Shruti Haasan: ಶೃತಿಗೆ ʼAre You Virgin..ʼ? ಎಂದು ಕೇಳಿದ ಯವಕ..! ನಟಿ ಕೊಟ್ಟ ಉತ್ತರ ಸೂಪರ್‌

Shruti Haasan troll : ಇತ್ತೀಚೆಗೆ ನಟಿ ಶೃತಿ ಹಾಸನ್‌ ಅವರು ತಮ್ಮ ಅಭಿಮಾನಿಗಳಿಗಾಗಿ ಆಸ್ಕ್‌ ಮಿ ಸೆಶನ್ ನಡೆಸಿದರು. ನೆಟ್ಟಿಗರೊಬ್ಬರು ಆಕೆಯನ್ನು Are you Vergin ಎಂದು ನೇರವಾಗಿಯೇ ಪ್ರಶ್ನೆ ಕೇಳಿದರು. ಇದಕ್ಕೆ ಶ್ರುತಿ ನೀಡಿದ ಉತ್ತರ ಅವರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. 

Written by - Krishna N K | Last Updated : Mar 18, 2023, 06:09 PM IST
  • ಶೃತಿ ಹಾಸನ್‌ ಅವರು ತಮ್ಮ ಅಭಿಮಾನಿಗಳಿಗಾಗಿ ಆಸ್ಕ್‌ ಮಿ ಸೆಶನ್ ನಡೆಸಿದರು.
  • ನೆಟ್ಟಿಗರೊಬ್ಬರು ಆಕೆಯನ್ನು Are you Vergin ಎಂದು ನೇರವಾಗಿಯೇ ಪ್ರಶ್ನೆ ಕೇಳಿದರು.
  • ಇದಕ್ಕೆ ಶ್ರುತಿ ನೀಡಿದ ಉತ್ತರ ಅವರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.
Shruti Haasan: ಶೃತಿಗೆ ʼAre You Virgin..ʼ? ಎಂದು ಕೇಳಿದ ಯವಕ..! ನಟಿ ಕೊಟ್ಟ ಉತ್ತರ ಸೂಪರ್‌ title=

Shruti Haasan: ಸಿನಿಮಾ ಹೊರತಾಗಿಯೂ ಫಿಲ್ಮ್ ಸ್ಟಾರ್‌ಗಳು ಮತ್ತು ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ಸದಾ ಟಕ್‌ ಇರಲು ಬಯಸುತ್ತಿರುತ್ತಾರೆ. ಅದಕ್ಕಾಗಿಯೇ ಅವರು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪ್ಯಾನ್ಸ್‌ಗಳ ಜೊತೆ ಚಾಟಿಂಗ್‌ ಮಾಡುತ್ತಿರುತ್ತಾರೆ. ಇದರಿಂದಾಗಿ ಅವರು ಅನೇಕ ನೆಗಟಿವ್‌ ಮತ್ತು ಪಾಸಿಟಿವ್‌ ಕಾಮೆಂಟ್‌ಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಕೆಲವೊಮ್ಮೆ ಟ್ರೋಲ್‌ಗಳನ್ನು ಸಹ ಎದುರಿಸಬೇಕಾಗುತ್ತದೆ..

ಬಹು ಭಾಷಾ ನಟಿ ಶ್ರುತಿ ಹಾಸನ್‌ ಕೂಡಾ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಚಾಟ್‌ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಆಸ್ಕ್‌ಮಿ ಅಂತ ಲೈವ್ ಚಾಟ್‌ ಕೂಡ ನಡೆಸುತ್ತಾರೆ. ಇತ್ತೀಚೆಗೆ ಅವರು ತಮ್ಮ ಅಭಿಮಾನಿಗಳಿಗಾಗಿ ಆಸ್ಕ್‌ ಮಿ ಸೆಶನ್ ನಡೆಸಿದರು. ಅಲ್ಲಿ ಅವರು ತಮ್ಮ ಅಭಿಮಾನಿಗಳು ಕೇಳುವ ಪಶ್ನೆಗಳಿಗೆ ನೇರವಾಗಿ ಉತ್ತರಿಸಿದರು.

ಇದನ್ನೂ ಓದಿ: Rakhi Sawant : ʼಅಮ್ಮನ ಚಿಕಿತ್ಸೆಗೆ ದುಡ್ಡಿಲ್ಲʼ ಅಂತ ಅತ್ತಿದ್ದ ʼರಾಖಿ ಚಪ್ಪಲಿ ಬೆಲೆʼ ಎಷ್ಟು ಗೊತ್ತಾ..!

ಇದೇ ವೇಳೆ, ನೆಟ್ಟಿಗರೊಬ್ಬರು ಆಕೆಯನ್ನು Are you Vergin ಎಂದು ನೇರವಾಗಿಯೇ ಪ್ರಶ್ನೆ ಕೇಳಿದರು. ಇದಕ್ಕೆ ಶ್ರುತಿ ನೀಡಿದ ಉತ್ತರ ಅವರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ವ್ಯಕ್ತಿ ನೀವು ವರ್ಜಿನ್ ಇದ್ದೀರಾ..? ಎಂದು ಪ್ರಶ್ನೆ ಕೇಳಿದ ವ್ಯಕ್ತಿ 'ವರ್ಜೈನ್' ಎಂದು ಅಕ್ಷರಗಳನ್ನು ತಪ್ಪಾಗಿ ಬರೆದಿದ್ದ, ಇದನ್ನು ಗಮನಿಸಿದ ಶ್ರುತಿ ಕೂಲ್‌ ಆಗಿ ಮೊದಲು ಕಾಗುಣಿತ ಕಲಿ ಅಂತ ಟಾಂಗ್‌ ನೀಡಿದರು. ಇದು ಶೃತಿ ಪ್ಯಾನ್ಸ್‌ಗೆ ಸಖತ್‌ ಇಷ್ಟವಾಯಿತು.

ಇನ್ನು ಸಿನಿಮಾ ವಿಚಾರವಾಗಿ ಮಾತನಾಡುವುದಾದ್ರೆ, ಇತ್ತೀಚಿಗೆ ಶ್ರುತಿ ಹಾಸನ್ ನಟನೆಯ ಎರಡು ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. ಮೆಗಾಸ್ಟಾರ್‌ ಚಿರಂಜೀವಿ ನಟನೆಯ ವಾಲ್ಟೇರ್ ವೀರಯ್ಯ ಮತ್ತು ನಟಸಿಂಹ ಬಾಲಕೃಷ್ಣ ಅಭಿನಯನದ ವೀರ ಸಿಂಹ ರೆಡ್ಡಿ. ಸದ್ಯ ಅವರು ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಅವರ ಸಲಾರ್ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News