Slman Khan : ʼಜಾನ್‌ʼ ಅಂತ ಕರೆಯಬೇಕಾಗಿದ್ದವಳು ಈಗ ʼಭಾಯ್‌ʼ ಅಂತೀದಾಳೆ..! 

Slman Khan love life : ಬಾಲಿವುಡ್‌ ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ಪ್ರೀತಿಯ ಕುರಿತು ಮಾತನಾಡಿದ್ದು, ʼಭಾಯ್‌ʼ ತನ್ನ ಜೀವನದಲ್ಲಿ ಲವ್‌ ಎನ್ನುವುದ ದುರಾದೃಷ್ಟ ಎಂದು ಹೇಳಿದ್ದಾರೆ. ಅಲ್ಲದೆ, 'ಜಾನ್' ಎಂದು ಕರೆಯಬೇಕಾಗಿದ್ದವಳು ʼಭಾಯ್ʼ ಎಂದು ಕರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ಅವರ ಪ್ಯಾನ್ಸ್‌ಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ.

Written by - Krishna N K | Last Updated : Apr 28, 2023, 09:10 PM IST
  • ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ಪ್ರೀತಿಯ ಕುರಿತು ಮಾತನಾಡಿದ್ದಾರೆ.
  • ಭಾಯ್‌ʼ ತನ್ನ ಜೀವನದಲ್ಲಿ ಲವ್‌ ಎನ್ನುವುದ ದುರಾದೃಷ್ಟ ಎಂದು ಹೇಳಿದ್ದಾರೆ.
  • ಈ ಹೇಳಿಕೆ ಸಲ್ಲು ಅಭಿಮಾನಿಗಳಿಗೆ ಶಾಕ್‌ ನೀಡಿದೆ.
Slman Khan : ʼಜಾನ್‌ʼ ಅಂತ ಕರೆಯಬೇಕಾಗಿದ್ದವಳು ಈಗ ʼಭಾಯ್‌ʼ ಅಂತೀದಾಳೆ..!  title=

Slman Khan : ಬಾಲಿವುಡ್‌ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಯಾವಾಗ ಮದುವೆ ಆಗ್ತಾರೆ ಎನ್ನವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಸಲ್ಲು ಭಾಯ್‌ ಸಹ ಈ ಕುರಿತು ಎಲ್ಲೂ ತುಟಿ ಬಿಚ್ಚಿಲ್ಲ. ಅಲ್ಲದೆ, ಯಾರನ್ನಾದ್ರೂ ಲವ್‌ ಮಾಡ್ತೀದಿನಿ ಇಲ್ಲ ಡೇಟಿಂಗ್‌ನಲ್ಲಿದಿನಿ ಅಂದ್ರೆ ಅವರ ಪ್ಯಾನ್ಸ್‌ಗೆ ಸ್ವಲ್ಪ ಖುಷಿ ಆಗ್ಬಹುದು ಅನಿಸುತ್ತೆ ಆದ್ರೆ. ಭಾಯ್‌ ಮಾತ್ರ ತಮ್ಮ ಲೈಫ್‌ನಲ್ಲಿ ಪ್ರೀತಿ ಅನ್ನೋದು ದುರಾದೃಷ್ಟ ಅಂತ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.

ಹೌದು..  ರಜತ್ ಶರ್ಮಾ ಅವರು ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಆಪ್ ಕಿ ಅದಾಲತ್‌ನಲ್ಲಿ ಮೊದಲ ಬಾರಿಗೆ ಅತಿಥಿಯಾಗಿ ಸಲ್ಮಾನ್‌ ಖಾನ್‌ ಆಗಮಿಸಿದ್ದರು. ಈ ವೇಳೆ ಅವರಿಗೆ ತಮ್ಮ ಪ್ರೇಮ ಜೀವನದ ಬಗ್ಗೆ ಪ್ರಶ್ನೆ ಕೇಳಲಾಯಿತು. ಅಲ್ಲದೆ, ಅವರ ಜೀವನದಲ್ಲಿ ಎಷ್ಟು ಯುವತಿಯರು ಬಂದು ಹೋದರು, ಪ್ರಸ್ತುತ ಪರಿಸ್ಥಿತಿ ಏನು ಎಂಬುದರ ಕುರಿತು ಅವರು ಪ್ರಶ್ನಿಸಲಾಯಿತು. ಸಲ್ಮಾನ್ ಖಾನ್ ಸ್ವಲ್ಪ ಮುಜುಗರದಿಂದ, ನಾನು ಏನು ಮಾಡಬಲ್ಲೆ, ನನ್ನ ಜೀವನದಲ್ಲಿ ಪ್ರೀತಿ ಎಂಬುವುದು ದುರದೃಷ್ಟ... ಜಾನ್ ಎಂದು ಕರೆಯಲು ಬಯಸಿದವಳು ಈಗ ಭಾಯ್ ಎಂದು ಕರೆಯುತ್ತಾರೆ.. ಹಾಗಾಗಿ ನಾನೇನು ಮಾಡಲಿ ಅಂತ ಸಲ್ಲು ಉತ್ತರ ನೀಡಿದರು.

 

ಇದನ್ನೂ ಓದಿ: ಶಿವಣ್ಣ, ಉಪೇಂದ್ರ, ರಾಜ್‌ ಬಿ. ಶೆಟ್ಟಿ ಅಭಿನಯದ 45 ಚಿತ್ರ ಶೂಟಿಂಗ್‌ ಸ್ಟಾರ್ಟ್‌..!

ಇನ್ನು ಬಿ-ಟೌನ್ ನಟಿಯರೊಂದಿಗಿನ ಸಂಬಂಧ ಸುದ್ದಿಗಳಿಂದ ಸಲ್ಮಾನ್ ಖಾನ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಸಲ್ಲು ಬಾಯ್‌ ಮತ್ತು ಪೂಜಾ ಹೆಗ್ಡೆ ಡೇಟಿಂಗ್‌ ಮಾಡುತ್ತಿದ್ದು, ಮದುವೆ ಆಗ್ತಾರೆ ಅಂತ ಹೇಳಲಾಗುತ್ತಿತ್ತು. ಈ ಸುದ್ದಿ ಕೆಲವು ದಿನಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೆನ್ಸೇಷನ್‌ ಕ್ರಿಯೇಟ್‌ ಮಾಡಿತ್ತು. ಅದ್ರೆ. ಇದು ಸುಳ್ಳು ಅಂತ ಪೂಜಾ ಈ ಸುದ್ದಿಯನ್ನು ಅಲ್ಲಗಳೆದಿದ್ದರು.

ಈ ಮಧ್ಯ ಸಲ್ಮಾನ್ ಖಾನ್ ಒಂಟಿಯಾಗಿ ಸಂತೋಷವಾಗಿದ್ದಾರೆ. 57 ನೇ ವಯಸ್ಸಿನ ನಟ ಮದುವೆ ಬಗ್ಗೆ ಜಾಸ್ತಿ ತಲೆಕಡಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದ್ರೆ, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಸಲ್ಮಾನ್ ಖಾನ್ ಟೈಗರ್ 3 ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News