ಸೈಫ್ ಅಲಿ ಖಾನ್‌ ಚಾಕೂ ಇರಿತಕ್ಕೂ ಶಾರೂಖ್‌ ಖಾನ್‌ಗೆ ಬಂದ ಬೆದರಿಕೆಗೂ ಇದೇ ನಂಟು! ಸತ್ಯ ತಿಳಿದು ಬೆಚ್ಚಿಬಿದ್ದ ಬಾಲಿವುಡ್‌ ಇಂಡಸ್ಟ್ರಿ

Saif Ali Khan News: ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಈ ಘಟನೆಗೂ ಶಾರುಖ್‌ಗೆ ಇರುವ ಬೆದರಿಕೆಗೂ ಒಂದು ನಂಟು ಹೊರಬಿದ್ದಿದೆ. 

Written by - Chetana Devarmani | Last Updated : Jan 18, 2025, 09:28 AM IST
  • ಸೈಫ್ ಅಲಿ ಖಾನ್ ಮೇಲೆ ಹಲ್ಲೆ
  • ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಫೋಟೋ
  • ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಯಾರು?
ಸೈಫ್ ಅಲಿ ಖಾನ್‌ ಚಾಕೂ ಇರಿತಕ್ಕೂ ಶಾರೂಖ್‌ ಖಾನ್‌ಗೆ ಬಂದ ಬೆದರಿಕೆಗೂ ಇದೇ ನಂಟು! ಸತ್ಯ ತಿಳಿದು ಬೆಚ್ಚಿಬಿದ್ದ ಬಾಲಿವುಡ್‌ ಇಂಡಸ್ಟ್ರಿ title=
Saif Ali Khan and Shah Rukh Khan

Saif Ali Khan Stab Case Updates: ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಶಾಕಿಂಗ್‌ ಅಪ್‌ಡೇಟ್‌ ಒಂದು ಹೊರಬಿದ್ದಿದೆ. ಜನವರಿ 16 ರಂದು ಒಬ್ಬ ವ್ಯಕ್ತಿ ಸೈಫ್ ಅಲಿ ಖಾನ್‌ ಮತ್ತು ಕರೀನಾ ಕಪೂರ್ ಅವರ ಮನೆಗೆ ಪ್ರವೇಶಿಸಿದ್ದಾನೆ. ಮನೆಗೆ ಪ್ರವೇಶಿಸಿದ ಈ ವ್ಯಕ್ತಿ ಸೈಫ್ ಅಲಿ ಖಾನ್‌ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ಸೈಫ್ ಅಲಿ ಖಾನ್ ಅವರ ಮನೆಗೆ ಪ್ರವೇಶಿಸುವ ಮೊದಲು ಈ ದಾಳಿಕೋರನು ಶಾರುಖ್ ಖಾನ್ ಅವರ ಮನೆಗೆ ಬಳಿ ಹೋಗಿದ್ದನು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಶಾರುಖ್ ಖಾನ್ ಅವರ ಮನೆ ಮನ್ನತ್ ಒಳಗೆ ಪ್ರವೇಶಿಸಲು ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಶಾರುಖ್ ಮನೆ ಒಳಗೆ ನುಗ್ಗುವ ಯತ್ನ ಮಾಡಿದ್ದು ಸೈಫ್ ಮೇಲೆ ದಾಳಿ ಮಾಡಿದ ವ್ಯಕ್ತಿ ಇದೇ ವ್ಯಕ್ತಿ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಫಿನಾಲೆಗೆ ಹನುಮಂತನ ಜೊತೆ ಮತ್ತಿಬ್ಬರು ಸ್ಪರ್ಧಿಗಳು ಎಂಟ್ರಿ.. ಫೈನಲಿಸ್ಟ್‌ ಆದ ಮೊದಲ ಲೇಡಿ ಕಂಟೆಸ್ಟಂಟ್‌ ಇವರೇ ನೋಡಿ!

ಜನವರಿ 14 ರಂದು ರಿಟ್ರೀಟ್ ಹೌಸ್‌ನ ಹಿಂಭಾಗದಲ್ಲಿ ಆರರಿಂದ ಎಂಟು ಅಡಿ ಉದ್ದದ ಕಬ್ಬಿಣದ ಏಣಿಯನ್ನು ಇರಿಸಿ ಶಾರುಖ್ ಖಾನ್ ಅವರ ಮನೆ ಮನ್ನತ್ ಒಳಗೆ ನೋಡಲು ಪ್ರಯತ್ನಿಸಿದ್ದಾನೆ. ಶಾರುಖ್ ಖಾನ್ ಮನೆಯನ್ನು ವೀಕ್ಷಿಸುತ್ತಿರುವ ವ್ಯಕ್ತಿಯೇ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಶಾರುಖ್ ಖಾನ್ ಮನೆಯ ಸಿಸಿಟಿವಿ ದೃಶ್ಯ !

ಪೊಲೀಸರ ಪ್ರಕಾರ, ಶಾರುಖ್ ಖಾನ್ ಮನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿರುವ ವ್ಯಕ್ತಿಯ ಎತ್ತರ ಮತ್ತು ಮೈಕಟ್ಟು ಸೈಫ್ ಅಲಿ ಖಾನ್‌ ಕಟ್ಟಡದ ಮೆಟ್ಟಿಲುಗಳ ಮೇಲೆ ಕಾಣುವ ವ್ಯಕ್ತಿಯ ಎತ್ತರಕ್ಕೆ ಹೊಂದಿಕೆಯಾಗುತ್ತದೆ. ಮಾಹಿತಿಯ ಪ್ರಕಾರ, ಕೃತ್ಯದಲ್ಲಿಹ ಕಬ್ಬಿಣದ ಏಣಿಯನ್ನು ಒಬ್ಬ ವ್ಯಕ್ತಿ ಎತ್ತಲು ಸಾಧ್ಯವಿಲ್ಲದ ಕಾರಣ ಆ ವ್ಯಕ್ತಿ ಒಬ್ಬಂಟಿಯಾಗಿರಲು ಸಾಧ್ಯವಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಆ ಭಾರವಾದ ಏಣಿಯನ್ನು ಎತ್ತಲು ಕನಿಷ್ಠ ಎರಡು-ಮೂರು ಜನರು ಬೇಕಾಗುತ್ತಾರೆ. ಹೀಗಾಗಿ ಈ ಕೃತ್ಯದಲ್ಲಿ ಮೂವರು ಆರೋಪಿಗಳಿರಬಹುದು ಎನ್ನಲಾಗ್ತಿದೆ. 

ಶಾರುಖ್ ಖಾನ್ ಮನೆ ಪರಿಶೀಲನೆ!

ಸೈಫ್ ಮೇಲಿನ ದಾಳಿಯ ನಂತರ, ಪೊಲೀಸ್ ತಂಡ ಮತ್ತೆ ಶಾರುಖ್ ಖಾನ್ ಮನೆಗೆ ಹೋಗಿ ಈ ವಿಷಯವನ್ನು ತನಿಖೆ ಮಾಡಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಯಾವುದೇ ದೂರು ದಾಖಲಿಸಿಲ್ಲ. ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಏಣಿಯ ಕಳ್ಳತನದ ವರದಿ ಎಲ್ಲಿಯಾದರೂ ದಾಖಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಶಾರುಖ್ ಖಾನ್ ಪ್ರಕರಣ ಏನಾಗಿತ್ತು?

ಇತ್ತೀಚೆಗೆ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿರುವ ಶಾರುಖ್ ಅವರ ಐಷಾರಾಮಿ ಬಂಗಲೆ ಮನ್ನತ್ ಒಳಗೆ ವ್ಯಕ್ತಿಯೊಬ್ಬ ಇಣುಕಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಇದಾದ ನಂತರ, ಪೊಲೀಸರು ಶಾರುಖ್ ಖಾನ್‌ ಅವರ ಸುರಕ್ಷತೆ ದೃಷ್ಟಿಯಿಂದ ಅವರ ಮನೆಯನ್ನು ಸಹ ಪರಿಶೀಲಿಸಿದ್ದಾರೆ.

ಸೈಫ್ ಈಗ ಹೇಗಿದ್ದಾರೆ?

ಪಟೌಡಿ ರಾಜಮನೆತನಕ್ಕೆ ಸೇರಿದ ಸೈಫ್‌ ಅಲಿ ಖಾನ್‌ ಅವರು ಚಾಕೂ ಇರಿತಕ್ಕೊಳಗಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಬಾಂದ್ರಾದಲ್ಲಿರುವ ಸೈಫ್ ಅವರ ಮನೆಗೆ ನುಗ್ಗಿದ ದಾಳಿಕೋರ 2.5 ಇಂಚಿನ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಗಾಯಗೊಂಡ ಸೈಫ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಅವರಿಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು. ಈ ಶಸ್ತ್ರಚಿಕಿತ್ಸೆಯಲ್ಲಿ ಗಾಯದಿಂದ 2.5 ಇಂಚಿನ ಚಾಕುವನ್ನು ಹೊರತೆಗೆಯಲಾಗಿದೆ. ಇದೀಗ ನಟ ಸೈಫ್‌ ಅಲಿ ಖಾನ್‌ ಆರೋಗ್ಯ ಕೊಂಚ ಸುಧಾರಿಸಿದೆ. 

ಇದನ್ನೂ ಓದಿ: ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣ..! ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಮನೆ ಕೆಲಸದವರು..

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News