ನವದೆಹಲಿ:ಖ್ಯಾತ ಬಾಲಿವುಡ್ ನಟಿ ಸಾರಾ ಅಲಿ ಖಾನ್ ತನ್ನ ಸಹೋದರ ಇಬ್ರಾಹಿಂ ಜನ್ಮದಿನದ ಅಂಗವಾಗಿ ಅವನಿಗೆ ಶುಭಾಷಯಗಳನ್ನು ಕೋರಿದ್ದಾರೆ. ಆದರೆ, ಬರ್ತ್ ಡೇ ವಿಶ್ ಹೇಳಲು ಸಾರಾ ಅನುಸರಿಸಿದ ರೀತಿ ಅವಳ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೌದು, ಎರಡು ದಿನಗಳ ಹಿಂದೆ ಸಾರಾ ತನ್ನ ಸಹೋದರನಿಗೆ ವಿಶ್ ಮಾಡಲು ತನ್ನ ಇನ್ಸ್ಟಗ್ರಾಮ್ ಖಾತೆಯಲ್ಲಿ ಆತನ ಜೊತೆಗಿದ್ದ ಫೋಟೋವೊಂದನ್ನು ಹಂಚಿಕೊಂಡಿದ್ದಾಳೆ. ಈ ಫೋಟೋದಲ್ಲಿ ಸಾರಾ ಸಹೋದರನ ಜೊತೆಗೆ ಫುಲ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಅವಳು ಹಂಚಿಕೊಂಡಿರುವ ಈ ಫೋಟೋ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಈ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ, ಸಾರಾ ಬಿಕಿನಿ ಧರಿಸಿದ್ದು ಅವಳ ಅಭಿಮಾನಿಗಳಿಗೆ ಇಷ್ಟವಾದರೂ ಕೂಡ ಆಕೆ ಬಿಕಿನಿ ಧರಿಸಿ ಸಹೋದರನ ಜೊತೆ ಕಾಣಿಸಿಕೊಂಡ ರೀತಿಗೆ ತಪರಾಕಿ ಹಾಕಿದ್ದಾರೆ.
ಈ ಫೋಟೋದಲ್ಲಿ BIKINI ಧರಿಸಿರುವ ಸಾರಾ ತನ್ನ ಸಹೋದರ ಇಬ್ರಾಹಿಂಗೆ ತುಂಬಾ ನಿಕಟವಾಗಿ ನಿಂತಿದ್ದಾಳೆ. ಈ ಕುರಿತು ಪ್ರತಿಕ್ರಿಯೆಗಳನ್ನು ನೀಡುತ್ತಿರುವ ನೆಟ್ಟಿಗರು, ಈ ಭಾವಚಿತ್ರದಲ್ಲಿ ಇಬ್ರಾಹಿಂ ಅವರ ಬಾಡಿ ಲ್ಯಾಂಗ್ವೇಜ್, ಮುಖದ ಹಾವ-ಭಾವ ಹಾಗೂ ಅವನು ಸಾರಾಳ ಸೊಂಟದ ಮೇಲೆ ಕೈ ಇಟ್ಟ ರೀತಿಯಿಂದ ಅವನು ಅಷ್ಟೊಂದು ಸಹಜವಾಗಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದಿದ್ದಾರೆ.
ಈ ಫೋಟೋಗೆ ಪ್ರತಿಕ್ರಿಯೆ ನೀಡಿರುವ ಬಳಕೆದಾರರೊಬ್ಬರು, "ಅವಳ ಸಹೋದರ ಅಷ್ಟೊಂದು ಸಹಜವಾಗಿಲ್ಲ.. ಅವನ ಕೈಗಳತ್ತ ನೋಡಿ.. ಇದು ಸರಿ ಅಲ್ಲ ಸಾರಾ.. ನಿನ್ನಿಂದ ಈ ಅಪೇಕ್ಷೆ ಇರಲಿಲ್ಲ" ಎಂದು ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಬಳಕೆದಾರ "ಖ್ಯಾತಿ ಹಾಗೂ ಹಣ ಜನರನ್ನು ಈ ರೀತಿ ತಲೆ ತಿರುಗಿಸುತ್ತದೆ ಎಂಬುದನ್ನು ತಾವು ಊಹಿಸಿಯೂ ಇರಲಿಲ್ಲ. ಮಕ್ಕಳಿಗೆ ಈ ಬಗ್ಗೆ ತಿಳುವಳಿಕೆ ಇಲ್ಲ ಎಂದರೆ ದೊಡ್ಡವರಾದರು ತಮ್ಮ ಮಕ್ಕಳಿಗೆ ಯಾವುದು ಸರಿ ಅಥವಾ ಯಾವುದು ತಪ್ಪು ಎಂಬುದನ್ನು ಹೇಳಿಕೊಡಬೇಕು" ಎಂದು ಬರೆದುಕೊಂಡಿದ್ದಾರೆ.