ʼಸಲಾರ್‌ʼ ಎದುರು ಗೆಲ್ಲಲು ʼವೈಷ್ಣೋದೇವಿʼ ಮೊರೆ ಹೋದ್ರಾ ಕಿಂಗ್‌ ಖಾನ್‌ ಶಾರುಖ್‌..!

Shah Rukh Khan : ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್ ಇಂದು ಬೆಳಗ್ಗೆ ತಮ್ಮ ಮ್ಯಾನೇಜರ್ ಮತ್ತು ಬಾಡಿ ಗಾರ್ಡ್‌ಗಳೊಂದಿಗೆ ಪವಿತ್ರ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

Written by - Krishna N K | Last Updated : Dec 12, 2023, 01:38 PM IST
  • ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಿಂಗ್‌ ಖಾನ್‌ ಶಾರುಖ್‌.
  • ಡಂಕಿ ಸಿನಿಮಾ ಯಶಸ್ಸಿಗಾಗಿ ಮಾತೆ ವೈಷ್ಣೋದೇವಿ ಮೊರೆ ಹೋದ ನಟ.
  • ವೈಷ್ಣೋದೇವಿ ದೇವಸ್ಥಾನಕ್ಕೆ ಶಾರುಖ್‌ ಭೇಟಿ ನೀಡಿದ ವಿಡಿಯೋ ವೈರಲ್‌.
ʼಸಲಾರ್‌ʼ ಎದುರು ಗೆಲ್ಲಲು ʼವೈಷ್ಣೋದೇವಿʼ ಮೊರೆ ಹೋದ್ರಾ ಕಿಂಗ್‌ ಖಾನ್‌ ಶಾರುಖ್‌..! title=

Dunki Movie : ನಟ ಶಾರುಖ್ ಖಾನ್ ಅವರು ಸುದೀರ್ಘ ಗ್ಯಾಪ್ ನಂತರ ಈ ವರ್ಷ ಪಠಾಣ್‌ ಮತ್ತು ಜವಾನ್‌ ಸಿನಿಮಾದ ಮೂಲಕ ಕಮ್‌ಬ್ಯಾಕ್‌ ಮಾಡಿದರು. ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಗಳಿಸಿರುವ ಕಿಂಗ್‌ ಇದೀಗ ಡಂಕಿ ಮೂಲಕ ಮತ್ತೆ ತೆರೆಗೆ ಬರಲು ರೆಡಿಯಾಗಿದ್ದಾರೆ. ಇದರ ಬೆನ್ನಲ್ಲೇ ಇಂದು ಶಾರುಖ್‌ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ದರ್ಶನ ಪಡೆದರು.

ಹೌದು.. ಈ ವರ್ಷದ ಜನವರಿಯಲ್ಲಿ ʼಪಠಾಣ್ʼ ಮತ್ತು ಸೆಪ್ಟೆಂಬರ್‌ನಲ್ಲಿ ʼಜವಾನ್ʼ ಸಿನಿಮಾದ ಮೂಲಕ ಬಾದ್‌ ಶಾ ಭರ್ಜರಿ ಯಶಸ್ಸು ಗಳಿಸಿದರು. ಈ ಎರಡೂ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದವು. ಈ ಚಿತ್ರಗಳ ಮೂಲಕ ಸೋಲಿನ ಸುಳಿಗೆ ಸಿಲುಕಿದ್ದ ಬಾಲಿವುಡ್‌ಗೆ ಶಾರುಖ್ ಟರ್ನ್‌ ನೀಡಿದ್ದರು.

ಇದನ್ನೂ ಓದಿ:ನಮ್ಮ ಲಚ್ಚಿಯ "ಸಂಗಮ್ " ವಿಜಯ್ ಸೂರ್ಯ ಪತ್ನಿ ಮತ್ತು ಮುದ್ದಾದ ಮಕ್ಕಳು ಇವರೇ ! ಪತ್ನಿ ಏನು ಮಾಡುತ್ತಿದ್ದಾರೆ ಗೊತ್ತಾ ?

ಸದ್ಯದಲ್ಲೇ ‘ಡಂಕಿ’ ಸಿನಿಮಾ ಬರಲಿದೆ. ಈ ಚಿತ್ರ ಡಿಸೆಂಬರ್ 21 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಶಾರುಖ್ ಈ ಚಿತ್ರದ ಮೂಲಕ ಹಿಟ್ ಗಳಿಸಿ ಹ್ಯಾಟ್ರಿಕ್ ಸಾಧಿಸಲು ನೋಡುತ್ತಿದ್ದಾರೆ. ಆದರೆ ಡಂಕಿ ಬಿಡುಗಡೆಯಾ ಒಂದು ದಿನದ ಅಂತರದಲ್ಲಿ ಪ್ರಭಾಸ್‌ ನಟನೆಯ ಸಲಾರ್‌ ರಿಲೀಸ್‌ ಆಗುತ್ತಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಇಬ್ಬರು ಸೂಪರ್‌ ಸ್ಟಾರ್‌ಗಳು ಮುಖಾಮುಖಿಯಾಗಲಿದ್ದಾರೆ. ಈ ಹಿನ್ನೆಲೆ ಜಮ್ಮುವಿನ ವೈಷ್ಣೋದೇವಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ಚಿತ್ರದ ಯಶಸ್ಸಿಗೆ ಪ್ರಾರ್ಥನೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಆದರೆ ಶಾರುಖ್ ಕಳೆದ ಎರಡು ಚಿತ್ರಗಳ ಬಿಡುಗಡೆಗೂ ಮುನ್ನ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪಠಾಣ್ ಸಿನಿಮಾ ಬಿಡುಗಡೆಗೂ ಮುನ್ನವೇ ಕಳೆದ ವರ್ಷ ಇದೇ ಡಿಸೆಂಬರ್ 12ರಂದು ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದರು. ಅದರ ನಂತರ, ಅವರು ಆಗಸ್ಟ್‌ನಲ್ಲಿ ಜವಾನ್ ಚಿತ್ರ ಬಿಡುಗಡೆಯಾಗುವ ಮೊದಲೇ ಈ ದೇವಾಲಯಕ್ಕೆ ಭೇಟಿ ನೀಡಿದರು. ಈ ಎರಡು ಚಿತ್ರಗಳು ಅದ್ಧೂರಿ ಯಶಸ್ಸು ಕಂಡಿದ್ದರಿಂದ ಇದೀಗ ಮತ್ತೆ ಡುಂಕಿ ಹಿಟ್ ಆಗಲು ಈ ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ತಮಿಳು ನಟ ಮನ್ಸೂರ್ ಅಲಿ ಖಾನ್‌ಗೆ ಛೀಮಾರಿ ಹಾಕಿದ ಮದ್ರಾಸ್‌ ಹೈಕೋರ್ಟ್:ಮಾನನಷ್ಟ ಮೊಕದ್ದಮೆ ಕೇಸ್‌ ವಜಾ!

ಜವಾನ್ ಬಿಡುಗಡೆಗೂ ಮುನ್ನ ಶಾರುಖ್ ತಿರುಮಲಕ್ಕೆ ತೆರಳಿ ದರ್ಶನ ಪಡೆದಿದ್ದರು. ಇದೀಗ ಡಂಕಿ ಸಿನಿಮಾ ರಿಲೀಸ್‌ ಬೆನ್ನಲ್ಲೆ ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗಿ ಪೂಜೆಗೆ ತೆರಳಿದ್ದಾರೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಶಾರುಖ್ ಅಭಿಮಾನಿಗಳು ಡಂಕಿ ಚಿತ್ರದ ರಿಲೀಸ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News