ತಾಯಿಗರ್ಭದಲ್ಲಿದ್ದಾಗಲೇ ಅಪ್ಪು-ನಾನು ಭೇಟಿಯಾಗಿದ್ದೇವು : ಯುವರತ್ನನನ್ನು ಸ್ಮರಿಸಿದ ನಟ ಸೂರ್ಯ..!

ನಾನು ಹಾಗೂ ನನ್ನ ಸಹೋದರ ಅಪ್ಪು 47 ವರ್ಷದ ಹಿಂದೆಯೇ ತಾಯಿಯ ಗರ್ಭದಲ್ಲಿದ್ದಾಗ ಭೇಟಿಯಾಗಿದ್ದೇವು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ, ತಮಿಳು ನಟ ಸೂರ್ಯ ಅವರು ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗೆ ಕಳೆದ ನೆನೆಪುಗಳನ್ನು ಸ್ಮರಿಸಿದರು.

Written by - Krishna N K | Last Updated : Oct 22, 2022, 12:55 PM IST
  • ನಾನು ಹಾಗೂ ನನ್ನ ಅಪ್ಪು 47 ವರ್ಷದ ಹಿಂದೆಯೇ ತಾಯಿಯ ಗರ್ಭದಲ್ಲಿದ್ದಾಗ ಭೇಟಿಯಾಗಿದ್ದೇವು
  • ಇಂದು ಇಲ್ಲಿ ಇಷ್ಟು ಜನ ಸಹೋದರ, ಸಹೋದರಿಯರು ಇದ್ದಾರೆ ಅಂದ್ರೆ ಅದಕ್ಕೆ ಅವರ ವ್ಯಕ್ತಿತ್ವ ಕಾರಣ
  • ಡಾ. ಪುನೀತ್‌ ರಾಜ್‌ಕುಮಾರ್‌ ಅವರ ನೆನೆಪುಗಳನ್ನು ಸ್ಮರಿಸಿದ ಖ್ಯಾತ ತಮಿಳು ನಟ ಸೂರ್ಯ
ತಾಯಿಗರ್ಭದಲ್ಲಿದ್ದಾಗಲೇ ಅಪ್ಪು-ನಾನು ಭೇಟಿಯಾಗಿದ್ದೇವು : ಯುವರತ್ನನನ್ನು ಸ್ಮರಿಸಿದ ನಟ ಸೂರ್ಯ..! title=

ಬೆಂಗಳೂರು : ನಾನು ಹಾಗೂ ನನ್ನ ಸಹೋದರ ಅಪ್ಪು 47 ವರ್ಷದ ಹಿಂದೆಯೇ ತಾಯಿಯ ಗರ್ಭದಲ್ಲಿದ್ದಾಗ ಭೇಟಿಯಾಗಿದ್ದೇವು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ, ತಮಿಳು ನಟ ಸೂರ್ಯ ಅವರು ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗೆ ಕಳೆದ ನೆನೆಪುಗಳನ್ನು ಸ್ಮರಿಸಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಗೆಳೆಯ ಅಪ್ಪು ಇಲ್ಲಿರುವ ಎಲ್ಲರನ್ನೂ ನೋಡುತ್ತಿದ್ದಾರೆ. ಅವರು ಎಲ್ಲೂ ಹೋಗಿಲ್ಲ ನಮ್ಮೆಲ್ಲ ಮಧ್ಯದಲ್ಲೇ ಇದ್ದಾರೆ. ಇಲ್ಲಿ ಸಂಚರಿಸುತ್ತಿರುವ ಗಾಳಿಯಲ್ಲಿ ನನಗೆ ಅವರ ಇರುವಿಕೆ ತಿಳಿಸುತ್ತಿದೆ. ಅಪ್ಪು ಕುರಿತು ಹೇಳಬೇಕು ಅಂದ್ರೆ ನಾನು 47 ವರ್ಷದ ಹಿಂದಕ್ಕೆ ಹೋಗಬೇಕಾಗುತ್ತೆ. ನಾವಿಬ್ಬರೂ ನಮ್ಮ ತಾಯಿಯರ ಗರ್ಭದಲ್ಲಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದೇವೆ. ಆಗಂತ ಅಮ್ಮ ಹೇಳಿದ್ದಾಳೆ. ಮೈಸೂರಿನ ಸುಚಾತ ಹೋಟಲ್‌ನಲ್ಲಿ ನಾವು ಇಬ್ಬರೂ ಭೇಟಿಯಾದೆವು. 

ಇದನ್ನೂ ಓದಿ: Puneetha Parva: ‘ಗಂಧದ ಗುಡಿ’ ಪಿಕ್ಚರ್ ಕೆಜಿಎಫ್ ರೆಕಾರ್ಡ್ ಧೂಳ್ ಮಾಡ್ಬೇಕು- ಯಶ್

ಅವರ ಕುರಿತು ಏನ್‌ ಹೇಳ್ಬೇಕು. ಅವರು ತುಂಬಾ ಹೃದಯವಂತವರು, ಆತ್ಮೀಯ, ಸಹೋದರ, ಸ್ನೇಹಿತ, ನನ್ನ ಜೊತೆ ಅಷ್ಟೇ ಅಲ್ಲದ ಅಭಿಮಾನಿಗಳ ಜೊತೆಗೂ ಅಷ್ಟೆ ಆತ್ಮೀಯರಾಗಿದ್ದರು. ತಾವು ಏನೇ ಪಡೆದರೂ ಅದನ್ನು ಸಮಾಜಕ್ಕಾಗಿ ಮೀಸಲಿಡುತ್ತಿದ್ದ ಹೃದಯವಂತ. ಪ್ರೀತಿ ವಿಶ್ವಾಸಕ್ಕೆ ಹೆಸರೇ ಅಪ್ಪು. ಅದೇ ಇಂದು ಇಲ್ಲಿ ಇಷ್ಟೋಂದು ಸಹೋದರ ಸಹೋದರಿಯರ ಇರುವಿಕೆಗೆ ಕಾರಣವಾಗಿದೆ. ಇಲ್ಲಿ ಇಷ್ಟು ಜನ ಇದ್ದಾರೆ ಅಂದ್ರೆ ಅದಕ್ಕೆ ಅವರ ವ್ಯಕ್ತಿತ್ವ ಕಾರಣ. ಈ ರೀತಿಯ ಪ್ರೀತಿ ಮುಂದೆ ಎಂದಿಗೂ ಯಾರಿಗಾದ್ರೂ ದೊರೆಯುತ್ತದೆ ಅಂತ ನನ್ನ ಕನಸ್ಸಿನಲ್ಲೂ ಮನಸ್ಸಿನಲ್ಲೂ ನೆನೆಸಲು ಆಗುವುದಿಲ್ಲ.

ಅಪ್ಪು ನಿಧನ ನಂತರ ಎರಡೂ ದಿನ ಅದ್ಮೇಲೆ ಕಂಠೀರವ ಸ್ಟುಡಿಯೋಗೆ ನಾನು ಹೋಗಿದ್ದೆ. ಅಲ್ಲಿ ನಾನು ಅಪ್ಪು ಸಮಾಧಿ ಮುಟ್ಟಿದಷ್ಟೇ ನನಗೆ ಗೊತ್ತು ಮುಂದೆ ಎನಾಯ್ತು ಅಂತಾನೇ ಗೊತ್ತಾಗಲಿಲ್ಲ.. ನಾನು ಅಳುತ್ತಲೇ ಇದ್ದೆ. ನನಗೆ ಆಗ ಎರಡೂ ಮಾತುಗಳು ನೆನಪಾದವು ಹೇಗೆ ನಾವು ಜೀವಿಸಬೇಕು..? ನಮ್ಮಿಂದ ಇನ್ನೊಬ್ಬರ ಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ ಎನ್ನುವುದನ್ನ ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದು ತಿಳಿಯಿತು. ಜೀವನವನ್ನು ಹೇಗೆ ನಡೆಸಬೇಕು ಎಂದು ನನ್ನ ಸಹೋದರ ಅಪ್ಪು ನೋಡಿದ ಮೇಲೆ ತಿಳಿಯಿತು ಎಂದರು. 

ಇದನ್ನೂ ಓದಿ: Puneeth Parva: ‘ಅಪ್ಪು’ ಹೋಗಿ 1 ವರ್ಷ ಆಯ್ತು.. ನೋವಿನಲ್ಲೇ ದಿನ ಕಳೆದ್ವಿ ಎಂದು ಶಿವಣ್ಣ ಭಾವುಕ

ಅಲ್ಲದೆ, ಅಪ್ಪು ಸಮಾಧಿ ದರ್ನಶನಕ್ಕೆ ಪ್ರತಿ ತಿಂಗಳೂ 50ಸಾವಿರಕ್ಕೂ ಹೆಚ್ಚು ಜನರು ಹೋಗ್ತಾರೆ ಅಂತ ಕೇಳಿದ್ದಿನಿ. ಅದ್ಭುತ ಈ ರೀತಿಯ ಒಂದು ಸ್ಥಾನ ಯಾರಿಗೂ ಮುಂದೆ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಅದೇ ರೀತಿ ಗಂಧದಗುಡಿ ಈಗಿನ ಯುವಕರಿಗೆ ನಮ್ಮ  ತಾಯಿ ನಾಡನ್ನು, ಕಾಡನ್ನು ಹೇಗೆ ಪ್ರೀತಿಸಬೇಕು ಎಂಬುವುದನ್ನು ಹೇಳಿಕೊಡುತ್ತದೆ. ಅದ್ಭುತ ದೃಶ್ಯಗಳು, ಮ್ಯೂಸಿಕ್‌. ಈ ಮೂಲಕ ಮತ್ತೇ ನನ್ನ ಸಹೋದರ ಸಮಾಜಕ್ಕೆ ಅದ್ಭುತ ಸಂದೇಶ ಕೊಡುತ್ತಿದ್ದಾರೆ. ಅಪ್ಪು ಎಲ್ಲಾ ಸ್ಟಾರ್‌ಗಿರಿ ಮೀರಿದವರು, ನಂಬರ್‌ ಅವರಿಗೆ ಬೇಕಿಲ್ಲ ಎಂದು ತಮಿಳು ನಟ ಸೂರ್ಯ ಅಪ್ಪುಅವರನ್ನು ಸ್ಮರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News