Swara Accused Shahrukh: 'ನನ್ನ ಜೀವನವನ್ನೇ ಹಾಳು ಮಾಡಿದ' ಶಾರುಕ್ ವಿರುದ್ಧ ಸ್ವರಾ ಭಾಸ್ಕರ್ ಗಂಭೀರ ಆರೋಪ!

Swara Accused Shahrukh: ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ವರಾ ಭಾಸ್ಕರ್, ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, 'ಶಾರುಕ್ ಖಾನ್ ನನ್ನ ಲವ್ ಲೈಫ್ ಆನ್ ಹಾಳು ಮಾಡಿದ್ದಾರೆ' ಎಂದು ಆರೋಪಿಸಿದ್ದಾಳೆ.  

Written by - Nitin Tabib | Last Updated : Sep 11, 2022, 10:58 AM IST
  • ಸ್ವರಾ ನಟನೆ ಮಾಡುವ ಚಿತ್ರಗಳಿಗಿಂತ ಅವಳು ನೀಡುವ ಹೇಳಿಕೆಗಳೇ ಭಾರಿ ಹೆಡ್ಲೈನ್ ಗಿಟ್ಟಿಸುತ್ತವೆ.
  • ಇದೀಗ ಮತ್ತೊಮ್ಮೆ ಗಂಭೀರ ಹೇಳಿಕೆ ನೀಡುವ ಮೂಲಕ ಸ್ವರಾ ಭಾರಿ ಚರ್ಚೆಗೆ ಗ್ರಾಸವಾಗಿದ್ದಾಳೆ.
Swara Accused Shahrukh: 'ನನ್ನ ಜೀವನವನ್ನೇ ಹಾಳು ಮಾಡಿದ' ಶಾರುಕ್ ವಿರುದ್ಧ ಸ್ವರಾ ಭಾಸ್ಕರ್ ಗಂಭೀರ ಆರೋಪ! title=
Swara Bhaskar Accused On Shahrukh Khan

Swara Bhasker Accused Shahrukh Khan: ಬಾಲಿವುಡ್ ನಲ್ಲಿ ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ತನಗೆ ಅನಿಸಿದ್ದನ್ನು ಹೇಳುವ ನಟಿಮಣಿಯರಲ್ಲಿ ಸ್ವರಾ ಭಾಸ್ಕರ್ ಕೂಡ ಒಬ್ಬಳು. ಯಾರು ಏನೆಂದುಕೊಳ್ಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ವರಾ ಮಾತುಗಳನ್ನು ಆಡುತ್ತಾಳೆ. ಸ್ವರಾ ನಟನೆ ಮಾಡುವ ಚಿತ್ರಗಳಿಗಿಂತ ಅವಳು ನೀಡುವ ಹೇಳಿಕೆಗಳೇ ಭಾರಿ ಹೆಡ್ಲೈನ್ ಗಿಟ್ಟಿಸುತ್ತವೆ. ಇದೀಗ ಮತ್ತೊಮ್ಮೆ ಗಂಭೀರ ಹೇಳಿಕೆ ನೀಡುವ ಮೂಲಕ ಸ್ವರಾ ಭಾರಿ ಚರ್ಚೆಗೆ ಗ್ರಾಸವಾಗಿದ್ದಾಳೆ. ಆದರೆ, ಈ ಬಾರಿ ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ಮೇಲೆ ಗಂಭೀರ ಆರೋಪ ಮಾಡಿರುವ ಸ್ವರಾ ಭಾಸ್ಕರ್ 'ನಟ ನನ್ನ ಲವ್ ಲೈಫ್ ಆನ್ ಹಾಳುಮಾಡಿದ್ದಾನೆ' ಎಂದು ಆರೋಪಿಸಿದ್ದಾಳೆ.

ಸ್ವರಾ ಮಾಡಿರುವ ಆರೋಪ ಏನು?
ಮಿಡ್‌ಡೇಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸ್ವರಾ ಭಾಸ್ಕರ್, 'ನನ್ನ ಪ್ರೇಮ ಜೀವನವನ್ನು ಹಾಳುಮಾಡಲು ನಾನು ಆದಿತ್ಯ ಚೋಪ್ರಾ ಸರ್ ಮತ್ತು ಶಾರುಖ್ ಖಾನ್ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ. ನಾನು ಚಿಕ್ಕವಯಸ್ಸಿನಲ್ಲಿ ಶಾರುಖ್ ಅವರ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರವನ್ನು ನೋಡಿದ್ದೇನೆ ಮತ್ತು ಅಂದಿನಿಂದ ನಾನು ಶಾರುಕ್ ನಂತೆಯೇ ಕಾಣುವ  ಆ 'ರಾಜ್' ಗಾಗಿ ಹುಡುಕಾಟ ನಡೆಸಿದೆ . ನಿಜ ಜೀವನದಲ್ಲಿ ಯಾವುದೇ ವ್ಯಕ್ತಿ 'ರಾಜ್' ನಂತೆ ಇರಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಹಲವು ವರ್ಷಗಳೇ ಬೇಕಾದವು. ಹೀಗಾಗಿ ಸಂಬಂಧಗಳಲ್ಲಿ ನಾನು ತುಂಬಾ ಒಳ್ಳೆಯವಳಾಗಿಲ್ಲ ಎಂಬುದು ನನಗೆ ಅನಿಸುವುದಿಲ್ಲ. ಒಂಟಿ ಜೀವನ ತುಂಬಾ ಕಷ್ಟದಿಂದ ಕೂಡಿರುತ್ತದೆ, ಆದರೆ, ಸಂಗಾತಿಯನ್ನು ಹುಡುಕುವುದು ಕಸವನ್ನು ಜಾಲಾಡಿದಂತಿದೆ' ಎಂದು ಸ್ವರಾ ಹೇಳಿದ್ದಾರೆ. 

ಇದನ್ನೂ ಓದಿ-ತೆರೆಮೇಲೆ ‘ಮತ್ತೆ ಮಾಯಾಮೃಗ’: ಸಿರಿ ಕನ್ನಡದಲ್ಲಿ ಬರಲಿದೆ ಟಿ.ಎನ್.ಸೀತಾರಾಮ್ ಧಾರಾವಾಹಿ

ಸ್ವರಾ ನಟನೆಯ ಚಿತ್ರಗಳು ಇಲ್ಲಿವೆ
ಸ್ವರಾ ಭಾಸ್ಕ್ ಶೀಘ್ರದಲ್ಲೇ 'ಜಹಾ ಚಾರ್ ಯಾರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ನಡೆದ ಚಿತ್ರದ ಪ್ರಚಾರದ ಸಂದರ್ಶನವೊಂದರಲ್ಲಿ ನಟಿ ಈ ಮಾತುಗಳನ್ನು ಹೇಳಿದ್ದಾರೆ. ಮತ್ತೊಂದೆಡೆ, 'ಜಹಾನ್ ಚಾರ್ ಯಾರ್' ಬಗ್ಗೆ ಹೇಳುವುದಾದರೆ, ಸ್ವರಾ ಜೊತೆಗೆ, ನಟಿಯರಾದ ಪೂಜಾ ಚೋಪ್ರಾ, ಶಿಖಾ ತಲ್ಸಾನಿಯಾ ಮತ್ತು ಮೆಹರ್ ವಿಜ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ವರು ಮಹಿಳಾ ಸ್ನೇಹಿತೆಯರ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ವುಮನ್ ಸೆಂಟ್ರಿಕ್ ಕಥಾ ಹಂದರ ಹೊಂದಿರುವ ಈ ಚಿತ್ರ ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ-Krishnam Raju: ಖ್ಯಾತ ನಟ ಮತ್ತು ನಿರ್ಮಾಪಕ ಕೃಷ್ಣಂ ರಾಜು ವಿಧಿವಶ

'ವೀರೆ ದಿ ವೆಡ್ಡಿಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದಲ್ಲದೇ ‘ಮಿಸೆಸ್ ಫಲಾನಿ’ ಚಿತ್ರದಲ್ಲಿ ಸ್ವರಾ ಭಾಸ್ಕರ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಸ್ವರಾ ಕೊನೆಯದಾಗಿ 2018 ರಲ್ಲಿ ತೆರೆಕಂಡ 'ವೀರೆ ದಿ ವೆಡ್ಡಿಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸ್ವರಾ ಜೊತೆಗೆ ನಟಿ ಕರೀನಾ ಕಪೂರ್, ಸೋನಂ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News