ದೇವಸ್ಥಾನದಲ್ಲಿ ಫೊಟೋ ಶೂಟ್‌, ರೀಲ್ಸ್‌..! ವಿವಾದಕ್ಕೆ ಸಿಲುಕಿದ ಸ್ಟಾರ್‌ ಆ್ಯಂಕರ್..

Anchor Sreemukhi : ಈ ಹಿಂದೆ ದೇವರ ವಿಚಾರವಾಗಿ ಹೇಳಿಕೆ ನೀಡಿ ವಿವಾದದಲ್ಲಿ ಸಿಲುಕಿದ್ದ ಖ್ಯಾತ ನಿರೂಪಕಿ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.. ಪ್ರಸಿದ್ಧ ದೇವಸ್ಥಾನದಲ್ಲಿ ಫೋಟೋ ಶೂಟ್ ಮತ್ತು ರೀಲ್ಸ್‌ ವಿವಾದಕ್ಕೆ ಕಾರಣವಾಗುತ್ತಿದೆ.. ಇದರಿಂದಾಗಿ ನೆಟಿಜನ್‌ಗಳು ಆಂಕರ್‌ ವಿರುದ್ಧ ಕಿಡಿಕಾರಿದ್ದಾರೆ

Written by - Krishna N K | Last Updated : Jan 17, 2025, 05:03 PM IST
    • ನಟಿ ಮತ್ತು ಆಂಕರ್ ಶ್ರೀಮುಖಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
    • ಕನಕದುರ್ಗಾ ಅಮ್ಮನವರ ದೇವಸ್ಥಾನದಲ್ಲಿ ನಟಿ ರೀಲ್ಸ್‌ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ..
    • ಗೋಪುರದ ಮುಂಭಾಗದಲ್ಲಿ ಶ್ರೀಮುಖಿ ಫೋಟೋಶೂಟ್ ಮತ್ತು ರೀಲ್ ಗಳನ್ನು ಮಾಡಿದ್ದಾರೆ.
ದೇವಸ್ಥಾನದಲ್ಲಿ ಫೊಟೋ ಶೂಟ್‌, ರೀಲ್ಸ್‌..! ವಿವಾದಕ್ಕೆ ಸಿಲುಕಿದ ಸ್ಟಾರ್‌ ಆ್ಯಂಕರ್..  title=

Sreemukhi controversy : ನಟಿ ಮತ್ತು ಆಂಕರ್ ಶ್ರೀಮುಖಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಪ್ರಸಿದ್ಧ ದೇವಾಲಯ ವಿಜಯವಾಡದ ಕನಕದುರ್ಗಾ ಅಮ್ಮನವರ ದೇವಸ್ಥಾನದಲ್ಲಿ ನಟಿ ರೀಲ್ಸ್‌ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.. ದೇವಸ್ಥಾನದ ಆವರಣದಲ್ಲಿ.. ಗೋಪುರದ ಮುಂಭಾಗದಲ್ಲಿ ಶ್ರೀಮುಖಿ ಫೋಟೋಶೂಟ್ ಮತ್ತು ರೀಲ್ ಗಳನ್ನು ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಶ್ರೀಮುಖಿ ಬುಧವಾರ ವಿಜಯವಾಡದ ಇಂದ್ರಕಿಲಾದ್ರಿಯಲ್ಲಿರುವ ಕನಕದುರ್ಗಾ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಶ್ರೀಮುಖಿ ದೇವಸ್ಥಾನದಲ್ಲಿ ಕೆಲವು ಭಕ್ತರೊಂದಿಗೆ ಚಿತ್ರಗಳನ್ನು ತೆಗೆದುಕೊಂಡರು. 

ಇದನ್ನೂ ಓದಿ:ಆ ನಟ ಬಲವಂತವಾಗಿ ಕಿಸ್ ಮಾಡಿದ್ದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ: ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆ

ನಂತರ ಶ್ರೀಮುಖಿ, ಮುಕ್ಕು ಅವಿನಾಶ್ ಮತ್ತು ಆರ್ ಜೆ ಚೈತು ಮಾಧ್ಯಮಗಳೊಂದಿಗೆ ಮಾತನಾಡಿದರು. ಕನಕದುರ್ಮ ಅಮ್ಮನವರ ದರ್ಶನಕ್ಕೆ ಸಂತಸವಾಗುತ್ತಿದೆ ಎಂದರು. ವಿಜಯವಾಡಕ್ಕೆ ಬಂದಾಗಲೆಲ್ಲ ಅಮ್ಮನ ದರ್ಶನ ಮಾಡುತ್ತಾರೆ ಎಂದು ಸಂತಸ ವ್ಯಕ್ತ ಪಡಿಸಿದರು.. ಇಲ್ಲಿವರೆಗೂ ಎಲ್ಲವು ಚನ್ನಾಗಿತ್ತು..

ಆದರೆ ಶ್ರೀಮುಖಿ ದೇವಸ್ಥಾನದಲ್ಲಿ ಮಾಡಿದ ರೀಲ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲೆ ವಿವಾದ ಬುಗಿಲೆದ್ದಿದೆ.ದೇವಸ್ಥಾನದ ರಾಜಗೋಪುರದ ಮುಂದೆ ಶ್ರೀಮುಖಿ ರೀಲುಗಳನ್ನು ಮಾಡಿದ್ದಾರೆ.. ಫೋಟೋಗಳನ್ನೂ ತೆಗೆದುಕೊಂಡಿದ್ದಾರೆ.. ಆದರೆ ಈ ದೇವಸ್ಥಾನದಲ್ಲಿ ವಿಡಿಯೋ ಮತ್ತು ಫೋಟೋ ತೆಗೆಯುವುದು ನಿಷೇಧವಿದೆ..

ಇದನ್ನೂ ಓದಿ:ಪುನರ್ಜನ್ಮದ ಕಥೆ ಹೇಳಲು "ಬಂಡೆಕವಿ" ಆಗಮನ: ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಫೆಬ್ರವರಿಯಿಂದ ಚಿತ್ರೀಕರಣ

ಈ ಪೋಸ್ಟ್‌ಗೆ ನೆಟಿಜನ್‌ಗಳು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ಇಂತಹ ರೀಲು, ಫೋಟೋ ತೆಗೆಯುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಈ ಹಿಂದೆ ನಟಿ ರಾಮ ಲಕ್ಷ್ಮಣರ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು.. ನಂತರ ಕ್ಷಮೆಯಾಚಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News