ಈ ವಿಷಯದ ಬಗ್ಗೆ ಮಾತನಾಡಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ.
ಆ ಮಾಡೆಲ್ ನ ಜೊತೆಗಿನ ಬೋಲ್ಡ್ ಫೋಟೋ ಶೂಟ್ ನಿಂದಾಗಿಯೇ ಮಿರ್ಜಾ–ಮಲಿಕ್ ದಂಪತಿ ಡೈವರ್ಸ್? title=

ಮುಂಬೈ: ಪಾಕಿಸ್ತಾನದ ಸ್ಟಾರ್ ಕ್ರಿಕೆಟ ಆಟಗಾರ ಶೋಯೆಬ್ ಮಲಿಕ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಅವರಿಗೆ ಇಜಾನ್ ಮಿರ್ಜಾ ಮಲಿಕ್ ಎಂಬ ಗಂಡು ಮಗು ಕೂಡ ಇದೆ. ಆದರೆ ಈಗ ಇತ್ತೀಚಿನ ವದಂತಿ ಪ್ರಕಾರ ಇಬ್ಬರು ವಿಚ್ಚೇದನ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹೌದು, ಈ ಇಬ್ಬರು ದಂಪತಿಗಳು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ ಉಳಿದಿದೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ದಶಕಗಳಿಗೂ ಹೆಚ್ಚು ಕಾಲ ಅನುನ್ಯವಾಗಿದ್ದ ಈ ಜೋಡಿ  ನಡುವೆ ಏಕಾಏಕಿ  ಬಿರುಗಾಳಿ ಏಳಲು ಕಾರಣವೇನು ಎನ್ನುವ ಪ್ರಶ್ನೆಗಳು ಕಾಡುತ್ತಿವೆ.

ಇದನ್ನೂ ಓದಿ: Virat Kohli: ಟಿ20ಯಲ್ಲಿ 4 ಸಾವಿರ ರನ್ ಗಳ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಕಿಂಗ್ ಕೊಹ್ಲಿ

ಆದರೆ ಕೆಲವು ಮಾಧ್ಯಮಗಳು ವರದಿ ಮಾಡಿರುವಂತೆ ಮಲಿಕ್ ಮತ್ತು ಮಿರ್ಜಾ ಅವರ ವಿಚ್ಚೆಧನಕ್ಕೆ ಪ್ರಮುಖ ಕಾರಣ ಪಾಕಿಸ್ತಾನದ ಮಾಡೆಲ್ ಆಯೇಶಾ ಒಮರ್ ಎಂದು ಉಲ್ಲೇಖಿಸಿವೆ.ಮಲಿಕ್ ಅವರೊಂದಿಗೆ ಇತ್ತೀಚಿಗೆ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದರು, ಅಷ್ಟೇ ಅಲ್ಲದೆ ಇಬ್ಬರು ಕೂಡ ಸಂಬಂಧವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಬೋಲ್ಡ್ ಫೋಟೋಶೂಟ್ ನಂತರ, ಪಾಕಿಸ್ತಾನಿ ಟಿವಿ ಚಾನೆಲ್‌ನಲ್ಲಿ ಮಲಿಕ್ ಅವರನ್ನು ಆ ಫೋಟೋಶೂಟ್‌ನಲ್ಲಿ ಅವರ ಪತ್ನಿ ಸಾನಿಯಾ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಲಾಯಿತು, ಅದಕ್ಕೆ ಅವರು ಸ್ಪಷ್ಟ  ಉತ್ತರವನ್ನು ನೀಡಲಿಲ್ಲ. ಆದಾಗ್ಯೂ, ಸಾನಿಯಾ ಈಗ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ಮೌನವಾಗಿರುವುದರಿಂದ ಇದಕ್ಕೆ ಯಾವುದೇ ದೃಢೀಕರಣವಿಲ್ಲ. ಸಾನಿಯಾ ಮತ್ತು ಮಲಿಕ್ ಇಬ್ಬರೂ ಈಗ ಈ ವಿಷಯದ ಬಗ್ಗೆ ಮಾತನಾಡಲು ಸೂಕ್ತ  ಸಮಯಕ್ಕಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: T20 World Cupನಲ್ಲಿ ಟೀಂ ಇಂಡಿಯಾದ ರನ್ ರೇಟ್ ಹೇಗಿದೆ ಗೊತ್ತಾ? ಅತೀ ಹೆಚ್ಚು ರನ್ ಗಳಿಸಿದವರ್ಯಾರು?

ಇತ್ತೀಚೆಗೆ ಮಲಿಕ್ ದುಬೈಗೆ ಭೇಟಿ ನೀಡಿ, ಅಲ್ಲಿ ಅವರು ಮತ್ತು ಪತ್ನಿ ಸಾನಿಯಾ ಒಟ್ಟಿಗೆ ಸಮಯವನ್ನು ಕಳೆದರು. ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಆ ಚಿತ್ರದಲ್ಲಿ ಸಾನಿಯಾ ಕೂಡ ಕಾಣಿಸಿಕೊಂಡಿದ್ದರು. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ತಿಳಿದುಕೊಳ್ಳಲು ನಾವು ಸ್ವಲ್ಪ ಕಾಯಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News