ಸಾಮಾಜಿಕ ಕಳಕಳಿಯ "ವಿಕಾಸ ಪರ್ವ"ಕ್ಕೆ ಸಾಥ್ ನೀಡಿದ ಪ್ರಣಯರಾಜ

ಸಾಮಾಜಿಕ ಕಳಕಳಿ ಹಿಂದಿರುವ ವಿಕಾಸ ಪರ್ವ ಚಿತ್ರ ಬಿಡುಗಡೆಯ ಅಂತದಲ್ಲಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. 

Written by - Ranjitha R K | Last Updated : Aug 9, 2024, 12:27 PM IST
  • ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೊತ್ತು ತರುತ್ತಿದೆ "ವಿಕಾಸ ಪರ್ವ
  • ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು.
  • ಪ್ರಣಯರಾಜ ಶ್ರೀನಾಥ್ "ವಿಕಾಸ ಪರ್ವ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.
ಸಾಮಾಜಿಕ ಕಳಕಳಿಯ "ವಿಕಾಸ ಪರ್ವ"ಕ್ಕೆ ಸಾಥ್ ನೀಡಿದ ಪ್ರಣಯರಾಜ title=

ಬೆಂಗಳೂರು : ಸಾಮಾಜಿಕ ಕಳಕಳಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೊತ್ತು ತರುತ್ತಿದೆ "ವಿಕಾಸ ಪರ್ವ".ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು.ಕನ್ನಡದ ಹಿರಿಯ ನಟ ಪ್ರಣಯರಾಜ ಶ್ರೀನಾಥ್ "ವಿಕಾಸ ಪರ್ವ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. 

"ವಿಕಾಸ ಪರ್ವ" ಉತ್ತಮ ಸಂದೇಶವಿರುವ ಚಿತ್ರ.ರೋಹಿತ್ ನಾಗೇಶ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.ಸ್ವಾತಿ,ನಿಶಿತಾ ಗೌಡ,ಅಶ್ವಿನ್ ಹಾಸನ್, ಬಿಲ್ವ, ಬಲ ರಾಜವಾಡಿ, ಕುರಿಬಾಂಡ್ ರಂಗ, ಅಭಯ್ ಸುವರ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸಿದ್ದಾರೆ.ಈಗಾಗಲೇ ಸೆನ್ಸಾರ್ ಕೂಡ ಮುಗಿದು ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ತಿಳಿಸಿದರು.

ಇದನ್ನೂ ಓದಿ : ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!

ವಿಶೃತ್ ನಾಯಕ್ ಅವರು ಒಳ್ಳೆಯ ಕಥೆ ಮಾಡಿದ್ದಾರೆ ಎಂದು ಮಾತನಾಡಿದ ನಟ ರೋಹಿತ್ ನಾಗೇಶ್, ಚಿತ್ರ ನೋಡುವವರಿಗೆ ಬೇಸರವಾಗಲ್ಲ. ನೋಡಿದ ಮೇಲೆ ಯಾರು ನಮಗೆ ಬಯ್ಯುವುದಿಲ್ಲ ಎನ್ನುವ ಭರವಸೆ ವ್ಯಕ್ತಪಡಿಸಿದರು. 

ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ನವೀನ್ ಸುವರ್ಣ ಹಾಗೂ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಎ ಪಿ ಓ ಮಾಹಿತಿ ನೀಡಿದರು.

ಇದನ್ನೂ ಓದಿ : ಮೂರು ಮಕ್ಕಳ ತಾಯಿಯಾದರೂ ಸಖತ್ ಗ್ಲಾಮರಸ್ !ಕಿರು ತೆರೆ ನಟನ ಮೋಹಕ್ಕೆ ಬಿದ್ದು 2ನೇ ಮದುವೆ! ಸ್ಟಾರ್ ನಟನ ಪುತ್ರಿ ಈಕೆ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News