ʼಟಗರು ಪಲ್ಯʼ ಪ್ರಮೋಷನಲ್ ಸಾಂಗ್ ಔಟ್..! ಡಾಲಿ ಲಿರಿಕ್ಸ್... ಪ್ರೇಮ್ ವಾಯ್ಸ್ ಚಿಂದಿ ಗುರು

Nagabhushana-Amrutha Prem: ಟಗರು ಪಲ್ಯ ಸಿನಿಮಾ ʼಸಂಬಂಧ ಅನ್ನೋದು ದೊಡ್ದು ಕನಾʼ ಎಂಬ ಪ್ರಮೋಷನಲ್‌ ಹಾಡು ಡಾಲಿ ಪಿಕ್ಚರ್ಸ್ ನಲ್ಲಿ ಅನಾವರಣಗೊಂಡಿದೆ. ಸಂಬಂಧಗಳ ಮೌಲ್ಯ ತಿಳಿಸಿಕೊಡುವ ಹಾಡಿಗೆ ಧನಂಜಯ್ ಸಾಹಿತ್ಯ ಬರೆದಿದ್ದು, ಜೋಗಿ ಪ್ರೇಮ್ ಧ್ವನಿಯಾಗಿದ್ದಾರೆ.

Written by - Krishna N K | Last Updated : Oct 23, 2023, 08:44 PM IST
  • ಟಗರು ಪಲ್ಯ ಪ್ರಮೋಷನಲ್‌ ಸಾಂಗ್‌ ರಿಲೀಸ್‌
  • ʼಸಂಬಂಧ ಅನ್ನೋದು ದೊಡ್ದು ಕನಾʼ ಎಂಬ ಹಾಡು
  • ಡಾಲಿ ಪಿಕ್ಚರ್ಸ್ ನಲ್ಲಿ ಅನಾವರಣಗೊಂಡಿದೆ.
ʼಟಗರು ಪಲ್ಯʼ ಪ್ರಮೋಷನಲ್ ಸಾಂಗ್ ಔಟ್..! ಡಾಲಿ ಲಿರಿಕ್ಸ್... ಪ್ರೇಮ್ ವಾಯ್ಸ್ ಚಿಂದಿ ಗುರು title=

Tagaru palya movie : ಡಾಲಿ ಧನಂಜಯ್‌ ನಿರ್ಮಾಣದಲ್ಲಿ ತಯಾರಾಗಿರುವ ಗ್ರಾಮೀಣ ಸೊಗಡಿನ ಕಥೆ ಹೊಂದಿರುವ 'ಟಗರು ಪಲ್ಯ' ಸವಿಯೋದಿಕ್ಕೆ ದಿನಗಣನೆಯಷ್ಟೇ ಬಾಕಿ ಉಳಿದಿದೆ. ಇದೇ ಶುಕ್ರವಾರದಂದು ರಾಜ್ಯಾದ್ಯಂತ ಚಿತ್ರ ದಿಬ್ಬಣ ಹೊರಡಲಿದೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಟಗರು ಪಲ್ಯ ಸಿನಿಮಾ ಪ್ರಮೋಷನಲ್ ಹಾಡು ಬಿಡುಗಡೆಯಾಗಿದೆ. 

ಸಂಬಂಧ ಅನ್ನೋದು ದೊಡ್ದು ಕನಾ ಎಂಬ ಹಾಡು ಡಾಲಿ ಪಿಕ್ಚರ್ಸ್ ನಲ್ಲಿ ಅನಾವರಣಗೊಂಡಿದೆ. ಸಂಬಂಧಗಳ ಮೌಲ್ಯ ತಿಳಿಸಿಕೊಡುವ ಹಾಡಿಗೆ ಧನಂಜಯ್ ಸಾಹಿತ್ಯ ಬರೆದಿದ್ದು, ಜೋಗಿ ಪ್ರೇಮ್ ಧ್ವನಿಯಾಗಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಈ ಹಾಡಿನ ವಿಶೇಷ ಏನಂದರೇ ತೆರೆಹಿಂದೆ ಹಾಗೂ ತೆರೆಮೇಲೆ ಕಲಾವಿದರು, ತಂತ್ರಜ್ಞನರು ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: ನಟ ಧನುಷ್ ಮದುವೆಯಾಗ್ಬೇಕು ಅಂತ ತಲೆ ಕೆಡಿಸಿಕೊಂಡಿದ್ರಂತೆ ಈ ನಟಿ..! ಯಾರು ಗೊತ್ತಾ..?

ಟಗರು ಪಲ್ಯ ಚಿತ್ರವನ್ನು ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಅಡಿ ನಟ ಧನಂಜಯ್‌ ನಿರ್ಮಿಸಿದ್ದಾರೆ. ಉಮೇಶ್‌ ಕೃಪ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ತಂದೆ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾಯಿ ಪಾತ್ರದಲ್ಲಿ ತಾರಾ ಅನುರಾಧಾ ನಟಿಸಿದ್ದಾರೆ.‌

ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕನಾಗಿ ಅಭಿನಯಿಸಿದ್ದು, ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ ಪೂರ್ಣಚಂದ್ರ, ವೈಜನಾಥ್‌ ಬಿರಾದಾರ್‌, ಚಿತ್ರಾ ಶೆಣೈ, ಶ್ರೀನಾಥ್‌ ವಸಿಷ್ಠ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದು ಅವರೂ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Sai Pallavi: ಮೊದಲ ಸಿನಿಮಾಗೆ 10 ಲಕ್ಷ ಸಂಭಾವನೆ ಪಡೆದ ಸಾಯಿ ಪಲ್ಲವಿ ಈಗಿನ ಶುಲ್ಕ ಎಷ್ಟು?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಟಗರು ಪಲ್ಯ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾ ನೋಡುವುದಾಗಿಯೂ ತಿಳಿಸಿದ್ದಾರೆ‌. ಇದೇ 27ಕ್ಕೆ ಟಗರು ಪಲ್ಯ ಥಿಯೇಟರ್ ನಲ್ಲಿ ದರ್ಶನ ಕೊಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News