ಸಲಾರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಡ್ರಾಪ್! 5ನೇ ದಿನ ಸಿನಿಮಾ ಗಳಿಸಿದ್ದೇಷ್ಟು?

Salaar Box Office: ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅಭಿನಯದ ಸಲಾರ್‌ ಸಿನಿಮಾ ಮೊದಲ ನಾಲ್ಕು ದಿನ ಬಾಕ್ಸ್‌ ಆಫೀಸ್‌ನಲ್ಲಿ ಧೂಳ್‌ ಎಬ್ಬಿಸಿದರೇ, ಐದನೇ ದಿನ ಯಾಕೋ ಕಲೆಕ್ಷನ್‌ ಕಡಿಮೆಯಾಗಿದೆ. ಹಾಗಾದ್ರೆ ಸಲಾರ್‌ 5ನೇ ದಿನ ಗಳಿಸಿದೆಷ್ಟು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.

Written by - Zee Kannada News Desk | Last Updated : Dec 27, 2023, 02:58 PM IST
  • ಡಿಸೆಂಬರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕಿದ್ದರಿಂದ ಅದರ ಲಾಭವನ್ನು ಚೆನ್ನಾಗಿಯೇ ಬಳಸಿಕೊಂಡ ಚಿತ್ರತಂಡ, ನಿರಂತರ ನಾಲ್ಕು ದಿನಗಳ ರಜೆಯಲ್ಲಿ 'ಸಲಾರ್' ಅದ್ಭುತವಾಗಿಯೇ ಕಲೆಕ್ಷನ್ ಮಾಡಿತ್ತು.
  • ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಸೆಲೆಬ್ರೇಷನ್‌ ಕಲೆಕ್ಷನ್‌ನಲ್ಲಿ ಏರಿಕೆ ಆಗಬೇಕಿದ್ದು, ಆದರೆ, 5ನೇ ದಿನ ಕೇವಲ 23.13 ಕೋಟಿ ರೂಪಾಯಿ ಗಳಿಸುವಷ್ಟೇ ಸಾಧ್ಯವಾಗಿದೆ.
  • ಎಲ್ಲಾ ಸಿನಿಮಾಗಳು ವೀಕ್‌ ಡೇಸ್‌ನಲ್ಲಿ ಡ್ರಾಪ್ ಆಗುವಂತೆ, 5ನೇ ದಿನ 'ಸಲಾರ್' ಕಲೆಕಷನ್‌ ಸಹ ಕಡಿಮೆಯಾಗಿದ್ದು, ವೀಕೆಂಡ್‌ನಲ್ಲಿ ಮತ್ತೆ ಪಿಕಪ್ ಆಗುತ್ತವೆ ಎಂದು ಡಿಸ್ಟ್ರಿಬ್ಯೂಟರ್ಸ್‌ ಹೇಳುತ್ತಾರೆ.
ಸಲಾರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಡ್ರಾಪ್! 5ನೇ ದಿನ ಸಿನಿಮಾ ಗಳಿಸಿದ್ದೇಷ್ಟು? title=

Salaar Day 5 Box Office Collection: ಟಾಲಿವುಡ್‌ ಸ್ಟಾರ್‌ ಪ್ರಭಾಸ್‌ ಹಾಗೂ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಕಾಂಬಿನೇಷನ್ ಸಿನಿಮಾ 'ಸಲಾರ್' ಬಿಡುಗಡೆಯಾಗಿ 6ನೇ ದಿನಕ್ಕೆ ಕಾಲಿಟ್ಟಿದೆ. ಡಿಸೆಂಬರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕಿದ್ದರಿಂದ ಅದರ ಲಾಭವನ್ನು ಚೆನ್ನಾಗಿಯೇ ಬಳಸಿಕೊಂಡ ಚಿತ್ರತಂಡ, ನಿರಂತರ ನಾಲ್ಕು ದಿನಗಳ ರಜೆಯಲ್ಲಿ 'ಸಲಾರ್' ಅದ್ಭುತವಾಗಿಯೇ ಕಲೆಕ್ಷನ್ ಮಾಡಿತ್ತು. ಆದರೆ, ಐದನೇ ದಿನದ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. 

ಭಾರತದಲ್ಲಿ 'ಸಲಾರ್' ಮೊದಲ ದಿನ 90.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಎರಡನೇ ದಿನ 56.35 ಕೋಟಿ ರೂಪಾಯಿ, ಮೂರನೇ ದಿನ 62.05 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 46.30 ಕೋಟಿ ರೂಪಾಯಿ ಕಮಾಲ್‌ ಮಾಡಿತ್ತು. ಆದರೆ, ಐದನೇ ದಿನ ಯಾಕೋ ಸಲಾರ್‌ ಚಿತ್ರದ ಕಲೆಕ್ಷನ್ ಯಾಕೋ ಡ್ರಾಪ್ ಆಗಿದೆ. 

ಇದನ್ನೂ ಓದಿ: Salaar Craze: ನೇಪಾಳದಲ್ಲಿಯೂ ‘ಸಲಾರ್’ ಆರ್ಭಟ, ಟಿಕೆಟ್ ಖರೀದಿಗೆ ಮುಗಿಬಿದ್ದ ಜನ!

ಹೌದು..  ಕ್ರಿಸ್‌ಮಸ್  ಹಾಗೂ ಹೊಸ ವರ್ಷ ಸೆಲೆಬ್ರೇಷನ್‌ ಕಲೆಕ್ಷನ್‌ನಲ್ಲಿ ಏರಿಕೆ ಆಗಬೇಕಿದ್ದು, ಆದರೆ, 5ನೇ ದಿನ ಕೇವಲ 23.13 ಕೋಟಿ ರೂಪಾಯಿ ಗಳಿಸುವಷ್ಟೇ ಸಾಧ್ಯವಾಗಿದೆ. ಒಟ್ಟಾರೆ, ಈ ಐದು ದಿನಗಳಲ್ಲಿ ಭಾರತದಾದ್ಯಂತ ಈ ಸಿನಿಮಾದ ಕಲೆಕ್ಷನ್ 278.90 ಕೋಟಿ ರೂಪಾಯಿ ದಾಟಿದ್ದು, ಇನ್ನೊಂದು ದಿನದಲ್ಲಿ 300 ಕೋಟಿ ಕ್ಲಬ್ ಸೇರಲಿದೆ. 

ಎಲ್ಲಾ ಸಿನಿಮಾಗಳು ವೀಕ್‌ ಡೇಸ್‌ನಲ್ಲಿ ಡ್ರಾಪ್ ಆಗುವಂತೆ, 5ನೇ ದಿನ 'ಸಲಾರ್' ಕಲೆಕಷನ್‌ ಸಹ ಕಡಿಮೆಯಾಗಿದ್ದು, ವೀಕೆಂಡ್‌ನಲ್ಲಿ ಮತ್ತೆ ಪಿಕಪ್ ಆಗುತ್ತವೆ ಎಂದು ಡಿಸ್ಟ್ರಿಬ್ಯೂಟರ್ಸ್‌ ಹೇಳುತ್ತಾರೆ. ಅಂದ್ಹಾಗೆ 6ನೇ ದಿನ ಸಲಾರ್‌ ಅಡ್ವಾನ್ಸ್ ಬುಕಿಂಗ್ ಪಾಸಿಟಿವ್ ಆಗಿದ್ದು, ತೆಲುಗಿನಲ್ಲಿ 6ನೇ ದಿನ 2.3 ಕೋಟಿ ರೂಪಾಯಿ, ಹಿಂದೆ ಬೆಲ್ಟ್‌ನಲ್ಲಿ 16.4 ಲಕ್ಷ ರೂಪಾಯಿ, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ 76.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. 

ಇದನ್ನೂ ಓದಿ: ಮಾಲ್‌ನಲ್ಲಿ ಸಲಾರ್‌ ಸಿನಿಮಾ ನೋಡಲು ಮಕ್ಕಳನ್ನು ತಡೆದಿದಕ್ಕೆ ತಾಯಿ ಕಿರಿಕ್: ವಿಡಿಯೋ ವೈರಲ್!

ಇನ್ನೊಂದು ಕಡೆ 'ಸಲಾರ್' ಸಿನಿಮಾ ವಿಶ್ವದಾದ್ಯಂತ 391.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಭಾರತದಲ್ಲಿ 301.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ವಿದೇಶದಿಂದ 90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.  ಆದರೆ, ಸಲಾರ್ ಬಿಡುಗಡೆಯಾದ ಮೂರನೇ ದಿನವೇ 402 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಪೋಸ್ಟ್ ಹರಿದಾಡಿತ್ತು. ಈ ಕಲೆಕ್ಷನ್ ಹೀಗೆ ಎರಡು ವಾರ ಮುಂದುವರೆದರೆ, 600 ಕೋಟಿ ರೂಪಾಯಿಗೇನು ಮೋಸವಿರಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News